ಕೊನೆಗೂ ಭಾರತಕ್ಕೆ ತೆರೆದುಕೊಂಡ ಪಾಕಿಸ್ತಾನದ ಏರೋಸ್ಪೇಸ್
ನವದೆಹಲಿ, ಜುಲೈ 16: ಬಾಲಕೋಟ್ ಸರ್ಜಿಕಲ್ ಸ್ಟ್ರೈಕ್ ಬಳಿಕ ನಿರ್ಬಂಧಿಸಲಾಗಿದ್ದ ಪಾಕಿಸ್ತಾನ ವೈಮಾನಿಕ ವಲಯ ಬಳಕೆಯನ್ನು ಇಂದು ಬೆಳಗ್ಗೆಯಿಂದ ಮತ್ತೆ ಪುನರಾರಂಭಿಸಲಾಗಿದೆ.
ಪಾಕಿಸ್ತಾನದ ಮೇಲೆ ಭಾರತ ಇನ್ನಷ್ಟು ವೈಮಾನಿಕ ದಾಳಿ ನಡೆಸುವ ಸಾಧ್ಯತೆ ಇದೆ ಎನ್ನುವ ನಿರೀಕ್ಷೆಯಿಂದ ಪಾಕಿಸ್ತಾನ ಸರ್ಕಾರವು ಏರೋಸ್ಪೇಸ್ ಬಳಕೆಯನ್ನು ನಿರ್ಬಂಧಿಸಿತ್ತು.
ಇದರಿಂದ ಪಾಕಿಸ್ತಾನ ಹಾಗೂ ಇತರೆ ದೇಶಗಳ ನಾಗರಿಕ ವಿಮಾನಯಾನ ಹಾರಾಟ ಕೂಡ ಪಾಕಿಸ್ತಾನದ ಏರೋಸ್ಪೇಸ್‌ನಲ್ಲಿ ರದ್ದಾಗಿತ್ತು.

ಸರ್ಜಿಕಲ್ ಸ್ಟ್ರೈಕ್ ನಡೆದ ನಾಲ್ಕು ತಿಂಗಳ ನಂತರ ಪಾಕಿಸ್ತಾನ ಸೇನೆ ಭಯದಿಂದ ಹೊರ ಬಂದಿರುವ ಲಕ್ಷಣ ಗೋಚರಿಸಿದ್ದು ಕೊನೆಗೂ ನಾಗರಿಕ ವಿಮಾನಗಳ ಬಳಕೆಗೆ ತನ್ನ ಏರೋಸ್ಪೇಸನ್ನು ತೆರೆದುಕೊಂಡಿದೆ.
ಭಾರತೀಯ ವಿಮಾನಗಳು ಕೂಡ ಈಗ ಪಾಕಿಸ್ತಾನದ ಏರೋಸ್ಪೇಸ್‌ನಲ್ಲಿ ಹಾರಾಡಬಹುದಾಗಿದೆ. ಕಳೆದ ತಿಂಗಳು ಕಿರ್ಗಿಸ್ತಾನದಲ್ಲಿ ನಡೆದ ಶಾಂಗೈ ಸರ್ಕಾರ ಒಕ್ಕೂಟ ಸಭೆಯಲ್ಲಿ ಭಾಗವಹಿಸಲು ಮೋದಿ ತೆರಳುವಾಗ ಪಾಕಿಸ್ತಾನ ಬದಲಿಗೆ ಬೇರೆ ಮಾರ್ಗವನ್ನು ಬಳಸಿದ್ದರು.
ಭಾರತ ಮನವಿ ಸಲ್ಲಿಸಿದರೆ ಪ್ರಧಾನಿ ಮೋದಿ ವಿಮಾನ ಹಾರಾಟಕ್ಕೆ ಅವಕಾಶ ಮಾಡಿಕೊಡುವುದಾಗಿ ಪಾಕಿಸ್ತಾನ ಹೇಳಿತ್ತು. ಆದರೆ ಭಾರತ ಯಾವುದೇ ಮನವಿ ಸಲ್ಲಿಸಿರಲಿಲ್ಲ.
ಇದೇ ರೀತಿ ಭಾರತವು ಪಾಕಿಸ್ತಾನದ ವೈಮಾನಿಕ ಹಾರಾಟದ ಮೇಲೆ ಹೇರಿದ್ದ ನಿರ್ಬಂಧವನ್ನು ಮೇ 31ರಂದು ತೆರವುಗೊಳಿಸಿತ್ತು.ಈ ನಿರ್ಬಂಧದಿಂದ ಭಾರತಕ್ಕೆ ಜುಲೈ 2ರವರೆಗೆ 491 ಕೋಟಿ ರೂ ನಷ್ಟ ಉಂಟಾಗಿತ್ತು. ಸ್ಪೈಸ್‌ಜೆಟ್, ಇಂಡಿಗೋ, ಗೋ ಏರ್‌ಗೆ 30.73 ಕೋಟಿ , 25.1 ಕೋಟಿ, 2.1ಕೋಟಿ ರೂ ನಷ್ಟವಾಗಿತ್ತು.












Click it and Unblock the Notifications