• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸರ್ಜಿಕಲ್ ದಾಳಿಯಿಂದ ಹೆಚ್ಚಿದ ಮೋದಿ ಜನಮನ್ನಣೆ: ಸಮೀಕ್ಷಾ ವರದಿ

|

ನವದೆಹಲಿ, ಜೂನ್ 11: ಸತತ ಎರಡನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಲು ಹಾಗೂ ದೇಶದಲ್ಲಿ ಮೋದಿ ಜನಮನ್ನಣೆ ಹೆಚ್ಚಲು ಸರ್ಜಿಕಲ್ ದಾಳಿ ನೆರವಾಗಿದೆ ಎನ್ನುವುದು ಬಹಿರಂಗವಾಗಿದೆ.

ಪಾಕಿಸ್ತಾನದ ಉಗ್ರರ ತರಬೇತಿ ಕೇಂದ್ರ ಬಾಲಾಕೋಟ್ ಮೇಲಿನ ಸರ್ಜಿಕಲ್ ದಾಳಿ ಬಳಿಕ ಮೋದಿ ಸರ್ಕಾರದ ಮೇಲಿನ ಭರವಸೆ ಇನ್ನಷ್ಟು ಹೆಚ್ಚಿರುವುದು ಐಎಎನ್‌ಎಸ್ ಹಾಗೂ ಸಿ ವೋಟರ್ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

ಸಮೀಕ್ಷೆ ಪ್ರಕಾರ ಮೇ 31ರ ವೇಳೆಗೆ ಶೇ.73.61ಜನ ಮೋದಿ ಸರ್ಕಾರದ ಕಾರ್ಯ ವೈಖರಿಯನ್ನು ಅತ್ಯಂತ ತೃಪ್ತಿಕರ ಅಥವಾ ಸಮಾಧಾನಕರ ಎಂದು ಬಣ್ಣಿಸಿದ್ದಾರೆ.ಆದರೆ ಶೇ.25.39ಮಂದಿ ಮಾತ್ರ ಮೋದಿ ಸರ್ಕಾರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲ ಎಂದು ಹೇಳಿದ್ದಾರೆ.

ಶೇ.74.61ಜನರಲ್ಲಿ ಶೇ.48.87ಮಂದಿ ಮೋದಿ ಆಡಳಿತವನ್ನು ಅತ್ಯಂತ ತೃಪ್ತಿಕರ ಎಂದು ಹೇಳಿದ್ದರು. ಶೇ.25.74ರಷ್ಟು ಮಂದಿ ಸಮಾಧಾನಕರ ಎನ್ನುವ ಉತ್ತರವನ್ನು ನೀಡಿದ್ದಾರೆ.

ಫೆಬ್ರವರಿ 26ರಂದು ಸರ್ಜಿಕಲ್ ಸ್ಟ್ರೈಕ್ ನಡೆದ ದಿನದಂದು ಮೋದಿ ಆಡಳಿತದ ಜನಮನ್ನಣೆ ಪ್ರಮಾಣ ಶೇ.40ರ ಆಸುಪಾಸಿನಲ್ಲಿತ್ತು. ಇದುದಿನದಿಂದ ದಿನಕ್ಕೆ ಏರುತ್ತಲೇ ಹೋಯಿತು.

ಚುನಾವಣೆಯ ವೇಳೆಗೆ ಅತ್ಯಂತ ತೃಪ್ತಿಕರ ಎಂದು ಹೇಳುವವರ ಪ್ರಮಾಣ ಶೇ.51ನ್ನೂ ದಾಟಿತ್ತು. ಕೊನೆಯ ಸಮೀಕ್ಷೆ ಮೇ 31 ರಂದು 48.87 ಇತ್ತು.ಒಟ್ಟಾರೆ 2014ರಲ್ಲಿ 282 ಸೀಟುಗಳನ್ನು ಗೆದ್ದಿದ್ದ ಬಿಜೆಪಿಗೆ 2019ರರಲ್ಲಿ 303 ಸೀಟುಗಳನ್ನು ಗೆಲ್ಲಲು ನೆರವಾಗಿರಬಹುದು ಎನ್ನುವುದು ಈ ಸಮೀಕ್ಷೆಯ ಸಾರಾಂಶವಾಗಿದೆ.

English summary
IANS C-Voter poll has been shown that acceptency rate Prime minister Narendra modi has been increased after Surgical strike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X