ಧಮ್ ಇದ್ದರೆ ಚೀನಾದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿ: ಅಸಾದುದ್ದೀನ್ ಓವೈಸಿ ಸವಾಲ್

ಸಂಗಾರೆಡ್ಡಿ ಮೇ 31: ಬಿಜೆಪಿ ನಾಯಕರ ವಿರುದ್ಧ ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಾಗ್ದಾಳಿ ಮಾಡಿದ್ದು ಖಡಕ್ ಸವಾಲು ಹಾಕಿದ್ದಾರೆ. ತೆಲಂಗಾಣದ ಓಲ್ಡ್ ಸಿಟಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸುವುದಾಗಿ ಬಿಜೆಪಿ ರಾಜ್ಯ ಮುಖ್ಯಸ್ಥ ಬಂಡಿ ಸಂಜಯ್ ಹೇಳಿಕೆಗೆ ಅಸಾದುದ್ದೀನ್ ಓವೈಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಧೈರ್ಯ ಇದ್ದರೆ ಚೀನಾದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ ಎಂದು ಸವಾಲು ಹಾಕಿದ್ದಾರೆ.

2020 ರಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಂಡಿ ಸಂಜಯ್, ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಟಿಆರ್‌ಎಸ್) ಮತ್ತು ಎಐಎಂಐಎಂ ಮುಖ್ಯಸ್ಥ ಓವೈಸಿ ಅವರು ರೋಹಿಂಗ್ಯಾ, ಪಾಕಿಸ್ತಾನಿ ಮತ್ತು ಅಫ್ಘಾನಿಸ್ತಾನಿ ಮತದಾರರ ಸಹಾಯದಿಂದ ಹೈದರಾಬಾದ್ ನಾಗರಿಕ ಚುನಾವಣೆಯಲ್ಲಿ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು.

Carry Out Surgical Strike On China: Asaduddin Owaisi

ಹೀಗಾಗಿ "ಜಿಎಚ್‌ಎಂಸಿ ಚುನಾವಣೆಯನ್ನು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ರೊಹಿಂಗ್ಯಾಗಳ ಮತದಾರರಿಲ್ಲದೆ ನಡೆಸಬೇಕು. ನಾವು ಚುನಾವಣೆಯಲ್ಲಿ ಗೆದ್ದ ನಂತರ ಓಲ್ಡ್ ಸಿಟಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸುತ್ತೇವೆ" ಎಂದು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಪ್ರಚಾರದಲ್ಲಿ ಬಂಡಿ ಸಂಜಯ್ ಹೇಳಿದ್ದರು.

ಹೈದರಾಬಾದ್‌ನಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಬಂಡಿ ಸಂಜಯ್, ಹಳೆ ಹೈದರಾಬಾದ್ ಭಾಗದಲ್ಲಿ ರೋಹಿಂಗ್ಯಾ ಮುಸ್ಲಿಮರು, ಪಾಕಿಸ್ತಾನಿ ಪ್ರಜೆಗಳು ಹಾಗೂ ಅಫ್ಘಾನಿಸ್ತಾನ ನಿರಾಶ್ರಿತರು ನುಸುಳಿದ್ದು, ಅವರನ್ನು ಹೊರದಬ್ಬಲು ಸರ್ಜಿಕಲ್ ಸ್ಟ್ರೈಕ್ ಮಾಡಲಾಗುವುದು ಎಂದು ಹೇಳಿದ್ದರು.

ಮಂಗಳವಾರ ಸಂಗಾರೆಡ್ಡಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಈ ಹೇಳಿಕೆಯನ್ನು ಪ್ರಸ್ತಾಪಿಸಿದ ಎಐಎಂಐಎಂ ಮುಖ್ಯಸ್ಥ ಓವೈಸಿ, "ಹಳೆಯ ನಗರದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡುವುದಾಗಿ ಅವರು ಹೇಳುತ್ತಾರೆ, ನಿಮಗೆ ಧೈರ್ಯವಿದ್ದರೆ ಚೀನಾ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ" ಎಂದು ಸವಾಲು ಹಾಕಿದ್ದಾರೆ.

Carry Out Surgical Strike On China: Asaduddin Owaisi

ಇನ್ನೂ ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ಓವೈಸಿ, "ಸ್ಟೀರಿಂಗ್ ನಿಮ್ಮ ಕೈಯಲ್ಲಿದ್ದರೆ ನಿಮಗೆ (ಅಮಿತ್ ಶಾ) ಏಕೆ ಭಯ? ದೇವಸ್ಥಾನಗಳಿಗೆ ಕೋಟ್ಯಂತರ ರೂಪಾಯಿ ಮಂಜೂರಾಗಿದ್ದು, ಸ್ಟೀರಿಂಗ್ ನನ್ನ ಕೈಯಲ್ಲಿದೆ ಎಂದು ಅವರು (ಅಮಿತ್ ಷಾ) ಹೇಳುತ್ತಾರೆ, ಸ್ಟೀರಿಂಗ್ ನಿಮ್ಮ ಕೈಯಲ್ಲಿದ್ದರೆ, ನೀವು ಯಾಕೆ ನೋವು ಅನುಭವಿಸುತ್ತೀರಿ?'' ಎಂದು ಓವೈಸಿ ಪ್ರಶ್ನೆ ಮಾಡಿದ್ದಾರೆ.

ಈ ಹಿಂದೆ ಏಪ್ರಿಲ್ 23 ರಂದು ಕರ್ನಾಟಕದಲ್ಲಿ ಬಿಜೆಪಿ 'ಸಂಕಲ್ಪ ಸಭೆ'ಯನ್ನು ಉದ್ದೇಶಿಸಿ ಮಾತನಾಡಿದ ಶಾ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಕೆಸಿಆರ್ ನಡುವೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಓವೈಸಿ, ತೆಲಂಗಾಣ ಸರ್ಕಾರದೊಂದಿಗೆ ನಾವು ಶಾಮೀಳಾಗಿಲ್ಲ. ತೆಲಂಗಾಣ ಸರ್ಕಾರ ಕೆಲಸ ಮಾಡಬೇಕು. ರಾಜ್ಯದ ಜನರಿಗಾಗಿ, ಓವೈಸಿಗಾಗಿ ಅಲ್ಲ ಎಂದು ಅವರು ಹೇಳಿದರು.

ಇನ್ನು ಬಂಡಿ ಸಂಜಯ್ ಅವರ ಸರ್ಜಿಕಲ್ ಸ್ಟ್ರೈಕ್‌ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ, ಇಲ್ಲಿ ನೆಲೆಸಿರುವ ಎಲ್ಲರೂ ಭಾರತೀಯರೇ ಹೊರತು ಹೊರದೇಶಗಳ ಪ್ರಜೆಗಳಲ್ಲ ಎಂದು ತಿರುಗೇಟು ನೀಡಿದ್ದಾರೆ. ಹಳೆ ಹೈದರಾಬಾದ್ ಭಾಗದಲ್ಲಿ ರೋಹಿಂಗ್ಯಾ ಮುಸ್ಲಿಮರು, ಪಾಕಿಸ್ತಾನಯರು ನೆಲೆಸಿದ್ದಾರೆ ಎಂಬ ಆರೋಪಕ್ಕೆ ಬಿಜೆಪಿ ಸಾಕ್ಷಿ ಒದಗಿಸಬೇಕು ಎಂದು ಅಸಾದುದ್ದೀನ್ ಒವೈಸಿ ಇದೇ ವೇಳೆ ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+