ಬೆಂಗಳೂರು ಟ್ರಾಫಿಕ್‌ ಪೊಲೀಸ್‌ ಜೊತೆ ಹಿಂದಿ ಯುವಕನ ಕಿರಿಕ್‌, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್‌ಲೆಸ್‌ ಎಂದು ಅವಾಜ್‌

ಬೆಂಗಳೂರು: ಸಿಲಿಕಾನ್ ಸಿಟಿಯ ಅತ್ಯಂತ ಜನನಿಬಿಡ ಪ್ರದೇಶವಾದ ಗಾಂಧಿಬಜಾರ್‌ನ ಡಿವಿಜಿ ರಸ್ತೆಯಲ್ಲಿ ದೆಹಲಿ ಮೂಲದ ಬೈಕ್ ಸವಾರನೊಬ್ಬ ತನ್ನ ಉದ್ಧಟತನದಿಂದ ಭಾರಿ ಸಂಚಾರಿ ದಟ್ಟಣೆ ಉಂಟುಮಾಡಿರುವ ವಿಡಿಯೋ ವೈರಲ್‌ ಆಗಿದೆ. ಈ ವೇಳೆ ಮಧ್ಯಪ್ರವೇಶಿಸಿ ಪ್ರಶ್ನೆ ಮಾಡಿದ ಕನ್ನಡಿಗರ ಮೇಲೂ ಹಿಂದಿ ಯುವಕ ಅವಾಜ್‌ ಹಾಕಿದ್ದಾನೆ. ಟ್ರಾಫಿಕ್ ಪೊಲೀಸರ ಮೇಲೂ ಕೂಗಾಡಿರುವ ಘಟನೆಗೆ ಭಾರೀ ಖಂಡನೆ ವ್ಯಕ್ತವಾಗುತ್ತಿದೆ.

ವೈರಲ್‌ ವಿಡಿಯೋದಲ್ಲಿ ಇಕ್ಕಟ್ಟಾದ ಮತ್ತು ಜನದಟ್ಟಣೆಯ ಡಿವಿಜಿ ರಸ್ತೆಯಲ್ಲಿ ಈ ಮಹಾಶಯ ತನ್ನ ಬೈಕ್ ಅನ್ನು ಅಡ್ಡಾದಿಡ್ಡಿಯಾಗಿ ಪಾರ್ಕ್ ಮಾಡಿದ್ದರಿಂದ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಾರ್ವಜನಿಕರು ಇದನ್ನು ಪ್ರಶ್ನಿಸಿದಾಗ, ಆತ ಕನಿಷ್ಠ ಕ್ಷಮೆ ಕೇಳುವ ಬದಲು, "ಈ ರಸ್ತೆ ನಿಮ್ಮಪ್ಪಂದಾ?" ಎಂದು ಅಹಂಕಾರದಿಂದ ಪ್ರಶ್ನಿಸಿದ್ದಾನೆ.

Viral Video

ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲೀಸರು ವಾಹನ ತೆರವುಗೊಳಿಸಲು ಸೂಚಿಸಿದಾಗ, ಅವರ ಮೇಲೂ ಆತ ಕಿರುಚಾಡುತ್ತಾ ಏಕವಚನದಲ್ಲಿ ಮಾತನಾಡಿರುವುದು ಅಲ್ಲಿನ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಮ್ಮ ನೆಲದಲ್ಲಿ ಬಂದು, ನಮ್ಮವರಿಗೇ ಟ್ರಾಫಿಕ್ ಕಿರಿಕಿರಿ ಉಂಟುಮಾಡಿ, ಮತ್ತೆ ನಮ್ಮನ್ನೇ ಪ್ರಶ್ನಿಸುವ ಇಂತಹ ಕಿಡಿಗೇಡಿಗಳ ಅಹಂಕಾರಕ್ಕೆ ಕಡಿವಾಣ ಬೀಳಲೇಬೇಕು ಎಂದು ಬೆಂಗಳೂರು ಪೊಲೀಸರನ್ನು ಟ್ಯಾಗ್‌ ಮಾಡುತ್ತಿದ್ದಾರೆ.

ಇದು ಡೆಲ್ಲಿ ಅಲ್ಲ: ಕನ್ನಡಿಗರ ಎಚ್ಚರಿಕೆ

ನಮ್ಮ ಬೆಂಗಳೂರಿನ ರಸ್ತೆಗಳಲ್ಲಿ ಅಕ್ರಮವಾಗಿ ವಾಹನ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ಕೊಡುವುದಲ್ಲದೆ, ಪ್ರಶ್ನಿಸಿದ ಕನ್ನಡಿಗರು ಮತ್ತು ಪೊಲೀಸರ ವಿರುದ್ಧವೇ ದರ್ಪ ತೋರಿದ್ದಾನೆ. ಪೊಲೀಸರು ಆತನ ಭಾಷೆಯಾದ ಹಿಂದಿಯಲ್ಲೇ ಮಾತನಾಡಿ ಬುದ್ಧಿವಾದ ಹೇಳಲು ಹೋದರೂ, ಆತ ಅವರ ಮೇಲೆಯೇ ಕೂಗಾಡಿ ಅಸಭ್ಯವಾಗಿ ವರ್ತಿಸಿದ್ದಾನೆ. ರಕ್ಷಣೆ ನೀಡಬೇಕಾದ ಪೊಲೀಸರಿಗೇ ಗೌರವ ಕೊಡದ ಈತನ ಮದ ಎಷ್ಟಿರಬಹುದು ಎಂಬುದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಪ್ರಶ್ನಿಸಿದ ಕನ್ನಡಿಗರಿಗೆ "ಜಾಬ್‌ಲೆಸ್" ಪಟ್ಟ

ಟ್ರಾಫಿಕ್ ಜಾಮ್‌ನಿಂದ ಹೈರಾಣಾಗಿ ಪ್ರಶ್ನೆ ಮಾಡಲು ಬಂದ ಕನ್ನಡಿಗರನ್ನು ಕಂಡ ಈತ, "ಹೋಗಿ ನಿನ್ನ ಕೆಲಸ ನೋಡ್ಕೋ, ನೀವೆಲ್ಲಾ ಜಾಬ್‌ಲೆಸ್ (ಕೆಲಸವಿಲ್ಲದವರು)" ಎಂದು ಹೀಯಾಳಿಸಿದ್ದಾನೆ. ನಮ್ಮೂರಲ್ಲೇ ಬಂದು ನಮಗೇ ಕೆಲಸವಿಲ್ಲ ಎಂದು ನಿಂದಿಸಿದ್ದಾನೆ. ಪೊಲೀಸರ ಜೊತೆ ವಾಗ್ವಾದ ಮಾಡಬೇಡ ಎಂದು ಬುದ್ಧಿ ಹೇಳಿದರೂ, "ವಿಡಿಯೋ ಮಾಡ್ತೀಯಾ? ಮಾಡ್ಕೋ" ಎಂದು ಕ್ಯಾಮೆರಾ ಮುಂದೆಯೇ ಧಮ್ಕಿ ಹಾಕಿದ್ದಾನೆ.

ಬೆಂಗಳೂರನ್ನು ಅತಿಥಿ ಸತ್ಕಾರದ ಊರು ಎಂದು ಭಾವಿಸಿ ಇಲ್ಲಿಗೆ ಬರುವವರು, ನಮ್ಮ ಮೌನವನ್ನೇ ದೌರ್ಬಲ್ಯ ಎಂದು ಭಾವಿಸಿದಂತಿದೆ. ಇದು ಡೆಲ್ಲಿ ಅಲ್ಲ, ಇಲ್ಲಿ ನಿಮ್ಮ ದರ್ಪ ನಡೆಯಲ್ಲ ಎಂದು ಸ್ಥಳೀಯರು ಆತನಿಗೆ ಸರಿಯಾದ ಭಾಷೆಯಲ್ಲೇ ಎಚ್ಚರಿಕೆ ಕೊಟ್ಟಿದ್ದಾರೆ. ಕಾನೂನು ಪಾಲಿಸುವುದು ಬಿಟ್ಟು, ಸಾರ್ವಜನಿಕರನ್ನು ನಿಂದಿಸುವ ಇಂತಹ ಪ್ರವೃತ್ತಿಯವರಿಗೆ ಪೊಲೀಸರು ಕಠಿಣ ದಂಡದ ಜೊತೆಗೆ ಜೈಲು ಶಿಕ್ಷೆಯನ್ನೂ ನೀಡಬೇಕು ಎಂಬ ಒತ್ತಾಯ ಸೋಷಿಯಲ್‌ ಮೀಡಿಯಾದಲ್ಲಿ ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+