Get Updates
Get notified of breaking news, exclusive insights, and must-see stories!

ಟ್ವಿಟ್ಟರ್ ನಲ್ಲಿ ಯಾರನ್ನೂ ಫಾಲೋ ಮಾಡಲಿಲ್ಲ! ಅದು ಸುಷ್ಮಾ ತಾಕತ್ತು!'

ನವದೆಹಲಿ, ಆಗಸ್ಟ್ 07: ಮಾಜಿ ವಿದೇಶಾಂಗ ಸಚಿವೆ ದಿ.ಸುಷ್ಮಾ ಸ್ವರಾಜ್ ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಎಷ್ಟೋ ಸಮಸ್ಯೆಗಳಿಗೆ ಕುಳಿತಲ್ಲೇ ಪರಿಹಾರ ನೀಡಿದವರು. ಟ್ವಿಟ್ಟರ್ ನಲ್ಲಿ ಸಾಕಷ್ಟು ಸಕ್ರಿಯರಾಗಿದ್ದ ಅವರಿಗೆ 13.2 ಮಿಲಿಯನ್ ಫಾಲೋವರ್ಸ್ ಇದ್ದರು, ಆದರೆ ಅವರು ಮಾತ್ರ ಒಬ್ಬರನ್ನೂ ಟ್ವಿಟ್ಟರ್ ನಲ್ಲಿ ತಾವಾಗಿಯೇ ಫಾಲೋ ಮಾಡುತ್ತಿರಲಿಲ್ಲ! ಅದು ಸುಷ್ಮಾ ಸ್ವರಾಜ್ ತಾಕತ್ತು!

ಚಿತ್ರಗಳಲ್ಲಿ ಸುಷ್ಮಾ ಸ್ವರಾಜ್ ಅಂತಿಮ ದರ್ಶನ

ಪಿಆರ್ ಫರ್ಮ್ ಬರ್ಸ್ಟಾನ್ ಮಾರ್ಸ್ಟೆಲ್ಲರ್ ಬಿಡುಗಡೆ ಮಾಡಿದ್ದ ಟ್ವಿಪ್ಲಾಮಸಿ 2018 ವರದಿಯ ಪ್ರಕಾರ ಜಗತ್ತಿನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿರುವ ಮೊದಲ ಮಹಿಳೆ ಸುಷ್ಮಾ ಸ್ವರಾಜ್!

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಆದಿಯಾಗಿ ಘಟಾನುಘಟಿ ನಾಯಕರೂ ತಾವಾಗಿಯೇ ಸುಷ್ಮಾ ಅವರನ್ನು ಟ್ವಿಟ್ಟರ್ ನಲ್ಲಿ ಫಾಲೋ ಮಾಡುತ್ತಿದ್ದರು. ಆದರೆ ಅವರಾಗಿಯೇ ಯಾರನ್ನೂ ಫಾಲೋ ಮಾಡಲಿಲ್ಲ!

Sushma Swaraj Followed No One On Twitter

ಒಬ್ಬ ಸಾಮಾನ್ಯ ವ್ಯಕ್ತಿ ಕಷ್ಟದಲ್ಲಿದ್ದರೂ ಟ್ವಿಟ್ಟರ್ ಮೂಲಕ ಅದನ್ನು ಹಂಚಿಕೊಂಡರೆ ತಕ್ಷಣವೇ ಸ್ಪಂದಿಸುತ್ತಿದ್ದ ಮಾತೃಹೃದಯಿ ಸುಷ್ಮಾ, ವಿದೇಶದಲ್ಲಿ ಸಂಕಷ್ಟ ಅನುಭವಿಸುತ್ತಿದ್ದ ಎಷ್ಟೋ ಭಾರತೀಯರಿಗೆ ಟ್ವಿಟ್ಟರ್ ಎಂಬ ಪ್ರಭಾವಿ ಸಂವಹನ ಮಾಧ್ಯಮದ ಮೂಲಕವೇ ನೆರವು ನೀಡಿದ್ದರು.

Sushma Swaraj Followed No One On Twitter

67 ವರ್ಷ ವಯಸ್ಸಿನ ಸುಷ್ಮಾ ಸ್ವರಾಜ್ ಹೃದಯಾಘಾತದಿಂದ ಆ.06 ರಂದು ರಾತ್ರಿ ಕೊನೆಯುಸಿರೆಳೆದರು. ಉತ್ಸಾಹದ ಚಿಲುಮೆಯಾಗಿದ್ದ ಅವರ ಅಗಲಿಕೆ ರಾಷ್ಟ್ರದಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ಇರುವ ಅವರ ಅಭಿಮಾನಿಗಳ ಹೃದಯದಲ್ಲಿ ನಿರ್ವಾತ ಸೃಷ್ಟಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+