ಪ್ರಧಾನಿ ಮೋದಿಗೆ ಬೇಕಂತೆ ನಿಮ್ಮ ಮೂರು ಪೀಳಿಗೆಯ ಸೆಲ್ಫಿ!

ಅಜ್ಜ-ಅಜ್ಜಿ, ತಂದೆ-ತಾಯಿ, ಮಕ್ಕಳು ಈ ಮೂರು ಪೀಳಿಗೆಯವರೂ ಒಟ್ಟಾಗಿ ಯೊಗ ಮಾಡುತ್ತಿರುವ ಸೆಲ್ಫಿಯನ್ನು mycov.in ವೆಬ್ ಸೈಟಿನಲ್ಲಿ ಅಪ್ ಲೋಡ್ ಮಾಡುವಂತೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.

ನವದೆಹಲಿ, ಮೇ 30: ಅಂತಾರಾಷ್ಟ್ರೀಯ ಯೊಗ ದಿನ (ಜೂನ್ 21) ದ ನಿಮಿತ್ತ ಮೂರು ಪೀಳಿಗೆಗಳನ್ನು ಬೆಸೆಯುವ ವಿಭಿನ್ನ ಕಾರ್ಯವೊಂದಕ್ಕೆ ಪ್ರಧಾನಿ ನರೇಂದ್ರ ಮೋದಿ ನಾಂದಿ ಹಾಡಿದ್ದಾರೆ.

ಒಂದೇ ಕುಟುಂಬದ ಅಜ್ಜ-ಅಜ್ಜಿ, ತಂದೆ-ತಾಯಿ, ಮಕ್ಕಳು ಈ ಮೂರು ಪೀಳಿಗೆಯವರೂ ಒಟ್ಟಾಗಿ ಯೊಗ ಮಾಡುತ್ತಿರುವ ಸೆಲ್ಫಿಯನ್ನು mycov.in ವೆಬ್ ಸೈಟಿನಲ್ಲಿ ಅಪ್ ಲೋಡ್ ಮಾಡುವಂತೆ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.[ಮೋದಿ ಮನ್ ಕಿ ಬಾತ್ ನ ಮನತಟ್ಟುವ 15 ಹೇಳಿಕೆಗಳು]

Selfie with 3 generation: Modi's Yoga day special

ಇದು ಭಾರತದ ಭೂತ, ವರ್ತಮಾನ ಮತ್ತು ಭವಿಷ್ಯದ ಕನ್ನಡಿ ಎಂದಿರುವ ಅವರು, ನಮ್ಮ ಭೂತಕಾಲ ಮತ್ತು ವರ್ತಮಾನ ಮಾತ್ರವೇ ಭವಿಷ್ಯವನ್ನು ನಿರ್ಧರಿಸಬಲ್ಲದು. ಭವಿಷ್ಯದ ಸೇತುವೆ ಕಟ್ಟುವುದಕ್ಕಾಗಿ ನಮ್ಮ ಹಿಂದಿನ ಪೀಳಿಗೆಯ ಜೊತೆ, ಮುಂದಿನ ಪೀಳಿಗೆಯ ಜೊತೆ ಸಾಮರಸ್ಯ ಹೊಂದುವುದು ಅಗತ್ಯ ಎಂದಿದ್ದಾರೆ.[ಮೋಡಿಗಾರ, ಸೊಗಸುಗಾರ ಸೆಲ್ಫಿ ಮೋಹಿ ಮೋದಿ]

ಯೋಗ ಸ್ವಾಸ್ಥ್ಯದ ಗುಟ್ಟಾಗಿರುವುದರಿಂದ ಪ್ರತಿಯೊಬ್ಬರೂ ಜೂನ್ 1 ರಿಂದ ಯೋಗ ಮಾಡಿ, ಯೋಗದ ಕುರಿತು ಇತರರಲ್ಲಿ ಪ್ರಜ್ಞೆ ಮೂಡಿಸಿ ಎಂದು ಮೋದಿ ಕರೆ ನೀಡಿದ್ದಾರೆ.["Selfie With Daughter ತೆಗೆದು ಕಳಿಸಿ ಧೈರ್ಯ ತುಂಬಿ"]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+