ಅಮ್ಮನ ಕೊನೆಯ ಆಸೆ ಈಡೇರಿಸಿದ ಸುಷ್ಮಾ ಸ್ವರಾಜ್ ಮಗಳು
Recommended Video
ನವದೆಹಲಿ, ಸೆಪ್ಟೆಂಬರ್ 27: ನರೇಂದ್ರ ಮೋದಿ ಅವರ ಮೊದಲ ಅವಧಿಯ ಸರ್ಕಾರದಲ್ಲಿ ಜನಪ್ರಿಯ ಸಚಿವರಾಗಿದ್ದ ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ನಮ್ಮನ್ನು ಅಗಲಿ ಎರಡು ತಿಂಗಳಾಗುತ್ತಾ ಬಂದಿದೆ. ಇಂದಿನ ರಾಜಕೀಯ ಸನ್ನಿವೇಶದಲ್ಲಿ ಸುಷ್ಮಾ ಅವರ ಅನುಪಸ್ಥಿತಿ ತೀವ್ರವಾಗಿ ಕಾಡುತ್ತಿದೆ ಎಂಬ ಅಭಿಪ್ರಾಯವನ್ನು ಅನೇಕರು ಹೊರಹಾಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸುಷ್ಮಾ ಅವರನ್ನು ಮತ್ತೆ ನೆನಪಿಸುವ ಮೂಲಕ ಅವರ ಮಗಳು ಹಾಗೂ ಪತಿ ಅವರ ಅಭಿಮಾನಿಗಳನ್ನು ಭಾವುಕರನ್ನಾಗಿಸಿದ್ದಾರೆ.
ಸುಷ್ಮಾ ಸ್ವರಾಜ್ ಅವರ ಕೊನೆಯ ಆಸೆಯನ್ನು ಅವರ ಮಗಳು ಬಾನ್ಸುರಿ ಶುಕ್ರವಾರ ಈಡೇರಿಸಿದ್ದಾರೆ. ಈ ಸಂಗತಿಯನ್ನು ಸುಷ್ಮಾ ಅವರ ಪತಿ ಸ್ವರಾಜ್ ಕೌಶಲ್ ಹೃದಯಸ್ಪರ್ಶಿ ಸಂದೇಶದ ಮೂಲಕ ಹಂಚಿಕೊಂಡಿದ್ದಾರೆ.
ಸುಷ್ಮಾ ಅವರು ಕೊನೆಯುಸಿರೆಳೆಯುವ ಕೆಲವೇ ಗಂಟೆಗಳ ಮೊದಲು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ 370ನೇ ವಿಧಿಯನ್ನು ರದ್ದುಗೊಳಿಸಿದ್ದ ಎನ್‌ಡಿಎ ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿದ್ದರು. ಈ ದಿನಕ್ಕಾಗಿ ಜೀವಮಾನವಿಡೀ ಕಾದಿದ್ದೆ ಎಂದು ಸುಷ್ಮಾ ಟ್ವೀಟ್ ಮಾಡಿದ್ದರು. ದುರಂತವೆಂದರೆ ಹೀಗೆ ಟ್ವೀಟ್ ಮಾಡಿದ್ದ ಕೆಲವೇ ಗಂಟೆಗಳಲ್ಲಿ ಸುಷ್ಮಾ ನಿಧನರಾಗಿದ್ದರು. ಹೀಗಾಗಿ ಈ ಟ್ವೀಟ್ ಅನ್ನೇ ಅನೇಕರು ಸುಷ್ಮಾ ಅವರ ಕೊನೆಯ ಆಸೆ ಎಂದು ಭಾವಿಸಿದ್ದರು. ಆದರೆ ಅವರ ಪತಿ ಸುಷ್ಮಾ ಅವರ ಕೊನೆಯ ಆಸೆ ಬೇರೆಯದೇ ಇತ್ತು ಎಂದು ತಿಳಿಸಿದ್ದಾರೆ.

ಒಂದು ರೂಪಾಯಿ ಕೊನೆ ಆಸೆ!
ಪಾಕಿಸ್ತಾನದಲ್ಲಿ ಗೂಢಚಾರಿಕೆ ನಡೆಸಿದ ಆರೋಪದಲ್ಲಿ ಮರಣದಂಡನೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ಅವರ ಪರ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದಿಸಿದ್ದ ವಕೀಲ ಹರೀಶ್ ಸಾಳ್ವೆ ಅವರು, ತಮ್ಮ ವಾದ ಮಂಡನೆಗೆ ಕೇವಲ 1 ರೂ. ಶುಲ್ಕ ನೀಡುವಂತೆ ಸುಷ್ಮಾ ಸ್ವರಾಜ್ ಅವರಿಗೆ ಹೇಳಿದ್ದರು. ಸಾಳ್ವೆ ಅವರಿಗೆ ಈ ಒಂದು ರೂಪಾಯಿಯನ್ನು ನೀಡುವುದು ಸುಷ್ಮಾ ಕೊನೆಯ ಆಸೆಯಾಗಿತ್ತು.

ನಿನ್ನ ಮಗಳು ಆಸೆ ಈಡೇರಿಸಿದ್ದಾಳೆ
'ನಿನ್ನ ಕೊನೆಯ ಆಸೆಯನ್ನು ನಿನ್ನ ಮಗಳು ಬಾನ್ಸುರಿ ಇಂದು ಈಡೇರಿಸಿದ್ದಾಳೆ. ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ವಾದಿಸಿದ್ದ ಹರೀಶ್ ಸಾಳ್ವೆ ಅವರಿಗೆ ನೀನು ನೀಡಬೇಕಿದ್ದ 1 ರೂ. ಹಣವನ್ನು ಆಕೆ ಅವರಿಗೆ ಪಾವತಿಸಿದ್ದಾಳೆ' ಎಂದು ಫೋಟೋದೊಂದಿಗೆ ಸ್ವರಾಜ್ ಕೌಶಲ್ ಟ್ವೀಟ್ ಮಾಡಿದ್ದಾರೆ.

ಕರೆ ಮಾಡಿದ್ದ ಹತ್ತೇ ನಿಮಿಷದಲ್ಲಿ...
ಸುಷ್ಮಾ ಸ್ವರಾಜ್ ಅವರು ಆಗಸ್ಟ್ 6ರಂದು ಮೃತಪಟ್ಟಿದ್ದರು. ಅದಕ್ಕೂ ಕೆಲವೇ ಗಂಟೆಗಳ ಮುನ್ನ ಹರೀಶ್ ಸಾಳ್ವೆ ಅವರಿಗೆ ಕರೆ ಮಾಡಿದ್ದ ಸುಷ್ಮಾ ಅವರ 1 ರೂ. ಶುಲ್ಕವನ್ನು ಸ್ವೀಕರಿಸುವಂತೆ ಕೋರಿದ್ದರು. ಆದರೆ, ಅದಾಗಿ ಹತ್ತೇ ನಿಮಿಷಗಳಲ್ಲಿ ಸುಷ್ಮಾ ಹೃದಯಾಘಾತಕ್ಕೆ ಒಳಗಾಗಿದ್ದರು.

ಸಂಜೆ 6 ಗಂಟೆಗೆ ಬರುವಂತೆ ಹೇಳಿದ್ದ ಸುಷ್ಮಾ
''ಸುಷ್ಮಾ ಸ್ವರಾಜ್ ಅವರು ರಾತ್ರಿ 8.50ರ ಸುಮಾರಿಗೆ ಕರೆ ಮಾಡಿದ್ದರು. ಅದು ಅವರೊಂದಿಗಿನ ಭಾವನಾತ್ಮಕ ಸಂಭಾಷಣೆಯಾಗಿತ್ತು. 'ನೀವು ಇಲ್ಲಿಗೆ ಬಂದು ನನ್ನನ್ನು ಭೇಟಿಯಾಗಬೇಕು. ನೀವು ಗೆದ್ದಿರುವ ಪ್ರಕರಣಕ್ಕೆ ನಿಮಗೆ ಒಂದು ರೂಪಾಯಿಯನ್ನು ನಾನು ಕೊಡಬೇಕಿದೆ' ಎಂದು ಹೇಳಿದ್ದರು. ಅದಕ್ಕೆ ನಾನು 'ಖಂಡಿತಾ, ಆ ಅಮೂಲ್ಯ ಶುಲ್ಕವನ್ನು ಪಡೆದುಕೊಳ್ಳಲು ನಾನು ಬರುತ್ತೇನೆ' ಎಂದಿದ್ದೆ. ಮರುದಿನ ಸಂಜೆ 6 ಗಂಟೆಗೆ ಬನ್ನಿ ಎಂದು ಸುಷ್ಮಾ ಹೇಳಿದ್ದರು'' ಎಂಬುದಾಗಿ ಸಾಳ್ವೆ ನೆನಪಿಸಿಕೊಂಡಿದ್ದರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications