ವಾಯುಸೇನೆ ಬಲ ಹೆಚ್ಚಿಸಲು ಬರುತ್ತಿದೆ ರಫೇಲ್ ವಿಮಾನ!

ನವದೆಹಲಿ, ಜುಲೈ 21: ಭಾರತೀಯ ವಾಯುಸೇನೆಗೆ ರಫೇಲ್ ವಿಮಾನಗಳು ಜುಲೈ 29ರೊಳಗೆ ಸೇರಿಕೊಳ್ಳಲಿದೆ ಎಂದು ಭಾರತೀಯ ವಾಯು ಸೇನೆ(ಐಎಎಫ್) ಅಧಿಕೃತ ಹೇಳಿಕೆ ನೀಡಿದೆ. ಕೊರೊನಾ ವೈರಸ್ ಭೀತಿಯಿಂದಾಗಿ ಮೊದಲ ಹಂತದ ರಫೇಲ್ ಯುದ್ಧ ವಿಮಾನಗಳ ವಿತರಣೆಯನ್ನು ಕೆಲ ದಿನಗಳ ಕಾಲ ಮುಂದೂಡಲಾಗಿತ್ತು.

ಫ್ರಾನ್ಸ್​ನಿರ್ಮಿತ ರಫೇಲ್​ಯುದ್ಧ ವಿಮಾನಗಳು ಖರೀದಿ ಸಂಬಂಧ ಕೇಂದ್ರ ಸರ್ಕಾರ ಹಾಗೂ ವಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳು ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು. ಅಂಬಾಲಾದ ವಾಯುನೆಲೆಯಲ್ಲಿ ಜುಲೈ 29ರಂದು ಪ್ರತಿಕೂಲ ಹವಾಮಾನ ಇರದಿದ್ದರೆ 5 ರಫೇಲ್ ಯುದ್ಧ ವಿಮಾನ ಹಾರಾಟ ಕಾಣಬಹುದು, ಮುಂದಿನ ಹಂತದ ಪೂರೈಕೆ ಆಗಸ್ಟ್ ತಿಂಗಳಿನಲ್ಲಿ ನಡೆಯಲಿದೆ ಎಂದು ಐಎಎಫ್ ಹೇಳಿದೆ.

ಫ್ರಾನ್ಸಿನ ಡಸಾಲ್ಟ್​ಏವಿಯೇಷನ್​ಸಂಸ್ಥೆ ನಿರ್ಮಿತ 36 ರಫೇಲ್​ ಯುದ್ಧ ವಿಮಾನಗಳನ್ನು ಖರೀದಿಸಲಾಗುತ್ತಿದೆ. ಈ ಮೂಲಕ ರಷ್ಯಾ ನಿರ್ಮಿತ ಯುದ್ಧ ವಿಮಾನಗಳ ಬಳಕೆ ಕಡಿಮೆಯಾಗಲಿವೆ. ಸರ್ಕಾರ ಅತ್ಯಾಧುನಿಕ ವ್ಯವಸ್ಥೆಯುಳ್ಳ ಯುದ್ಧ ವಿಮಾನಗಳು ಮತ್ತಿತರ ಶಸ್ತ್ರಾಸ್ತ್ರಗಳ ಖರೀದಿ ಜಾರಿಯಲ್ಲಿದೆ ಎಂದು ಭಾರತೀಯ ವಾಯುಸೇನೆ ಹೇಳಿದೆ.

ಲಡಾಕ್ ನ ವಾಯುನೆಲೆಗೆ ರಫೇಲ್ ವಿಮಾನ

ಲಡಾಕ್ ನ ವಾಯುನೆಲೆಗೆ ರಫೇಲ್ ವಿಮಾನ

ಲಡಾಕ್ ನಲ್ಲಿ ಚೀನಾ ಜೊತೆಗಿನ ಸಂಘರ್ಷದ ಹಿನ್ನಲೆಯಲ್ಲಿ ರಫೇಲ್ ವಿಮಾನಗಳನ್ನು ಗಡಿಭಾಗದ ವಾಯುನೆಲೆಗೆ ನಂತರ ರವಾನಿಸುವ ಸಾಧ್ಯತೆಯಿದೆ ಎಂದು ಒನ್ಇಂಡಿಯಾಕ್ಕೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ರಫೇಲ್ ವಿಮಾನ ನಿರ್ಮಿಸಿರುವ ಡಸಾಲ್ಟ್ ಏವಿಯೇಷನ್ ಸಂಸ್ಥೆಯೇ ಮಿರಾಜ್ 2000 ನಿರ್ಮಿಸಿದ್ದು ಎಂಬುದನ್ನು ಮರೆಯುವಂತಿಲ್ಲ. ಮಿರಾಜ್ 2000 ಬಳಸಿ ಪಾಕಿಸ್ತಾನದ ಬಾಲಕೋಟ್, ಮುಜಾಫರ್ ಬಾರ್, ಚಕೋತಿಯಲ್ಲಿದ್ದ ಉಗ್ರರ ನೆಲೆ ಮೇಲೆ ವಾಯುಸೇನೆ ಯಶಸ್ವಿ ದಾಳಿ ನಡೆಸಿತ್ತು.

ಮಿಗ್-21 ಬೈಸನ್ ಬಗ್ಗೆ ಅಪಸ್ವರ ಕೇಳಿ ಬಂದಿತ್ತು

ಮಿಗ್-21 ಬೈಸನ್ ಬಗ್ಗೆ ಅಪಸ್ವರ ಕೇಳಿ ಬಂದಿತ್ತು

60 ದಶಕದ ರಷ್ಯಾ ವಿನ್ಯಾಸದ ಮಿಗ್ 21 ಬೈಸನ್ ಹಳೆಯದಾದರೂ ಅಮೆರಿಕದ ನಿರ್ಮಿತ ಅತ್ಯಾಧುನಿಕ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದನ್ನು ಮರೆಯುವಂತಿಲ್ಲ. ಇನ್ನು ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಬಳಸಿದ್ದ ಮಿಗ್-21 ಬೈಸನ್ ಬಗ್ಗೆ ಬಂದಿರುವ ಅಪಸ್ವರಕ್ಕೆ ಧನೋವಾ ಅವರು ಪ್ರತಿಕ್ರಿಯಿಸಿ, ಅದು ಅತ್ಯಂತ ಸಮರ್ಥ ಯುದ್ಧ ವಿಮಾನ, ಉತ್ತಮ ರಾಡಾರ್ ವ್ಯವಸ್ಥೆ, ಆಕಾಶದಿಂದ ಆಕಾಶಕ್ಕೆ ನೆಗೆಯುವ ಕ್ಷಿಪಣಿಗಳಿವೆ ಅತ್ಯುತ್ತಮ ಶಸ್ತ್ರಾಸ್ತ್ರಗಳೂ ಇವೆ ಎಂದು ಏರ್ ಛೀಫ್ ಮಾರ್ಷಲ್ ಧನೋವಾ ಹೇಳಿದ್ದಾರೆ.

36 ರಾಫೆಲ್ ಯುದ್ಧ ವಿಮಾನ ವ್ಯವಹಾರ ಒಪ್ಪಂದ

36 ರಾಫೆಲ್ ಯುದ್ಧ ವಿಮಾನ ವ್ಯವಹಾರ ಒಪ್ಪಂದ

36 ರಾಫೆಲ್ ಯುದ್ಧ ವಿಮಾನ ವ್ಯವಹಾರ ಒಪ್ಪಂದಕ್ಕೆ ಸೆಪ್ಟೆಂಬರ್ 23, 2016ರಂದು ಶುಕ್ರವಾರ ಉಭಯ ದೇಶಗಳ ಪ್ರತಿನಿಧಿಗಳು ಸಹಿ ಹಾಕಿದರು. ಸುಮಾರು 7.8 ಬಿಲಿಯನ್ ಯುರೋ (ಸುಮಾರು 780 ಕೋಟಿ) ವ್ಯವಹಾರಿಕ ಮೊತ್ತ ಇದಾಗಿದೆ. ಅಂದು ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಮತ್ತು ಫ್ರಾನ್ಸ್ ರಕ್ಷಣಾ ಸಚಿವ ಜಿಯಾನ್ ವೈವೆಸ್ ಲೆಡ್ರಿಯನ್ ಅವರು ದೆಹಲಿಯಲ್ಲಿ ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದರು.

ಅತ್ಯಾಧುನಿಕ ಕ್ಷಿಪಣಿಗಳನ್ನು ಹೊಂದಿರುವ ವಿಮಾನ

ಅತ್ಯಾಧುನಿಕ ಕ್ಷಿಪಣಿಗಳನ್ನು ಹೊಂದಿರುವ ವಿಮಾನ

ಭಾರತೀಯ ವಾಯುಸೇನೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಫ್ರಾನ್ಸಿನಿಂದ ಮೆಟೆಯೊರ್(Meteor) ಕ್ಷಿಪಣಿ, ಸ್ಕಾಲ್ಪ್ ಸೇರಿದಂತೆ ಬಿಡಿಭಾಗಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಭಾರತ ಪಡೆಯಲಿದೆ. ಈ ಅತ್ಯಾಧುನಿಕ ಕ್ಷಿಪಣಿಗಳು 150ಕಿ.ಮೀಗೂ ದೂರದ ವ್ಯಾಪ್ತಿ Beyond Visual Range (BVR) ಯಿಂದಿದೆ.

ರಫೇಲ್ ಯುದ್ಧ ವಿಮಾನ ಏಕೆ ಉಪಯುಕ್ತ

ರಫೇಲ್ ಯುದ್ಧ ವಿಮಾನ ಏಕೆ ಉಪಯುಕ್ತ

ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತವು 50 ಕಿ.ಮೀ ವ್ಯಾಪ್ತಿಯ ಕ್ಷಿಪಣಿಗಳನ್ನು ಬಳಸಿತ್ತು. ಈಗ 150 ಕಿ.ಮೀ ವ್ಯಾಪ್ತಿಯ ತನಕ ಟಾರ್ಗೆಟ್ ಇಡಬಹುದಾಗಿದೆ. ಈ ಮೂಲಕ ಪಾಕಿಸ್ತಾನ ಎಲ್ಲಾ ಭಾಗಗಳು, ಉತ್ತರ ಹಾಗೂ ಈಶಾನ್ಯ ಗಡಿಭಾಗದ ಎಲ್ಲಾ ಭಾಗಗಳನ್ನು ಕ್ರಮಿಸಬಲ್ಲ ಕ್ಷಿಪಣಿಗಳನ್ನು ಹೊಂದಿದ್ದಂತಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+