ಚೀನಾ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ ಎಂದ ಹಾರ್ದಿಕ್ ಪಟೇಲ್
ನವದೆಹಲಿ, ಜೂನ್ 13: ಅರುಣಾಚಲ ಪ್ರದೇಶ ಹಾಗೂ ಚೀನಾ ಗಡಿಯಲ್ಲಿ ಇತ್ತೀಚೆಗೆ ಕಳೆದು ಹೋಗಿದ್ದ ಎಎನ್ 32 ವಿಮಾನದ ಅವಶೇಷಗಳು ಇಂದು ಪತ್ತೆಯಾಗಿದೆ. ಆದರೆ, ಇದಕ್ಕೂ ಮುನ್ನ ಗುಜರಾತಿನ ಪಾಟೀದಾರ್ ನಾಯಕ ಹಾರ್ದಿಕ್ ಪಟೇಲ್ ಅವರು ನೀಡಿದ ಹೇಳಿಕೆ ಬಾರಿ ಸದ್ದು ಮಾಡಿತ್ತು.
'ಚೀನಾಕ್ಕೆ ಮುರ್ದಾಬಾದ್, ಚೀನಾ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ ನಮ್ಮ ವಿಮಾನವನ್ನು ವಾಪಸ್ ತನ್ನಿ, ಮೋದಿ ಸಾಹೇಬ್ ನಿಮ್ಮ ಜೊತೆ ನಾವಿದ್ದೇವೆ ಎಎನ್ 32 ವಿಮಾನ ಹಾಗೂ ನಮ್ಮ ಯೋಧರನ್ನು ಕರೆ ತನ್ನಿ' ಎಂಬರ್ಥದಲ್ಲಿ ಪಟೇಲ್ ಟ್ವೀಟ್ ಮಾಡಿದ್ದರು. ಸದ್ಯ ಈ ಟ್ವೀಟ್ ಡಿಲೀಟ್ ಆಗಿದೆ.
ಹಾರ್ದಿಕ್ ಪಟೇಲ್ ಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ನಾಯಕ, ಕ್ರೀಡಾ ಮತ್ತು ಯುವಜನ ವ್ಯವಹಾರ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು, ಮೊದಲಿಗೆ ಅರುಣಾಚಲ ಪ್ರದೇಶ ಎಲ್ಲಿದೆ ಎಂಬುದು ನಿಮಗೆ ತಿಳಿದಿದಿಯೇ? ಎಂದು ಪಟೇಲ್ ರನ್ನು ಪ್ರಶ್ನಿಸಿದ್ದಾರೆ. ಈ ಟ್ವೀಟ್ ಇಲ್ಲಿದೆ.

ಅಸ್ಸಾಂನ ಜೋರ್ಹತ್ ನಿಲ್ದಾಣದಿಂದ ಜೂನ್ 03ರಂದು ಹೊರಟ್ಟಿದ್ದ ಎಎನ್ 32 ಏರ್ ಕ್ರಾಫ್ಟ್ ಮೆಂಚುಕಾ ನಿಲ್ದಾಣ ತಲುಪಬೇಕಿತ್ತು. ಅಂದು ನಾಪತ್ತೆಯಾಗಿದ್ದ ಏರ್ ಕ್ರಾಫ್ಟ್ ಅವಶೇಷಗಳು ಇಂದು ಪತ್ತೆಯಾಗಿದೆ.












Click it and Unblock the Notifications