ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

450 ರೂಪಾಯಿಗೆ ಕೊರೊನಾ ಪರೀಕ್ಷೆ, 15 ನಿಮಿಷದಲ್ಲಿ ಟೆಸ್ಟ್ ಪೂರ್ಣ

|
Google Oneindia Kannada News

ದೆಹಲಿ, ಜೂನ್ 15: ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಸರ್ವಪಕ್ಷಗಳ ಸಭೆ ಕರೆದಿದ್ದರು. ಈ ಸಭೆಯಲ್ಲಿ ಅಮ್ ಆದ್ಮಿ ಪಕ್ಷ, ಬಿಜೆಪಿ, ಕಾಂಗ್ರೆಸ್, ಬಿಎಸ್‌ಪಿ, ಎಸ್‌ಪಿ ಪಕ್ಷಗಳು ಭಾಗವಹಿಸಿದ್ದವು.

Recommended Video

Eating Garlic During Pregnancy – Benefits, Risks | Oneindia Kannada

ಇದಕ್ಕೂ ಮುಂಚೆ ಭಾನುವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೊತೆ ಅಮಿತ್ ಶಾ ಸಭೆ ಮಾಡಿದ್ದರು. ಸೋಮವಾರ ಸಭೆಯಲ್ಲಿ ಕೇಂದ್ರ ಸಚಿವರ ಮುಂದೆ ದೆಹಲಿ ಪಕ್ಷಗಳು ಹಲವು ಬೇಡಿಕೆಗಳನ್ನು ಇಟ್ಟಿದ್ದು, ಮುಂದಿನ ದಿನ ಏನೆಲ್ಲಾ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ಕೊರೊನಾಗೆ ತುತ್ತಾದ ಕುಟುಂಬಕ್ಕೆ 10 ಸಾವಿರ ನೀಡಿ: ದೆಹಲಿ ಕಾಂಗ್ರೆಸ್ ಒತ್ತಾಯಕೊರೊನಾಗೆ ತುತ್ತಾದ ಕುಟುಂಬಕ್ಕೆ 10 ಸಾವಿರ ನೀಡಿ: ದೆಹಲಿ ಕಾಂಗ್ರೆಸ್ ಒತ್ತಾಯ

ಈ ಮಧ್ಯೆ ದೆಹಲಿಯಲ್ಲಿ 450 ರೂಪಾಯಿಗೆ ಕೊರೊನಾ ಪರೀಕ್ಷೆ ಮಾಡಲಾಗುವುದು ಎಂದು ಅಮ್ ಆದ್ಮಿ ಪಕ್ಷದ ಹಿರಿಯ ನಾಯಕ ಸಂಜಯ್ ಸಿಂಗ್ ಹೇಳಿದ್ದಾರೆ. ಇದು ನಿಜಕ್ಕೂ ಅಚ್ಚರಿ ಮತ್ತು ಜಾರಿಯಾದರೆ ದೆಹಲಿಯಲ್ಲಿ ಹೆಚ್ಚು ಪರೀಕ್ಷೆಗಳು ಆಗಲಿದೆ. ಮುಂದೆ ಓದಿ...

450 ರೂಪಾಯಿ, 15 ನಿಮಿಷದಲ್ಲಿ ಟೆಸ್ಟ್ ಪೂರ್ಣ

450 ರೂಪಾಯಿ, 15 ನಿಮಿಷದಲ್ಲಿ ಟೆಸ್ಟ್ ಪೂರ್ಣ

ಸರ್ವಸಭೆ ಪಕ್ಷಗಳ ಸಭೆ ಬಳಿಕ ಮಾತನಾಡಿದ್ದ ಅಮ್ ಆದ್ಮಿ ಪಾರ್ಟಿಯ ನಾಯಕ ಸಂಜಯ್ ಸಿಂಗ್ ''450 ಬೆಲೆಯಲ್ಲಿ ಕೊರೊನಾ ಪರೀಕ್ಷೆ ಮಾಡುವ ಹೊಸ ವಿಧಾನ ಆರಂಭಿಸಲಿದ್ದೇವೆ. 15 ನಿಮಿಷದಲ್ಲಿ ನಿಮಿಷದಲ್ಲಿ ಟೆಸ್ಟ್ ಪೂರ್ಣವಾಗಲಿದೆ. ಅತಿ ಶೀಘ್ರದಲ್ಲಿ ಈ ವ್ಯವಸ್ಥೆ ಜಾರಿಯಾಗಲಿದೆ'' ಎಂದು ಮಾಹಿತಿ ನೀಡಿದ್ದಾರೆ. ಈ ಕುರಿತು ಇಂಡಿಯಾ ಟುಡೇ ವರದಿ ಮಾಡಿದೆ.

ಇದು ಸಾಧ್ಯನಾ?

ಇದು ಸಾಧ್ಯನಾ?

ಪ್ರಸ್ತುತ ಖಾಸಗಿ ಲ್ಯಾಬ್‌ಗಳಲ್ಲಿ ಕೊರೊನಾ ಪರೀಕ್ಷೆ ಮಾಡಲು 4500 ರೂಪಾಯಿ ನಿಗದಿ ಮಾಡಲಾಗಿದೆ. ಬಡವರಿಗೆ ಉಚಿತವಾಗಿ ಕೊರೊನಾ ಪರೀಕ್ಷೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದ್ದಾಗ, ಖಾಸಗಿ ಲ್ಯಾಬ್‌ಗಳು ಮೇಲ್ಮನವಿ ಸಲ್ಲಿಸಿ 'ಇದು ಕಷ್ಟ' ಎಂದು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟಿತ್ತು. ಬಳಿಕ, ಸರ್ಕಾರಕ್ಕೆ ಬೆಲೆ ನಿಗದಿ ಪಡಿಸುವ ಅಧಿಕಾರ ನೀಡಿತ್ತು. ಕೇಂದ್ರದ ಸೂಚನೆಯಂತೆ ಐಸಿಎಂಆರ್ 4500 ರೂಪಾಯಿ ನಿಗದಿತ ಬೆಲೆ ಫಿಕ್ಸ್ ಮಾಡಿದೆ. ಹೀಗಿರುವಾಗ, 450 ರೂಪಾಯಿಗೆ ದೆಹಲಿಯಲ್ಲಿ ಕೊವಿಡ್ ಪರೀಕ್ಷೆ ಎಷ್ಟರ ಮಟ್ಟಿಗೆ ಸಾಧ್ಯ ಎಂಬುದು ಪ್ರಶ್ನೆಯಾಗಿದೆ.

ದಿನಕ್ಕೆ 18000 ಸಾವಿರ ಪರೀಕ್ಷೆ!

ದಿನಕ್ಕೆ 18000 ಸಾವಿರ ಪರೀಕ್ಷೆ!

ದೆಹಲಿಯಲ್ಲಿ ಪ್ರತಿಯೊಬ್ಬರಿಗೂ ಕೊರೊನಾ ಪರೀಕ್ಷೆ ಮಾಡಬೇಕೆಂದು ಸರ್ವಪಕ್ಷ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕಾಂಗ್ರೆಸ್ ಪಕ್ಷವೂ ಈ ಬೇಡಿಕೆಯನ್ನು ಕೇಂದ್ರ ಸಚಿವರ ಮುಂದೆ ಇಟ್ಟಿತ್ತು. ಹಾಗಾಗಿ, ಜೂನ್ 20 ರಿಂದ ದೆಹಲಿಯಲ್ಲಿ ಒಂದು ದಿನಕ್ಕೆ 18000 ಸಾವಿರ ಜನರಿಗೆ ಕೊರೊನಾ ಪರೀಕ್ಷೆ ಮಾಡಬೇಕಾಗಿದೆ ಎಂದು ಅಮಿತ್ ಶಾ ಮಾಹಿತಿ ನೀಡಿದ್ದಾರೆ. ಇದೇ ಅಂಶವನ್ನು ಅಮ್ ಆದ್ಮಿ ಪಕ್ಷದ ನಾಯಕ ಅಂಜಯ್ ಸಿಂಗ್ ಸಹ ಹೇಳಿದ್ದಾರೆ.

ಕೊರೊನಾಗೆ ತುತ್ತಾದ ಕುಟುಂಬಕ್ಕೆ 10 ಸಾವಿರ

ಕೊರೊನಾಗೆ ತುತ್ತಾದ ಕುಟುಂಬಕ್ಕೆ 10 ಸಾವಿರ

ಇನ್ನು ಸರ್ವಪಕ್ಷ ಸಭೆಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ಪಕ್ಷದ ನಾಯಕರು, ''ಕೊರೊನಾ ಸೋಂಕಿಗೆ ಒಳಗಾಗಿರುವ ಮತ್ತು ಕಂಟೈನ್‌ಮೆಂಟ್‌ ಜೋನ್‌ಗಳಲ್ಲಿ ವಾಸವಾಗಿರುವ ಕುಟುಂಬಗಳಿಗೆ ತಲಾ 10 ಸಾವಿರ ರೂಪಾಯಿ ಘೋಷಣೆ ಮಾಡಬೇಕೆಂದು'' ಒತ್ತಾಯಿಸಿದ್ದಾರೆ.

ಮುಂಬೈನಲ್ಲಿ ಬೆಲೆ ಇಳಿಕೆ ಮಾಡಿದ್ದ ಸರ್ಕಾರ

ಮುಂಬೈನಲ್ಲಿ ಬೆಲೆ ಇಳಿಕೆ ಮಾಡಿದ್ದ ಸರ್ಕಾರ

ಮುಂಬೈನಲ್ಲಿ ಕೊರೊನಾ ಪರೀಕ್ಷೆ ಬೆಲೆಯಲ್ಲಿ ಇಳಿಕೆ ಮಾಡಲಾಗಿತ್ತು. ಖಾಸಗಿ ಪ್ರಯೋಗಾಲಯದಲ್ಲಿ ಕೊರೊನಾ ಪರೀಕ್ಷೆ ಮಾಡಲು 4400 ರೂಪಾಯಿ ಪಡೆಯುತ್ತಿದ್ದರು. ಅದನ್ನು 2200 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಆಸ್ಪತ್ರೆಗಳಿಂದ ವೈರಲ್ ಟ್ರಾನ್ಸ್‌ಪೋರ್ಟ್ ಮೀಡಿಯಾ (ವಿಟಿಎಂ) ಮೂಲಕ ಸ್ವ್ಯಾಬ್‌ಗಳನ್ನು ಸಂಗ್ರಹಿಸಲು 2,200 ರೂ.ಗಳನ್ನು ವಿಧಿಸಲಾಗುವುದು. ಒಂದು ವೇಳೆ ಮನೆಯಿಂದ ಸ್ವ್ಯಾಬ್ ಸಂಗ್ರಹಿಸಿದರೆ 2,800 ರೂ. ವೆಚ್ಚವಾಗಲಿದೆ' ಎಂದು ಆರೋಗ್ಯ ಇಲಾಖೆ ಘೋಷಣೆ ಮಾಡಿತ್ತು.

English summary
New coronavirus test in delhi to cost only 450 rupees said AAP leader Sanjay singh after All Party Meeting today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X