Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ
Summer Special Trains: ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಈಗಾಗಲೇ ಆರಂಭವಾಗಿದೆ. ಮಕ್ಕಳು, ಕುಟುಂಬಸ್ಥರೊಂದಿಗೆ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಿರುತ್ತದೆ. ಈ ಕಾರಣಕ್ಕೆ ಬೇಸಿಗೆ ವಿಶೇಷ ರೈಲುಗಳನ್ನು ನೈಋತ್ಯ ರೈಲು ಆರಂಭಿಸಿದೆ. ಮೈಸೂರು-ದಿಬೂಗಡ ನಡುವೆ ವಿಶೇಷ ಎಕ್ಸ್ ಪ್ರೆಸ್ ಸಂಚಾರ ಮಾಡಲಿದ್ದು, ಇದರ ಮಾರ್ಗ, ನಿಲುಗಡೆ, ವೇಳಾಪಟ್ಟಿ ಮಾಹಿತಿ ಇಲ್ಲಿ ನೀಡಲಾಗಿದೆ.
ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ನೈಋತ್ಯ ರೈಲ್ವೆ ಅಧಿಕಾರಿಗಳು ಮೈಸೂರು - ದಿಬ್ರೂಗಡ (Mysuru-Dibrugad Summer Express Train) ನಡುವೆ 2 ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲುಗಳು ನಿಗದಿತ ಸಮಯದಂತೆ ಕಾರ್ಯಾಚರಣೆ ನಡೆಸಲಿವೆ ಎಂದು ತಿಳಿಸಲಾಗಿದೆ. ಪ್ರಯಾಣಿಕರ ಈ ರೈಲಿನ ವೇಳಾಪಟ್ಟಿಯಂತೆ ಪ್ರಯಾಣಕ್ಕೆ ಪ್ಲ್ಯಾನ್ ಮಾಡಿಕೊಳ್ಳಬಹುದು.

ಮೈಸೂರು-ದಿಬ್ರುಗಡ ಎಕ್ಸ್‌ಪ್ರೆಸ್ ರೈಲು (06253) ಏಪ್ರಿಲ್ 12 ಮತ್ತು 26ರವರೆಗೆ ಮೈಸೂರಿನಿಂದ ಬೆಳಗ್ಗೆ 08 ಗಂಟೆಗೆ ಸಂಚಾರ ಆರಂಭಿಸುತ್ತದೆ. ಬುಧವಾರ ಬೆಳಗ್ಗೆ 01:30ಕ್ಕೆ ದಿಬ್ರುಗಢ ನಿಲ್ದಾಣವನ್ನು ತಲುಪುತ್ತದೆ. ಮರಳಿ ಅದೇ ದಿಕ್ಕಿನಲ್ಲಿ ದಿಬ್ರುಗಡ-ಮೈಸೂರು ಎಕ್ಸ್‌ಪ್ರೆಸ್ ರೈಲು (06254) ಏಪ್ರಿಲ್ 16 ಮತ್ತು 30ರಂದು ಎರಡು ದಿನ ದಿಬ್ರೂಗ ರೈಲು ನಿಲ್ದಾಣದಿಂದ ಮಂಗಳವಾರ ಬೆಳಗ್ಗೆ 01:30 ಗಂಟೆಗೆ ಹೊರಡುತ್ತದೆ. ಅದು ಶನಿವಾರ ಮಧ್ಯಾಹ್ನ 04:15ಕ್ಕೆ ಮೈಸೂರು ನಿಲ್ದಾಣಕ್ಕೆ ಬರಲಿದೆ. ಒಟ್ಟು ಎರಡು ದಿಕ್ಕಿನಲ್ಲಿ ತಲಾ ಎರಡು ಟ್ರಪ್‌ಗಳ ಸೇವೆ ಪೂರೈಸಲಿದೆ.
ಮೈಸೂರು-ದಿಬ್ರುಗಢ ರೈಲಿನ ನಿಲುಗಡೆ ನಿಲ್ದಾಣಗಳು
ಮೈಸೂರಿನಿಂದ ಹೊರಡುವ ಈ ರೈಲು ಮಾರ್ಗ ಮಧ್ಯದಲ್ಲಿ (ಎರಡು ದಿಕ್ಕಿನಲ್ಲಿ) ಈ ರೈಲು ಮಂಡ್ಯ, ಮದ್ದೂರು, ಕೆಂಗೇರಿ, ಕೆಎಸ್‌ಆರ್ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರಪೇಟೆ, ಕತ್ತಾಡಿ, ರೇಣಿಗುಂಟಾ, ಗುಡೂರು, ನೆಲ್ಲೂರು, ಓಂಗೋಲ್, ವಿಜಯವಾಡ, ರಾಜಮಂಡ್ರಿ, ಕೊತ್ತವಲಸ, ವಿಜಯನಗರಂ, ಶ್ರೀಕಾಕುಳಂ ರೋಡ್, ಪಲಾಸಾ, ಬ್ರಹ್ಮಪುರ, ಬಾಲುಗಾಂ, ಖುರ್ದಾ ರೋಡ್, ಭುವನೇಶ್ವರ, ಕಟಕ್, ಜಾಜ್ಜುರ ಕೆ ರೋಡ್, ಭದ್ರಕ್, ಬಾಲಸೋರ್, ಖರಗುರ್, ಅಂಡುಲ್, ಧನಕುಣಿ, ಬರ್ಧಮಾನ, ಬಾಲ್ಪೂರ್ ಎಸ್ ನಿಕ್ಕಿನ್, ರಾಮುರ ಹಾಟ್, ನ್ಯೂ ಫರಕ್ಕಾ, ಮಾಲ್ಡಾ ಟೌನ್, ಕಿಶನ್ ಗಂಜ್, ನ್ಯೂ ಜಲ್ಪೈಗುಡಿ, ನ್ಯೂ ಕೊಚ್ ಬಿಹಾರ್, ಕೋಕರಜಾರ್, ನ್ಯೂ ಬಾಂಗಾಯಿಗಾಂವ್, ಬರಪೆಟಾ ರೋಡ್, ರಂಗಿಯಾ, ರಂಗಪಾರಾ ನಾರ್ತ್, ವಿಶ್ವನಾಥ ಚರಲಿ, ಹರ್‌ಮತಿ, ನಾರ್ತ್ ಲಖಿಮಪುರ್, ಧೇಮಾಜಿ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲುಗಡೆಗಳನ್ನು ನೀಡಲಿದೆ.
20 ಬೋಗಿಗಳ ರೈಲು
ಈ ಬೇಸಿಗೆ ವಿಶೇಷ ರೈಲು 2 ಎಸಿ ಟು-ಟಿಯರ್, 4 ಎಸಿ ತ್ರಿ-ಟಿಯರ್, 6 ಸ್ವೀಪರ್ ವರ್ಗ, 6 ಸಾಮಾನ್ಯ ದ್ವಿತೀಯ ವರ್ಗ ಹಾಗೂ 2 ಎಸ್ಎಲ್ಆರ್‍ಡಿ ಸೇರಿ ಒಟ್ಟು ಒಟ್ಟು 20 ಬೋಗಿಗಳನ್ನು ಹೊಂದಿರಲಿದೆ. ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಉತ್ತಮ ಸೇವೆ ನೀಡಲಿದೆ. ಇದರ ವೇಳಾಪಟ್ಟಿ ಆಧರಿಸಿ ಪ್ರಯಾಣಕ್ಕೆ ಯೋಜಿಸುವಂತೆ ನೈಋತ್ಯ ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ಶನಿವಾರ ತಿಳಿಸಿದ್ದಾರೆ.












Click it and Unblock the Notifications