ಸ್ಪೈಜ್ ಜೆಟ್ ಪೈಲಟ್‌ ಹಣೆಗೆ ಗನ್ ಇಟ್ಟು, ಚಾಕುವಿನಿಂದ ಇರಿದು ದರೋಡೆ

ನವದೆಹಲಿ, ಜೂನ್ 4: ಕಾರಿನಲ್ಲಿ ಹೋಗುತ್ತಿದ್ದ ಸ್ಪೈಸ್ ಜೆಟ್ ವಿಮಾನ ಪೈಲಟ್‌ಗೆ ಹಣೆಗೆ ಗನ್ ಇಟ್ಟು ಬೆದರಿಸಿ ದರೋಡೆ ಮಾಡಿರುವ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ.

ಕೆಲಸಕ್ಕೆಂದು ಮಧ್ಯರಾತ್ರಿ 1 ಗಂಟೆಗೆ ಕಾರಿನಲ್ಲಿ ಏರ್‌ಪೋರ್ಟ್‌ಗೆ ತೆರಳುತ್ತಿದ್ದರು, ಸುಮಾರು 10 ಮಂದಿಯ ಗುಂಪೊಂದು ಬಂದು ಕಾರನ್ನು ಅಡ್ಡಗಟ್ಟಿ , ಗಾಜನ್ನು ಒಡೆದು ಹಣೆಗೆ ಗನ್ ಇಟ್ಟು ಬೆದರಿಸಿದ್ದಾರೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಫ್ಲೈ ಓವರ್ ಸಮೀಪ ಈ ಘಟನೆ ನಡೆದಿದೆ. ಗನ್ ಇಟ್ಟಿದ್ದಷ್ಟೇ ಅಲ್ಲದೆ ಚಾಕುವಿನಿಂದ ಇರಿಸು ಗಾಯಗೊಳಿಸಿದ್ದಾರೆ.

SpiceJet Pilot Robbed At Gunpoint Near IIT Delhi

ರಕ್ತಸಿಕ್ತ ಪೈಲಟ್ ಹಾಗೂ ಅವರ ಕಾರಿನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕಳೆದ ಕೆಲವು ದಿನಗಳಿಂದ ಐಐಟಿ ದೆಹಲಿಯ ಬಳಿ ಇಂಥದ್ದೇ ಸಾಕಷ್ಟು ಘಟನೆಗಳು ನಡೆದಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಸ್ಪೈಸ್ ಜೆಟ್ ಪೈಲಟ್ ಯುವರಾಜ್ ತೇವಾಟಿಯಾ ವಿಮಾನದ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಧ್ಯರಾತ್ರಿ ಒಂದು ಗಂಟೆಗೆ ಏರ್‌ಪೋರ್ಟ್ ತೆರಳುತ್ತಿದ್ದರು. ಅವರ ಕಚೇರಿ ಹಾಗೂ ಮನೆಗೆ ಕೇವಲ ಒಂದು ಕಿ.ಮೀ ಅಂತರವಿದೆ.

ಸುಮಾರು ಹತ್ತು ಮಂದಿ ಐದು ಬೈಕ್‌ಗಳಲ್ಲಿ ಬಂದು ಕಾರು ತಡೆದಿದ್ದಾರೆ. ಕಾರನ್ನು ಸುತ್ತುವರೆದು ಗಾಜನ್ನು ಪುಡಿ ಪುಡಿ ಮಾಡಿದ್ದಾರೆ. ಅವರ ಬಳಿ ಇದ್ದ 34 ಸಾವಿರ ರೂ.ವನ್ನು ದೋಚಿದ್ದಾರೆ.

ಗನ್ ಇಟ್ಟು ದರೋಡೆ ಮಾಡಿ ಹೋಗುವ ಮುನ್ನ ಚಾಕುವಿನಿಂದ ಇರಿದಿದ್ದಾರೆ. ಪೈಲಟ್ ಹೇಗೋ ಪೊಲೀಸರಿಗೆ ಕರೆ ಮಾಡಿದ್ದರು.ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ದೇವೇಂದ್ರ ಆರ್ಯ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+