Get Updates
Get notified of breaking news, exclusive insights, and must-see stories!

ಸುಷ್ಮಾ ಸ್ವರಾಜ್ ಹುಟ್ಟುಹಬ್ಬ; ಭಾವುಕರಾಗಿ ಪೋಸ್ಟ್‌ ಹಾಕಿದ ಜನಾರ್ದನ ರೆಡ್ಡಿ

ಬೆಂಗಳೂರು, ಫೆಬ್ರವರಿ 14: ಬುಧವಾರ ಬಿಜೆಪಿ ನಾಯಕಿ, ವಿದೇಶಾಂಗ ಖಾತೆಯ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಹುಟ್ಟುಹಬ್ಬ. ಕರ್ನಾಟಕದ ಜೊತೆ ಅವರಿಗೆ ನಂಟಿದೆ. ಹುಟ್ಟುಹಬ್ಬದ ಅಂಗವಾಗಿ ಮಾಜಿ ಸಚಿವ, ಶಾಸಕ ಜನಾರ್ದನ ರೆಡ್ಡಿ ಭಾವುಕ ಪೋಸ್ಟ್‌ ಒಂದನ್ನು ಹಾಕಿದ್ದಾರೆ.

1999ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ ಬಳ್ಳಾರಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ಸೋನಿಯಾ ಗಾಂಧಿ ಎದುರಾಳಿಯಾಗಿ ಸುಷ್ಮಾ ಸ್ವರಾಜ್ ಬಳ್ಳಾರಿಯಲ್ಲಿ ಚುನಾವಣೆಗೆ ನಿಂತಿದ್ದರು. ಅವರು ಚುನಾವಣೆಯಲ್ಲಿ ಸೋತರು ಕರ್ನಾಟಕದಲ್ಲಿ ಪಕ್ಷದ ವರ್ಚಸ್ಸು ಹೆಚ್ಚಿಸಲು ನೆರವಾದರು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ.

 Janardhana Reddy Post For Sushma Swaraj Birthday

ಬಳ್ಳಾರಿಯಲ್ಲಿ ಸುಷ್ಮಾ ಸ್ವರಾಜ್ ಚುನಾವಣೆಗೆ ನಿಂತಾಗ ಅವರನ್ನು ಗೆಲ್ಲಿಸಬೇಕು ಎಂದು ಪಣ ತೊಟ್ಟು ನಿಂತವರು ಜನಾರ್ದನ ರೆಡ್ಡಿ ಮತ್ತು ಬಿ. ಶ್ರೀರಾಮುಲು. 'ನನ್ನ ರಾಜಕೀಯ ಜೀವನಕ್ಕೆ ಜನ್ಮ ನೀಡಿದವರು ತಾಯಿ ಸುಷ್ಮಾ ಸ್ವರಾಜ್' ಎಂದು ಜನಾರ್ದನ ರೆಡ್ಡಿ ಹೇಳುತ್ತಾರೆ. ಭಾವುಕರಾಗಿ ಅವರು ತಾಯಿಯ ಹುಟ್ಟು ಹಬ್ಬಕ್ಕೆ ಪೋಸ್ಟ್ ಹಾಕಿದ್ದಾರೆ.

ಜನಾರ್ದನ ರೆಡ್ಡಿ ಪೋಸ್ಟ್: ಭಾರತೀಯ ನಾರಿ ಸ್ವರೂಪದ ಪ್ರತಿರೂಪವಾಗಿರುವ ನನ್ನ ತಾಯಿ ಶ್ರೀಮತಿ ಸುಷ್ಮಾ ಸ್ವರಾಜ್ ಅವರಿಗೆ ಕೋಟಿ, ಕೋಟಿ ನಮನಗಳು...

ಅಪ್ರತಿಮ ಪಾಂಡಿತ್ಯ, ಅಪಾರ ದೇಶಭಕ್ತಿ, ಸಾಮಾಜಿಕ ಕಳಕಳಿ ಹಾಗೂ ತಮ್ಮ ಜೀವನದುದ್ದಕ್ಕೂ ಉತ್ತಮ ಮೌಲ್ಯ ಮತ್ತು ತತ್ವಗಳನ್ನು ಮೈಗೂಡಿಸಿಕೊಂಡ, ನನ್ನ ತಾಯಿ ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಜನ್ಮದಿನವಾದ ಇಂದು ತಾಯಿಯವರನ್ನು ಮನಃಪೂರ್ವಕವಾಗಿ ಸ್ಮರಿಸುತ್ತಾ, ಅವರಿಗೆ ಕೋಟಿ, ಕೋಟಿ ನಮನಗಳನ್ನು ಸಲ್ಲಿಸುತ್ತೇನೆ.

ನನಗೆ ಜನ್ಮ ಕೊಟ್ಟ ತಾಯಿ ರುಕ್ಮಿಣಮ್ಮ ಚಂಗಾರೆಡ್ಡಿ, ಆದರೆ ನನ್ನ ರಾಜಕೀಯ ಜೀವನಕ್ಕೆ ಜನ್ಮ ನೀಡಿದವರು ತಾಯಿ ಸುಷ್ಮಾ ಸ್ವರಾಜ್. ಅವರು ನನಗೆ ನನ್ನ ರಾಜಕೀಯ ಬದುಕಿನ ದಾರಿ ತೋರಿಸಿ, ಪ್ರೀತಿ, ವಿಶ್ವಾಸದಿಂದ ತಮ್ಮ ಮಡಿಲಲ್ಲಿ ಹಾಕಿಕೊಂಡು ಬೆಳೆಸಿದವರು.

ನಾನು ಪ್ರವಾಸೋದ್ಯಮ ಸಚಿವನಾಗಿದ್ದಾಗ ನಡೆದ ಹಂಪಿ ಉತ್ಸವದಲ್ಲಿ ತಾಯಿ ಸುಷ್ಮಾ ಸ್ವರಾಜ್ ಭಾಗವಹಿಸಿದ್ದರು. ಅವರು ಪ್ರತಿ ಬಾರಿ ಬಳ್ಳಾರಿಗೆ ಆಗಮಿಸಿದಾಗ ನನ್ನ ಧರ್ಮಪತ್ನಿ ಶ್ರೀಮತಿ ಲಕ್ಷ್ಮೀ ಅರುಣಾ ಎರಡು ದಿವಸಗಳ ಮುಂಚೆ ತಾಯಿ ಸುಷ್ಮಾ ಸ್ವರಾಜ್ ಅವರ ಆಗಮನಕ್ಕಾಗಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದರು. ಅವರು ಬಳ್ಳಾರಿಗೆ ಬರುವುದೆಂದರೆ ನಮಗೆ ದೊಡ್ಡ ಹಬ್ಬ, ಅವರೊಂದಿಗೆ ಕಳೆದ ಈ ಕ್ಷಣವು ನಮ್ಮೆಲ್ಲರ ಪೂರ್ವಜನ್ಮದ ಪುಣ್ಯವೆಂದೆ ಭಾವಿಸುತ್ತೇನೆ.

ತಾಯಿ ಸುಷ್ಮಾ ಸ್ವರಾಜ್ ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರು, ಅವರು ಹಾಕಿಕೊಟ್ಟ ದಾರಿ, ಅವರ ಆದರ್ಶ ಜೀವನ, ನಮ್ಮ ಜೀವನಕ್ಕೆ ದಾರಿ ದೀಪವಾಗಿದೆ. ಮತ್ತೊಮ್ಮೆ ಅವರ ಜನ್ಮದಿನವಾದ ಇಂದು ಮನಃಪೂರ್ವಕವಾಗಿ ಸ್ಮರಿಸುತ್ತಾ ಕೋಟಿ, ಕೋಟಿ ನಮನಗಳನ್ನು ಸಲ್ಲಿಸುತ್ತೇನೆ.
ಗೌರವಗಳೊಂದಿಗೆ... ಗಾಲಿ ಜನಾರ್ಧನ ರೆಡ್ಡಿ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.

ವರಮಹಾಲಕ್ಷ್ಮೀ ಹಬ್ಬ; 1999ರ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಸೋತರೂ ಸಹ ಅವರು ವರಮಹಾಲಕ್ಷ್ಮೀ ಹಬ್ಬಕ್ಕೆ ಬಳ್ಳಾರಿಗೆ ಆಗಮಿಸುತ್ತಿದ್ದರು. ಜನಾರ್ದನ ರೆಡ್ಡಿ ಮನೆಯಲ್ಲಿ ವರಮಹಾಲಕ್ಷ್ಮೀ ಪೂಜೆ ಮಾಡಿ ಹಬ್ಬವನ್ನು ಆಚರಿಸುತ್ತಿದ್ದರು.

ಚುನಾವಣೆಯಲ್ಲಿ ಸೋನಿಯಾ ಗಾಂಧಿ 414,650 ಮತಗಳನ್ನು ಪಡೆದು ಗೆಲುವು ಸಾಧಿಸಿದರು. 358,550 ಮತಗಳನ್ನು ಪಡೆದ ಸುಷ್ಮಾ ಸ್ವರಾಜ್ ಸೋಲು ಕಂಡಿದ್ದರು. ಆದರೆ ಅವರ ಬಳ್ಳಾರಿಯಲ್ಲಿನ ಸ್ಪರ್ಧೆಯು ಕರ್ನಾಟಕ ಬಿಜೆಪಿಗೆ ಶಕ್ತಿ ತುಂಬಿತು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತು.

ಬದಲಾದ ರಾಜಕೀಯ ವಿದ್ಯಮಾನದಲ್ಲಿ ಗಣಿ ಉದ್ಯಮಿ ಜನಾರ್ದನ ರೆಡ್ಡಿ ಬಿಜೆಪಿ ಬಿಟ್ಟರು. ಡಿಸೆಂಬರ್ 25, 2022 ರಂದು ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಸ್ಥಾಪನೆ ಮಾಡಿದರು. 2023ರ ಚುನಾವಣೆಯಲ್ಲಿ ಅವರು ಗಂಗಾವತಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಸುಷ್ಮಾ ಸ್ವರಾಜ್ ಭಾರತದ ಮಹಿಳಾ ರಾಜಕೀಯ ನಾಯಕಿಯರಲ್ಲಿ ಪ್ರಮುಖರು. ಮೇ 26, 2014ರಿಂದ ಮೇ 30, 2019ರವರೆಗೆ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಅವರು ಸೇವೆ ಸಲ್ಲಿಸಿದರು. ಹರಿಯಾಣದಲ್ಲಿ ಜನಿಸಿದ ಅವರು ವಿದ್ಯಾರ್ಥಿ ನಾಯಕಿಯಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು.

ಸುಷ್ಮಾ ಸ್ವರಾಜ್ ಹೃದಯ ಸ್ತಂಭನದಿಂದಾಗಿ ದೆಹಲಿಯ ಏಮ್ಸ್‌ನಲ್ಲಿ ಆಗಸ್ಟ್ 6, 2019 ರಂದು ನಿಧನ ಹೊಂದಿದರು. 2020ರಲ್ಲಿ ಮರಣೋತ್ತರವಾಗಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣವನ್ನು ನೀಡಲಾಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+