ನರೇಂದ್ರ ಮೋದಿ ಭಾರತದ ಸ್ಟೈಲ್ ಐಕಾನ್
ಮುಂಬೈ, ಮೇ.20: ದೇಶದ ಯುವಕರನ್ನು ಸೂಜಿಗಲ್ಲಿನಂತೆ ಸೆಳೆಯುವಲ್ಲಿ ಯಶಸ್ವಿಯಾಗಿರುವ ನರೇಂದ್ರ ಮೋದಿ ಅವರು ದೇಶದ ಸದ್ಯದ 'ಸ್ಟೈಲ್ ಐಕಾನ್' ಎಂದು ಮುಂಬೈನ ಖ್ಯಾತ ವಸ್ತ್ರ ವಿನ್ಯಾಸಕಿ ಸಾಯಿ ಸುಮನ್ ಹೇಳಿದ್ದಾರೆ. ಮೇ.26ರಂದು ಮೋದಿ ಅವರು ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ ಸುಮನ್ ವಿನ್ಯಾಸದ ಸೂಟ್ ಧರಿಸಲಿದ್ದಾರೆ.
ಸಾಮಾನ್ಯವಾಗಿ ಯುವಕರಿಗೆ ಸಿನಿಮಾ ನಟ, ಕ್ರಿಕೆಟ್ ಆಟಗಾರರು ಫ್ಯಾಷನ್ ಐಕಾನ್ ಆಗಿರುತ್ತಾರೆ. ಆದರೆ, ಮೊದಲ ಬಾರಿಗೆ ದೇಶದ ಯುವ ಜನತೆಗೆ ದೇಶಿ ವಸ್ತ್ರಗಳತ್ತ ಮುಖ ಮಾಡಿದ್ದಾರೆ. ಇದಕ್ಕೆಲ್ಲ ಮೋದಿ ಫ್ಯಾಷನ್ ಲುಕ್ ಕಾರಣ ಎನ್ನಬಹುದು.
ಸುಮಾರು ತಿಂಗಳುಗಳ ಕಾಲ ಸ್ಕೆಚ್ ಹಾಕಿ ಹೊಸ ವಿನ್ಯಾಸ ರಚಿಸಲು ನಮ್ಮ ತಂಡ ಹೆಣಗಾಡಿದೆವು. ನಾವು ಸಂಪೂರ್ಣ ದೇಶಿ ಫ್ಯಾಬ್ರಿಕ್ ಬಳಸಿ ಮೋದಿ ಅವರ ಇಚ್ಛೆಯಂತೆ ವಸ್ತ್ರ ವಿನ್ಯಾಸಗೊಳಿಸಿದೆವು. ಮೋದಿ ಅವರಿಗೆ ವಿನ್ಯಾಸಕ್ಕಿಂತ ಒಳ್ಳೆ ಡ್ರೆಸ್ ಮ್ಯಾಚಿಂಗ್ ಸೆನ್ಸ್ ಇದೆ. ಹೀಗಾಗಿ ಅವರ ವೇಷಭೂಷಣಗಳು ಇತರರಿಗೆ ಮಾದರಿಯಾಗಿದೆ ಎಂದು ಸುಮನ್ ಹೇಳಿದ್ದಾರೆ.
ಸಂದರ್ಭಕ್ಕೆ ತಕ್ಕ ವಸ್ತ್ರ ಧರಿಸುವ ಕಲೆ ಅವರಿಗೆ ಕರಗತವಾಗಿದೆ. ನಾವೇನಿದ್ದರೂ ಅವರ ಕಲ್ಪನೆಗೆ ತಕ್ಕಂತೆ ವಸ್ತ್ರ ವಿನ್ಯಾಸ ಮಾಡುತ್ತಿದ್ದೇವೆ ಅಷ್ಟೆ ಎಂದು ಸುಮನ್ ಹೇಳುತ್ತಾರೆ. ಪ್ರಧಾನಿಗೆ ಸೂಟು ಹೊಲೆದುಕೊಟ್ಟ ವಸ್ತ್ರ ವಿನ್ಯಾಸಕಿ ಎಂಬ ಹೆಗ್ಗಳಿಕೆಗೆ ಸುಮನ್ ಪಾತ್ರರಾಗಲು ಇನ್ನೇನು ಕೆಲ ದಿನ ಬಾಕಿ ಉಳಿದಿದೆ. ಸುಮನ್ ಬಗ್ಗೆ ಒಂದಷ್ಟು ಮಾಹಿತಿ ನಿಮ್ಮ ಮುಂದಿದೆ.[ಚಿತ್ರಕೃಪೆ: ಸಾಯಿ ಸುಮನ್ ಫೇಸ್ ಬುಕ್ ಪುಟ]

ರಾಜಕಾರಣಿಗಳ ಡ್ರೆಸ್ ಎಂದರೆ ಬಿಳಿ ಕುರ್ತಾ!
ರಾಜಕಾರಣಿಗಳ ಡ್ರೆಸ್ ಎಂದರೆ ಬಿಳಿ ಕುರ್ತಾ ಹೆಚ್ಚೆಂದರೆ ಮೇಲೊಂದು ಕೋಟು ಎಂಬ ಕಾಲದಲ್ಲಿ ಮೋದಿ ಅವರು ಬಣ್ಣ ಬಣ್ಣದ ಕುರ್ತಾಗಳು, ಹಾಫ್ ಶರ್ಟ್ ಮಾದರಿ ಕುರ್ತಾ ಗಳ ಬಳಕೆ ಮಾಡುವ ಮೂಲಕ ಫ್ಯಾಷನ್ ಲೋಕದಲ್ಲೂ ಸಂಚಲನ ಮೂಡಿಸಿದರು.

ಸಾಯಿ ಸುಮನ್ ಮಾಜಿ ಮಿಸ್ ಥಾಣೆ
1995 ರಲ್ಲಿ ಮಿಸ್ ಜೂನಿಯರ್ ಥಾಣೆಯಾಗಿ ಸುಂದರಿ ಎಂಬ ಪಟ್ಟ ಹೊತ್ತ ಸಾಯಿ ಸುಮನ್ ಆಗಿಂದಲೇ ಫ್ಯಾಷನ್ ಲೋಕದತ್ತ ಆಕರ್ಷಣೆ ಬೆಳೆಸಿಕೊಂಡರು. ಅಭಿಷೇಕ್ ಬಚ್ಚನ್ ಹಾಗೂ ಎ. ಪದಮ್ಸಿ ಜತೆ ಆಡ್ ಗಳಲ್ಲಿ ಕಾಣಿಸಿಕೊಂಡಿದ್ದರು. ಸುಸಂಸ್ಕೃತ ಹಿಂದೂ ಮನೆತನದಿಂದ ಬಂದಿರುವ ಸುಮನ್ ಅವರಿಗೆ ಶಿಕ್ಷಣ ಹಾಗೂ ಸಂಸ್ಕೃತಿ ಬಗ್ಗೆ ಅಪಾರ ಗೌರವವಿದೆ.

ಮಹಿಳೆಯರ ಶಿಕ್ಷಣದ ಬಗ್ಗೆ ಅಪಾರ ಕಾಳಜಿ
ಬಿಸಿನೆಸ್ ಪದವೀಧರೆಯಾಗಿರುವ ಸುಮನ್, NIFTಯಲ್ಲಿ ವಸ್ತ್ರ ವಿನ್ಯಾಸ ಅಧ್ಯಯನ ಮಾಡಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಲಂಡನ್ ಹಾಗೂ ಯುಎಸ್ ಎ ಗಳಲ್ಲಿ ಹೆಚ್ಚಿನ ಅಧ್ಯಯನ ಮಾಡಿದ್ದಲ್ಲದೆ, ದುಬೈನಲ್ಲಿ ಗ್ರಾಫಿಕ್ಸ್ ಡಿಸೈನ್ ಬಗ್ಗೆ ಹೆಚ್ಚಿನ ವ್ಯಾಸಂಗ ಮಾಡಿದ್ದಾರೆ. ಮಹಿಳೆಯರಿಗೆ ಶಿಕ್ಷಣ ಅತ್ಯಗತ್ಯ, ಇದು ಸ್ವಾವಲಂಬಿಯಾಗಲು ಸಹಕಾರಿ ಎಂಬ ತತ್ವವನ್ನು ಪಾಲಿಸುತ್ತಾ ಬಂದಿದ್ದಾರೆ. ಇದೇ ವಿಷಯ ಅವರನ್ನು ಮೋದಿ ಅವರ ವಸ್ತ್ರ ವಿನ್ಯಾಸಕಿಯಾಗುವ ಅವಕಾಶ ಕಲ್ಪಿಸಿದ್ದು ಎನ್ನಬಹುದು.

ಫ್ಯಾಷನ್ ಲೋಕದಲ್ಲಿ ಜನಪ್ರಿಯ ಹೆಸರು
ಸುಮನ್ ವಿನ್ಯಾಸದ ವಸ್ತ್ರಗಳು ಯುಕೆ, ನ್ಯೂಯಾರ್ಕ್, ದುಬೈ, ಬಹರೇನ್ ಮುಂತಾದೆಡೆ ಜನಪ್ರಿಯತೆ ಗಳಿಸಿದೆ. ಬಾಲಿವುಡ್ ಹಾಗೂ ಉದ್ಯಮಿಗಳ ವಸ್ತ್ರ ವಿನ್ಯಾಸ ಕೂಡಾ ಆಕೆ ಮಾಡಿದ್ದಾರೆ.
ಆಕೆಯ ಪ್ರತಿಭೆ ಮೆಚ್ಚಿ ನ್ಯೂಯಾರ್ಕಿನ ಚೇಂಬರ್ ಆಫ್ ಕಾಮರ್ಸ್ ಆಕೆಗೆ ವಿಶೇಷ ಅತಿಥಿಯಾಗಿ ಆಹ್ವಾನ ನೀಡಿತ್ತು. ದೇಶಿ ಶೈಲಿ ಹಾಗೂ ಪಾಶ್ಚಿಮಾತ್ಯ ಶೈಲಿ ಎರಡನ್ನೂ ಸಮನಾಗಿ ಬೆರೆಸಿ ವಸ್ತ್ರಗಳನ್ನು ವಿನ್ಯಾಸಗೊಳಿಸುವುದು ಸುಮನ್ ಶೈಲಿ ಎನಿಸಿದೆ.
ಮೋದಿ ಪ್ರಮಾಣ ವಚನ ಸಮಾರಂಭ
ಮೋದಿ ಪ್ರಮಾಣ ವಚನ ಸಮಾರಂಭ ಮೇ. 26ರಂದು ನಡೆಯಲಿದ್ದು, ಮೋದಿ ಅವರ ಸಂಪುಟದ ಸುಮಾರು 12 ಮಂದಿ ಸಚಿವರು ಅಂದು ಪ್ರಮಾಣ ವಚನ ಸ್ವೀಕರಿಸುವರೆಂದು ತಿಳಿದುಬಂದಿದೆ.ಜೂನ್ 2 ಅಥ ಎನ್ನಲಾಗಿದೆ.
ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ಸಾಯಿ ಸುಮನ್ ಅವರಿಗೂ ಆಹ್ವಾನ ಬಂದಿದೆ. ಸುಮಾರು 3000 ಜನರಲ್ಲಿ ಯಾರಿಗೆ ಆಹ್ವಾನ ಸಿಗುವುದೋ ಅವರೇ ಲಕ್ಕಿ ಎನ್ನಬಹುದು.












Click it and Unblock the Notifications