ಮೋಡಿಗಾರ, ಸೊಗಸುಗಾರ ಸೆಲ್ಫಿ ಮೋಹಿ ಮೋದಿ
ಬೆಂಗಳೂರು, ಮೇ.17: ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಒಂದು ವರ್ಷ ಕಳೆಯುವಷ್ಟರಲ್ಲೇ ಅನೇಕ ದೇಶಗಳನ್ನು ಸುತ್ತಿ ಬಂದಿದ್ದಾರೆ. ಈಗಲೂ ಮೂರು ರಾಷ್ಟ್ರಗಳ ಪ್ರವಾಸ ನಿರತರಾಗಿದ್ದಾರೆ. ಎಲ್ಲೆಡೆ ಮೋದಿ ಅವರ ಸ್ಟೈಲ್ ಹಾಗೂ ಸ್ಮೈಲ್ ಬಗ್ಗೆ ಚರ್ಚೆ ನಡೆಯುತ್ತಿವೆ. ಈ ಪಟ್ಟಿಗೆ ಈಗ ಮೋದಿ ಅವರ ಸೆಲ್ಫಿ ಫೋಟೋ ಮೋಹ ಸೇರಿಕೊಂಡಿದೆ.
ಸಾರ್ಕ್ ದೇಶಗಳ ಪ್ರತಿನಿಧಿಗಳನ್ನು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ಮೋದಿ ನಾಂದಿ ಹಾಡಿದ್ದು ನೆನಪಿರಬಹುದು. ಫೋಟೋಗ್ರಾಫರ್ಸ್ ಫ್ರೆಂಡ್ಲಿ ಪಿಎಂ ಎನಿಸಿಕೊಂಡಿರುವ ಭಾರತದ ಪ್ರಧಾನಿ ಮೋದಿ ಅವರು ತಮ್ಮ ತಾಯಿ ಜೊತೆ ಸೆಲ್ಫಿ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದು ಸಾಂಕ್ರಾಮಿಕವಾಗಿಬಿಟ್ಟಿದೆ. [ನರೇಂದ್ರ ಮೋದಿ ಭಾರತದ ಸ್ಟೈಲ್ ಐಕಾನ್]
ವಿದೇಶಿ ಪ್ರವಾಸದ ಕಾಲದಲ್ಲೂ ಮೋದಿ ಅವರು ಶಿಷ್ಟಾಚಾರ ಬದಿಗೊತ್ತಿ ತಮ್ಮ ಸೆಲ್ಫಿ ಮೋಹವನ್ನು ಪ್ರದರ್ಶಿಸಿದ್ದಾರೆ. ಚೀನಾ ಪ್ರವಾಸದಲ್ಲೂ ಚೀನಾ ಪ್ರಧಾನಿ, ಅಧ್ಯಕ್ಷ, ಚೀನಿ ಮಕ್ಕಳು ಸೇರಿದಂತೆ ಎನ್ನಾರೈಗಳ ಜೊತೆ ಸೆಲ್ಫಿ ಮೋದಿ ಕಂಡು ಬಂದಿದ್ದಾರೆ.
ಮೋದಿ ಅವರ ಭದ್ರತಾ ಪಡೆಗೆ ಫುಲ್ ಕೆಲಸ. ಯಾವಾಗ ಯಾರ ಜೊತೆ ಮೋದಿ ಸೆಲ್ಫಿ ತೆಗೆದುಕೊಳ್ಳಲು ನಿಂತುಕೊಳ್ಳುತ್ತಾರೋ ಎಂಬ ಆತಂಕದೊಡನೆ ಅವರ ಜೊತೆ ಜೊತೆಗೆ ಹೆಜ್ಜೆ ಹಾಕುತ್ತಿರುತ್ತಾರೆ. ಮೋದಿ ಅವರ ಸೆಲ್ಫಿ ಮೋಹ, ಮೋಹಕ ನಗು ಎಲ್ಲರನ್ನು ಮೋಡಿ ಮಾಡಿರುವುದಂತೂ ಸತ್ಯ.
ವಿದೇಶ ಪ್ರವಾಸ ನಂತರ ಸೆಲ್ಫಿ ತೆಗೆದುಕೊಳ್ಳುವುದು ಹೇಗೆ ಎಂಬ ಕೋರ್ಸ್ ಶುರು ಮಾಡಿ ಎಂದು ಆದೇಶಿಸಿದರೂ ಅಚ್ಚರಿ ಪಡಬೇಕಾಗಿಲ್ಲ. ಮೋದಿ ಅವರ ಸೆಲ್ಫಿ ಚಿತ್ರಗಳ ಸಣ್ಣ ಸಂಗ್ರಹ ಇಲ್ಲಿದೆ ನೋಡಿ....

ಮಂಗೋಲಿಯಾ ಅಧ್ಯಕ್ಷರ ಜೊತೆ ಮೋದಿ
ಮೂರು ರಾಷ್ಟ್ರಗಳ ಪ್ರವಾಸ ನಿರತ ಪ್ರಧಾನಿ ಮೋದಿ ಅವರು ಮಂಗೋಲಿಯಾ ಅಧ್ಯಕ್ಷ ತ್ಸಖಿಯಾಗಿನ್ ಎಲ್ಬೆಗ್ದೊರ್ಜ್ ಜೊತೆ ಸೆಲ್ಫಿ ತೆಗೆದುಕೊಂಡಿದ್ದು ಹೀಗೆ

ಏಷ್ಯಾದ ಪವರ್ ಫುಲ್ ಸೆಲ್ಫಿ
ಚೀನಾದ ಲೀ ಕೆಗಿಯಾಂಗ್ ಜೊತೆ ಪ್ರಧಾನಿ ಮೋದಿ ಸೆಲ್ಫಿ

ಆಸ್ಟ್ರೇಲಿಯಾದ ಟೋನಿ ಜೊತೆ ಮೋದಿ
ವಿಶ್ವಕಪ್ ಕ್ರಿಕೆಟ್ ಗೂ ಮುನ್ನ ಟೋನಿ ಅಬಾಟ್ ಜೊತೆ ಮೋದಿ ಅವರು ಸೆಲ್ಫಿ ಫೋಟೊ ತೆಗೆದುಕೊಂಡು ಟ್ವೀಟ್ ಮೀರರ್ ಮೇಲೆ ಇಬ್ಬರು ಹಸ್ತಾಕ್ಷರ ಹಾಕಿದ್ದರು.

ಫಿಜಿ ಪ್ರಧಾನಿ ಜೊತೆ ಮೋದಿ ಸೆಲ್ಫಿ
ಫಿಜಿ ಪ್ರಧಾನಿ ಬೈನಿಮಾರಾಮ ಜೊತೆ ಪ್ರಧಾನಿ ಮೋದಿ ಸೆಲ್ಫಿ ಫೋಟೋ ತೆಗೆದುಕೊಂಡು ಟ್ವೀಟ್ ಮಾಡಿದ್ದರು.

ವಿದೇಶಿ ವಿದ್ಯಾರ್ಥಿಗಳ ಜೊತೆ ಮೋದಿ
ಆಸ್ಟ್ರೇಲಿಯಾ ಪ್ರವಾಸ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜೊತೆ ಮೋದಿ ಸೆಲ್ಫಿ ತೆಗೆಸಿಕೊಂಡಿದ್ದರು.

ಫ್ರಾನ್ಸ್ ನಲ್ಲೂ ಮೋದಿ ಸೆಲ್ಫಿ ಮೋಡಿ
ಫ್ರಾನ್ಸ್ ನಲ್ಲೂ ಮೋದಿ ಸೆಲ್ಫಿ ಮೋಡಿ ಮುಂದುವರೆಯಿತು. ಫ್ರೆಂಚ್ ಬಾಹ್ಯಾಕಾಶ ಕೇಂದ್ರದ ಬಳಿ ವಿದ್ಯಾರ್ಥಿಗಳ ಜೊತೆ ಸೆಲ್ಫಿ.

ಚೀನಿ ಮಕ್ಕಳ ಜೊತೆ ಮೋದಿ ಸೆಲ್ಫಿ
ಚೀನಾ ಪ್ರವಾಸದ ವೇಳೆ ಯೋಗ ಹಾಗೂ ತೈಚಿ ವಿಲೀನಗೊಂಡ ಕೋರ್ಸ್ ಆರಂಭಿಸಲು ಮುಂದಾದ ಮೋದಿ ಅವರು ತೈಚಿ ವಿದ್ಯಾರ್ಥಿಗಳ ಜೊತೆ ಸೆಲ್ಫಿ ತೆಗೆದುಕೊಂಡರು.

ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ
ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ಭಾರತೀಯ ಸಮುದಾಯದವರ ಜೊತೆ ಮೋದಿ ಸೆಲ್ಫಿ PTI Photo by Shahbaz Khan.

ನೀವು #SelfiewithModi ತೆಗೆಸಿಕೊಂಡಿದ್ದರೆ
ನೀವು #SelfiewithModi ತೆಗೆಸಿಕೊಂಡಿದ್ದರೆ ನಮಗೆ ಕಳಿಸಿ ಈ ಚಿತ್ರ ಸರಣಿಗೆ ನಿಮ್ಮದೊಂದು ಚಿತ್ರವೂ ಸೇರ್ಪಡೆಯಾಗಲಿದೆ. ಇಮೇಲ್ ಮಾಡಿ












Click it and Unblock the Notifications