Get Updates
Get notified of breaking news, exclusive insights, and must-see stories!

ಭಾರತದ ವಿಮಾನಗಳಿಗೆ ಪಾಕಿಸ್ತಾನ ಮತ್ತೆ ನಿರ್ಬಂಧ

ಇಸ್ಲಾಮಾಬಾದ್, ಆಗಸ್ಟ್ 8: ಬಾಲಾಕೋಟ್ ಸರ್ಜಿಕಲ್ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಮಾನಯಾನ ಪ್ರದೇಶವನ್ನು ಪರಸ್ಪರ ರದ್ದುಗೊಳಿಸಲಾಗಿತ್ತು.

ಈಗ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಬೆನ್ನಲ್ಲೇ ಈಗ ಪಾಕಿಸ್ತಾನವು ತನ್ನ ವಿಮಾನಯಾನ ಪ್ರದೇಶದಲ್ಲಿ ಭಾರತದ ವಿಮಾನ ಹಾರಾಟವನ್ನುಭಾಗಶಃ ಸ್ಥಗಿತಗೊಳಿಸಿದೆ.

ಬೆಳಗಿನ ಜಾವ 2 ಗಂಟೆಯಿಂದ 11 ಗಂಟೆವರೆಗೆ ವಾಯುಯಾನ ಸ್ಥಗಿತಗೊಳಿಸಿದ ಆದೇಶಿಸಿದೆ. ಈ ಹಿಂದೆಯೂ ಇದೇ ರೀತಿಯ ಆದೇಶ ಮಾಡಿದ್ದರಿಂದ ಪಾಕಿಸ್ತಾನಕ್ಕೆ 820ಕ್ಕೂ ಅಧಿಕ ಕೋಟಿ ರೂ ನಷ್ಟವಾಗಿತ್ತು. ಭಾರತಕ್ಕೆ 416ಕ್ಕೂ ಅಧಿಕ ಕೋಟಿ ರೂ ತೊಂದರೆಯಾಗಿತ್ತು.

Pakistan Cancels Its Aerospace Usage For Indian Flights

ಈಗ ಕೆಲ ಸಿನಗಳ ಹಿಂದೆ ಮಾತ್ರ ಭಾರತೀಯ ವಿಮಾನಗಳಿಗೂ ಪಾಕಿಸ್ತಾನ ವಾಯುಯಾನ ಪ್ರದೇಶದಲ್ಲಿ ಹಾರಾಡಲು ಅನುಮತಿ ನೀಡಲಾಗಿತ್ತು.

ಆದರೆ ಈಗ ಮತ್ತೆ ಪಾಕಿಸ್ತಾನ ಅದೇ ಎಡವಟ್ಟು ಮಾಡುತ್ತಿದೆ.ವಿದೇಶಿ ವಿಮಾನಗಳು ಓಡಾಡುವ ಸಮಯವನ್ನೇ ಗುರಿಯಾಗಿಸಿಕೊಂಡು ಈ ಬದಲಾವಣೆ ಮಾಡಲಾಗುತ್ತಿದೆ. ಬೆಳಗಿನ ಸಮಯದಲ್ಲಿ ಹೆಚ್ಚು ಪ್ರಾದೇಶಿಕ ವಿಮಾನಗಳು ಓಡಾಡುತ್ತವೆ. ವಿದೇಶಿ ವಿಮಾನಗಳ ಮೇಲೆ ಪ್ರತಿಬಂಧ ಹೇರುವುದರಿಂದ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನದ ಧ್ವನಿಗೆ ಬೆಂಬಲ ನೀಡುವಂತಾಗಲಿ ಎನ್ನುವ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಭಾರತದೊಂದಿಗೆ ದ್ವಿಪಕ್ಷೀಯ ವಾಣಿಜ್ಯ ಸಂಬಂಧ ಭಾಗಶಃ ರದ್ದುಪಡಿಸಲು ಇಮ್ರಾನ್ ಖಾನ್ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
ಇದರಿಂದ ಭಾರತ ಹಾಗೂ ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಂಬಂಧ ಇನ್ನಷ್ಟು ಹಳಸಲಿದೆ. ಪಾಕಿಸ್ತಾನದ ಕ್ರಮಕ್ಕೆ ಪ್ರತಿಯಾಗಿ ಭಾರತವು ಶೀಘ್ರದಲ್ಲೇ ಈ ರೀತಿಯ ಕ್ರಮಗಳನ್ನು ಕೈಗೊಳ್ಳಬಹುದು ಇದರಿಂದ ಗಡಿ ದೇಶಗಳ ಸಮಸ್ಯೆಗಳು ಇನ್ನಷ್ಟು ಉಲ್ಬಣಿಸುವ ಸಾಧ್ಯತೆ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+