ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಫೋಟ ಆರೋಪಿಗೆ ಆಶ್ರಯ: ದೆಹಲಿ ಪೇದೆ ವಿಚಾರಣೆ

By Kiran B Hegde
|
Google Oneindia Kannada News

ನವದೆಹಲಿ, ನ. 12: ಬರ್ದ್ವಾನ್ ಸ್ಫೋಟ ಪ್ರಕರಣದ ಆರೋಪಿಯೋರ್ವರಿಗೆ ಆಶ್ರಯ ನೀಡಿದ ಆರೋಪದ ಮೇಲೆ ಕೇಂದ್ರ ಸರ್ಕಾರದ ಸಶಸ್ತ್ರ ಪೊಲೀಸ್‌ ದಳಗಳಲ್ಲಿ ಒಂದಾದ ಸಶಸ್ತ್ರ ಸೀಮಾ ಬಲ (ಎಸ್ಎಸ್‌ಬಿ)ದ ಪೇದೆಯೋರ್ವರನ್ನು ಎನ್ಐಎ ವಿಚಾರಣೆಗೆ ಗುರಿಪಡಿಸಿದೆ.

burdwan-blast-1

ಸ್ಫೋಟದ ಆರೋಪಿ ಅಮ್ಜದ್ ಅಲಿ ಶೇಖ್ ಎಂಬಾತನಿಗೆ ಈ ಪೇದೆ ನವ ದೆಹಲಿಯಲ್ಲಿ ಆಶ್ರಯ ನೀಡಿದ್ದರು ಎಂದು ಆರೋಪಿಸಲಾಗಿದೆ.

ಸ್ಫೋಟ ಸಂಭವಿಸಿದ ತಕ್ಷಣ ದೆಹಲಿಗೆ ದೌಡಾಯಿಸಿದ್ದಾಗಿ ಆರೋಪಿ ಶೇಖ್ ತಿಳಿಸಿದ್ದು, ದೆಹಲಿಗೆ ಬಂದ ನಂತರ ಸುಮಾರು ಒಂದು ವಾರ ಕಾಲ ಅಲ್ಲಿಯೇ ತಂಗಿದ್ದಾಗಿಯೂ ಬಾಯಿ ಬಿಟ್ಟಿದ್ದಾನೆ.

ನಮ್ಮ ಗುರಿ ಭಾರತ ಅಲ್ಲ, ಬಾಂಗ್ಲಾದೇಶದ ಅವಾಮಿ ಲೀಗ್ ಪಕ್ಷ ಮಾತ್ರ. ಆದರೆ, ನಾವು ಪಶ್ಚಿಮ ಬಂಗಾಳವನ್ನು ಕಾರ್ಯಯೋಜನೆ ರೂಪಿಸಲು ಹಾಗೂ ಜಾರಿಗೊಳಿಸುವ ಕೇಂದ್ರವಾಗಿಟ್ಟುಕೊಂಡಿದ್ದೆವು ಎಂದು ಶೇಖ್ ವಿಚಾರಣೆಯಲ್ಲಿ ತಿಳಿಸಿದ್ದಾನೆ.

English summary
National Investigating Agency (NIA) on Tuesday, Nov 11 interrogated a Sashastra Seema Bal (SSB) constable who has been accused of sheltering an accused of the Burdhwan blast case. According to sources, the SSB constable allegedly had given shelter to the blast accused in Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X