Get Updates
Get notified of breaking news, exclusive insights, and must-see stories!

Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ

ಏಪ್ರಿಲ್‌ ಮೂರನೇ ವಾರದಲ್ಲಿ ಅಂದರೆ ಏಪ್ರಿಲ್ 13ರಿಂದ ಏಪ್ರಿಲ್ 19ರವರೆಗೆ ಗ್ರಹಗಳ ಸ್ಥಾನಗಳಲ್ಲಿ ಗಮನಾರ್ಹ ಬದಲಾವಣೆಗಳಾಗುವ ನಿರೀಕ್ಷೆಯಿದೆ. ಈ ಬದಲಾವಣೆಗಳು ಪ್ರತಿಯೊಂದು ರಾಶಿಯವರ ಮೇಲೆ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತವೆ.ಕೆಲವು ರಾಶಿಯವರಿಗೆ ಈ ಸಮಯದಲ್ಲಿ ಹೊಸ ಮತ್ತು ಉತ್ತಮ ಅವಕಾಶಗಳು ಒದಗಿಬರಬಹುದು. ಅನಿರೀಕ್ಷಿತ ಲಾಭಗಳೂ ಆಗಬಹುದು.ಇನ್ನು ಕೆಲವರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ.ಈ ವಾರವು ಯಾವ ರಾಶಿಯವರಿಗೆ ಶುಭ ಮತ್ತು ಯಾವ ರಾಶಿಯವರಿಗೆ ಅಶುಭ ಫಲವನ್ನು ನೀಡುತ್ತದೆ ನೋಡೋಣ. ಹನ್ನೆರಡು ರಾಶಿಯವರ ಈ ವಾರದ ಫಲಾಫಲ ಹೀಗಿದೆ.

ಮೇಷ ರಾಶಿ:

ಈ ವಾರ ಮೇಷ ರಾಶಿಯವರಿಗೆ ಅತ್ಯಂತ ಶುಭವಾಗಿರಲಿದೆ. ಕೆಲವು ಒಳ್ಳೆಯ ಸುದ್ದಿಗಳೊಂದಿಗೆಯೇ ಈ ವಾರ ಆರಂಭವಾಗುವ ಸಾಧ್ಯತೆ ಇದೆ.ಈ ವಾರ ಕೆಲಸ ಕಾರ್ಯಗಳನ್ನು ಧೈರ್ಯದಿಂದ ಮಾಡಿ ಮುಗಿಸುವಿರಿ.ಕೆಲಸದಲ್ಲಿ ನಿಮ್ಮ ಕೆಲಸಕ್ಕೆ ಮನ್ನಣೆ ಸಿಗಲಿದೆ. ನಿಮ್ಮ ಕಾರ್ಯಕ್ಷಮತೆಯ ಆಧಾರದ ಮೇಲೆ ನಿಮ್ಮ ಸ್ಥಾನಮಾನ ಹೆಚ್ಚಾಗಬಹುದು. ವ್ಯವಹಾರ ದೃಷ್ಟಿಕೋನದಿಂದ, ಈ ವಾರ ಕಳೆದ ವಾರಕ್ಕಿಂತ ಹೆಚ್ಚು ಅನುಕೂಲಕರವಾಗಿರಲಿದೆ. ವ್ಯವಹಾರದಲ್ಲಿ ನಿರೀಕ್ಷಿತ ಪ್ರಗತಿಯಾಗುವುದು.ಆರ್ಥಿಕ ಪರಿಸ್ಥಿತಿ ಬಲಗೊಳ್ಳುವುದು. ನಿರುದ್ಯೋಗಿಗಳು ಉದ್ಯೋಗ ಸಿಗುವ ಸಾಧ್ಯತೆಯಿದೆ.

Weekly Horoscope

ವೃಷಭ ರಾಶಿ:

ಈ ವಾರ ಸ್ವಲ್ಪ ಹೆಚ್ಚು ಕಾರ್ಯನಿರತವಾಗಿರುತ್ತದೆ. ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಹೆಚ್ಚುವರಿ ಶ್ರಮ ವ್ಯಯಿಸಬೇಕಾಗುತ್ತದೆ. ಅಂತಿಮವಾಗಿ ಅಪೇಕ್ಷಿತ ಯಶಸ್ಸು ಮತ್ತು ಲಾಭ ಸಿಗುವುದು. ವಾರದ ಆರಂಭದಲ್ಲಿ ಒಂದು ಪ್ರಮುಖ ಕಾರ್ಯದಲ್ಲಿ ಯಶಸ್ಸು ಸಿಗುವುದು. ವಾರದ ಮೊದಲಾರ್ಧಕ್ಕೆ ಹೋಲಿಸಿದರೆ, ದ್ವಿತೀಯಾರ್ಧವು ಸ್ವಲ್ಪ ಹೆಚ್ಚು ನಿರಾಳವಾಗಿರುತ್ತದೆ ಮತ್ತು ಅಪೇಕ್ಷಿತ ಫಲ ಸಿಗುವುದು. ಈ ಸಮಯದಲ್ಲಿ ಅದೃಷ್ಟ ನಿಮ್ಮ ಪಾಲಿಗಿರುವುದು.ಸಂಗಾತಿಯ ಆರೋಗ್ಯವು ಕಳವಳವನ್ನುಂಟು ಮಾಡಬಹುದು.

ಮಿಥುನ ರಾಶಿ:

ಈ ವಾರವಿಡೀ ನಿಮ್ಮ ಅದೃಷ್ಟ ಬಲವಾಗಿರುತ್ತದೆ. ಕೆಲಸದಲ್ಲಿ ನಿರ್ಲಕ್ಷಿಸಲ್ಪಟ್ಟವರಿಗೆ ಇದ್ದಕ್ಕಿದ್ದಂತೆ ಪ್ರತಿಯೊಂದು ಕೆಲಸದಲ್ಲೂ ಆದ್ಯತೆ ಸಿಗುವುದು. ಉತ್ಸಾಹ ಮತ್ತು ಧೈರ್ಯದಿಂದ ಪ್ರಮುಖ ಕಾರ್ಯಗಳಲ್ಲಿ ಜಯ ಗಳಿಸುವುದು ಸಾಧ್ಯವಾಗುವುದು.ಅಪೇಕ್ಷಿತ ಜವಾಬ್ದಾರಿ ನಿಮ್ಮ ಹೆಗಲೇರಬಹುದು.ವಿದ್ಯಾರ್ಥಿಗಳು ಮತ್ತು ಪರೀಕ್ಷಾರ್ಥಿಗಳಿಗೆ ಸಮಯ ಅನುಕೂಲಕರವಾಗಿರಲಿದೆ. ಅಧ್ಯಯನದಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ.ಈ ವಾರ ವ್ಯವಹಾರ ಮತ್ತು ಆರ್ಥಿಕ ದೃಷ್ಟಿಕೋನದಿಂದ ಅದೃಷ್ಟದಾಯಕವಾಗಿರಲಿದೆ.ವೈವಾಹಿಕ ಜೀವನವು ಸಂತೋಷವಾಗಿರುತ್ತದೆ.

ಕರ್ಕಾಟಕ ರಾಶಿ:

ಕರ್ಕಾಟಕ ರಾಶಿಯವರಿಗೆ ಈ ವಾರ ಮಿಶ್ರ ಫಲ ಸಿಗಲಿದೆ. ವಾರದ ಆರಂಭದಲ್ಲಿ ಕೆಲವು ಆರೋಗ್ಯ ಸಮಸ್ಯೆಗಳು ಎದುರಾಗಬಹುದು.ಕೆಲಸದಲ್ಲಿನ ಅಡೆತಡೆಗಳು ಉತ್ಸಾಹವನ್ನು ಕುಗ್ಗಿಸಬಹುದು.ಅತಿಯಾದ ಸೋಮಾರಿತನದಿಂದಾಗಿ ನಿಮ್ಮ ಕೆಲಸ ಕಾರ್ಯಗಳು ಪೂರ್ಣವಾಗದೇ ಇರಬಹುದು.ವಾರದ ಮೊದಲಾರ್ಧವು ಆರೋಗ್ಯದ ದೃಷ್ಟಿಕೋನದಿಂದ ಪ್ರತಿಕೂಲ ಪರಿಣಾಮಗಳನ್ನೇ ಬೀರಬಹುದು.ವ್ಯವಹಾರದಲ್ಲಿಯೂ ಹೆಚ್ಚು ಜಾಗೃತೆ ವಹಿಸಬೇಕಾಗುವುದು.ಇಲ್ಲದಿದ್ದರೆ ಅನಗತ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಸಿಂಹ ರಾಶಿ:

ಸಿಂಹ ರಾಶಿಯವರು ತಮ್ಮ ನಡವಳಿಕೆ ಬಗ್ಗೆ ಎಚ್ಚರದಿಂದಿರಬೇಕು.ಯಾವುದೇ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಲು ಪ್ರಯತ್ನಿಸಿ. ವೃತ್ತಿಯಾಗಿರಲಿ ಅಥವಾ ವ್ಯವಹಾರವಾಗಿರಲಿ, ಈ ವಾರ ಸ್ವಲ್ಪ ರಾಜಿ ಮಾಡಿಕೊಂಡರೆ ಭವಿಷ್ಯದಲ್ಲಿ ಹೆಚ್ಚಿನ ಪ್ರಯೋಜನವಾಗುವುದು.ವಾರದ ಮಧ್ಯದಲ್ಲಿ ಕೆಲಸಕ್ಕಾಗಿ ದೂರದ ಪ್ರಯಾಣ ಮಾಡಬೇಕಾಗಬಹುದು.ವಾರದ ಉತ್ತರಾರ್ಧವು ಮೊದಲಾರ್ಧಕ್ಕಿಂತ ಸ್ವಲ್ಪ ಹೆಚ್ಚು ಲಾಭದಾಯಕವಾಗಿರಲಿದೆ. ಆದರೆ ಈ ಸಮಯದಲ್ಲಿಯೂ ವ್ಯಾಪಾರಸ್ಥರು ಹಣಕಾಸಿನ ವಹಿವಾಟುಗಳಲ್ಲಿ ಜಾಗರೂಕರಾಗಿರಬೇಕು.

ಕನ್ಯಾ ರಾಶಿ:

ಈ ರಾಶಿಯಲ್ಲಿ ಜನಿಸಿದವರು ವಾರದ ಆರಂಭದಿಂದಲೇ ತಮ್ಮ ಹಣ, ಸಮಯ ಮತ್ತು ಶಕ್ತಿಯನ್ನು ಬುದ್ಧಿವಂತಿಕೆಯಿಂದ ಬಳಸಿಕೊಳ್ಳಬೇಕಾಗುತ್ತದೆ. ಉದ್ಯೋಗದಲ್ಲಿರುವವರಿಗೆ, ಈ ವಾರ ಸ್ವಲ್ಪ ಅಸ್ಥಿರವಾಗಿರುತ್ತದೆ. ಮನೆಕೆಲಸ ಮತ್ತು ಇತರ ಕೆಲಸಗಳಲ್ಲಿ ನಿರತರಾಗಿರುವುದು ಕೆಲಸಕ್ಕೆ ಸಂಬಂಧಿಸಿದ ಕೆಲಸಗಳ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಮತ್ತು ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಪೂರ್ಣಗೊಳಿಸಲು ಹೆಚ್ಚುವರಿ ಪ್ರಯತ್ನ ಮತ್ತು ಕಠಿಣ ಪರಿಶ್ರಮ ಬೇಕಾಗುತ್ತದೆ. ಈ ವಾರ ಹೂಡಿಕೆ ಮಾಡುವ ನಿರ್ಧಾರದಿಂದ ದೂರ ಇರುವುದು ಒಳಿತು.

ತುಲಾ ರಾಶಿ:

ಈ ವಾರ ತುಲಾ ರಾಶಿಯವರಿಗೆ ಹೊಸ ಅವಕಾಶಗಳು ತೆರೆದುಕೊಳ್ಳುವುದು.ಈ ವಾರ ನೀವು ತೆಗೆದುಕೊಳ್ಳುವ ನಿರ್ಧಾರವು ಯಶಸ್ವಿಯಾಗುವುದಲ್ಲದೆ ಲಾಭದಾಯಕವೂ ಆಗಿರುತ್ತದೆ. ಆರ್ಥಿಕವಾಗಿ, ಈ ವಾರ ಸಂಪೂರ್ಣವಾಗಿ ಅನುಕೂಲಕರವಾಗಿರುತ್ತದೆ.ವಾರದ ಉತ್ತರಾರ್ಧದಲ್ಲಿ ವೆಚ್ಚಗಳು ಹೆಚ್ಚಾಗಬಹುದು. ಆದರೆ ನಿಯಮಿತ ಆದಾಯದಿಂದಾಗಿ ಆರ್ಥಿಕ ಪರಿಸ್ಥಿತಿಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವುದಿಲ್ಲ.ಪ್ರವಾಸದ ಸಮಯದಲ್ಲಿ ನಿಮ್ಮ ಆರೋಗ್ಯ ಮತ್ತು ವಸ್ತುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ.

ವೃಶ್ಚಿಕ ರಾಶಿ:

ಈ ವಾರ ಅತ್ಯಂತ ಶುಭಕರವಾಗಿರುತ್ತದೆ. ವಾರದ ಆರಂಭದಿಂದಲೇ, ನಿಮ್ಮ ಯೋಜಿತ ಕೆಲಸಗಳು ಸಮಯಕ್ಕೆ ಮತ್ತು ಅಪೇಕ್ಷಿತ ರೀತಿಯಲ್ಲಿ ಪೂರ್ಣಗೊಳ್ಳುತ್ತವೆ. ಆರ್ಥಿಕವಾಗಿ, ಇಡೀ ವಾರ ನಿಮಗೆ ಪ್ರಯೋಜನಕಾರಿಯಾಗಿರಲಿದೆ. ವಾರದ ಆರಂಭದಲ್ಲಿ ವೆಚ್ಚಗಳು ಹೆಚ್ಚಾಗಬಹುದು, ಆದರೆ,ಉತ್ತರಾರ್ಧವು ಶುಭ ಫಲಿತಾಂಶಗಳನ್ನು ತರುತ್ತದೆ. ಸ್ಥಿರ ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಗಮನಾರ್ಹ ಯಶಸ್ಸು ಸಾಧ್ಯ. ಮಕ್ಕಳ ಯಶಸ್ಸು ಸಂತೋಷ ತರಬಹುದು.

ಧನು ರಾಶಿ:

ಪ್ರತಿ ಕ್ಷಣವೂ ಎಚ್ಚರಿಕೆಯಿಂದ ಇರುವುದು ಅಗತ್ಯ. ವಾರದ ಆರಂಭದಲ್ಲಿ, ಭೂ ಸಂಬಂಧಿತ ವಿವಾದವನ್ನು ಪರಿಹರಿಸಲು ನ್ಯಾಯಾಲಯದ ಮೆಟ್ಟಿಲು ಹತ್ತಬೇಕಾಗಬಹುದು. ಸರ್ಕಾರಿ ನಿರ್ಧಾರವು ತೊಂದರೆಗಳನ್ನು ಹೆಚ್ಚಿಸಬಹುದು.ಆದರೆ ವಾರದ ಅಂತ್ಯದ ವೇಳೆಗೆ, ಸಮಸ್ಯೆಗೆ ಪರಿಹಾರ ಸಿಗುವುದು.ವಾರದ ಉತ್ತರಾರ್ಧವು ವೈಯಕ್ತಿಕ ಸಂಬಂಧಗಳು ಮತ್ತು ಆರೋಗ್ಯಕ್ಕೆ ಸ್ವಲ್ಪ ಪ್ರತಿಕೂಲವಾಗಿರಬಹುದು, ಎರಡಕ್ಕೂ ವಿಶೇಷ ಗಮನ ಬೇಕಾಗುತ್ತದೆ.

ಮಕರ ರಾಶಿ:

ಈ ವಾರ ಅತ್ಯಂತ ಪ್ರಯೋಜನಕಾರಿಯಾಗಲಿದೆ.ಈ ವಾರ ದೀರ್ಘ ಅಥವಾ ಅಲ್ಪಾವಧಿಯ ಪ್ರಯಾಣದೊಂದಿಗೆ ಪ್ರಾರಂಭವಾಗುತ್ತದೆ. ಈ ಪ್ರಯಾಣವು ಪ್ರತಿಫಲದಾಯಕವಾಗಿರುತ್ತದೆ ಮತ್ತು ಹೊಸ ಸಂಪರ್ಕಗಳನ್ನು ಬೆಳೆಸುತ್ತದೆ. ಮಕರ ರಾಶಿಯವರ ಜೀವನದಲ್ಲಿ ಸ್ವಲ್ಪ ಸಮಯದಿಂದ ಕಾಡುತ್ತಿದ್ದ ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಈ ವಾರ ಬಗೆಹರಿಯುವುದು.ಹಿರಿಯ ಸದಸ್ಯರ ಮಧ್ಯಸ್ಥಿಕೆಯ ಮೂಲಕ ಕೌಟುಂಬಿಕ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಮನೆಯಲ್ಲಿ ಧಾರ್ಮಿಕ ಮತ್ತು ಶುಭ ಕಾರ್ಯಕ್ರಮಗಳು ನಡೆಯಬಹುದು.

ಕುಂಭ ರಾಶಿ:

ಈ ವಾರ ಸ್ವಲ್ಪ ಅಸ್ಥಿರವಾಗಿರುತ್ತದೆ. ವಾರದ ಆರಂಭದಲ್ಲಿ ಇದ್ದಕ್ಕಿದ್ದಂತೆ ಉದ್ಭವಿಸಬಹುದಾದ ಕೆಲವು ಪ್ರಮುಖ ಸಮಸ್ಯೆಗಳು ಗಮನಾರ್ಹ ಆತಂಕವನ್ನು ಉಂಟುಮಾಡುತ್ತವೆ. ತಮ್ಮ ವೃತ್ತಿ ಮತ್ತು ವ್ಯವಹಾರ ನಿರ್ಧಾರ ತೆಗೆದುಕೊಳ್ಳುವಲ್ಲಿ ಜಾಗರೂಕರಾಗಿರಬೇಕು. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಈ ವಾರ, ತಮ್ಮ ಮೇಲಾಧಿಕಾರಿಗಳು ಮತ್ತು ಸಹೋದೋಗಿಗಳೊಂದಿಗೆ ಉತ್ತಮ ಸಂಬಂಧ ಇರಿಸಿಕೊಳ್ಳುವುದು ಸೂಕ್ತ.ವ್ಯಾಪಾರದಲ್ಲಿ ಆತುರದ ನಿರ್ಧಾರ ಬೇಡ.ಹಣಕಾಸಿನ ವಹಿವಾಟುಗಳಲ್ಲಿ ಜಾಗರೂಕರಾಗಿರಿ.

ಮೀನ ರಾಶಿ:

ಮೀನ ರಾಶಿಯಾವರಿಗೆ ಈ ವಾರ ಮಿಶ್ರ ಫಲ ನೀಡಲಿದೆ. ಉದ್ಯೋಗದಲ್ಲಿರುವವರು ವಾರದ ಆರಂಭದಲ್ಲಿ ಕೆಲಸಕ್ಕೆ ಸಂಬಂಧಿಸಿದ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸಣ್ಣ ಕೆಲಸಗಳನ್ನು ಸಹ ಪೂರ್ಣಗೊಳಿಸುವುದು ಕೂಡಾ ಕಷ್ಟವಾಗಬಹುದು. ಈ ವಾರ, ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲಂಘಿಸಬೇಡಿ.ಇಲ್ಲದಿದ್ದರೆ ಅನಗತ್ಯ ಸಮಸ್ಯೆ ಎದುರಾಗಬಹುದು.ಈ ಸಮಯದಲ್ಲಿ ನಿಮ್ಮ ಆದಾಯದ ಮೇಲೂ ಪರಿಣಾಮ ಬೀರಬಹುದು. ಕಷ್ಟದ ಸಮಯದಲ್ಲಿ ನಿಮ್ಮ ಹಿತೈಷಿಗಳು ನಿಮ್ಮೊಂದಿಗೆ ನಿಲ್ಲುತ್ತಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+