Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್‌ಗೆ‌ 38,000 ರೂ.

ತುಮಕೂರು: ರಾಜ್ಯದ ಹೆಮ್ಮೆಯ ಕಲ್ಪತರು ನಾಡು ತುಮಕೂರಿನ ತಿಪಟೂರು ತೆಂಗಿನಕಾಯಿಗಳಿಗೆ ಅಪಾರ ಬೇಡಿಕೆ ಸೃಷ್ಟಿಯಾಗಿದೆ. ಈ ಕಾರಣಕ್ಕೆ ದಿನದಿಂದ ದಿನಕ್ಕೆ ಉಂಡೆ ಕೊಬ್ಬರಿಯ ದರ ಗಗನಕ್ಕೇರುತ್ತಿದೆ. ತಿಪಟೂರು ತೆಂಗಿನಕಾಯಿ ಸಿಹಿ ಇರುವ ಕಾರಣ ತಮಿಳುನಾಡು, ಕೇರಳ ರಾಜ್ಯಗಳ ಕೊಬ್ಬರಿಗಿಂತ ಹೆಚ್ಚಿನ ಡಿಮ್ಯಾಂಡ್ ಸೃಷ್ಟಿಸಿಕೊಂಡಿದೆ. ಏಷ್ಯಾದಲ್ಲೇ ಅತಿ ದೊಡ್ಡ ತಿಪಟೂರು ಎಪಿಎಂಸಿಯಲ್ಲಿ ಒಂದು ಕ್ವಿಂಟಾಲ್ ಉಂಡೆ ಕೊಬ್ಬರಿ ದರ ಬರೋಬ್ಬರಿ 38,000 ರೂಪಾಯಿಗೆ ಮಾರಾಟವಾಗಿದೆ. ಈ ಮುಲಕ ತನ್ನ ಹಳೆಯ ದಾಖಲೆಗಳನ್ನು ಸರಿಗಟ್ಟಿದೆ. ಇದು ರೈತರ ಮೊಗದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ.

ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಉಂಡೆ ಕೊಬ್ಬರಿ ದರ ನೆನ್ನೆ ಸೋಮವಾರ (ಏಪ್ರಿಲ್ 13) 38,000 ರೂಪಾಯಿಗೆ ಮಾರಾಟವಾಗಿ ಹೊಸ ದಾಖಲೆ ನಿರ್ಮಿಸಿದೆ. ಏಪ್ರಿಲ್ 2ರಿಂದ ನಿರಂತರವಾಗಿ ಕೊಬ್ಬರಿ ದರ ಏರಿಕೆ ಆಗುತ್ತಲೇ ಸಾಗಿದೆ. ಅಂದು 31,000 ರೂ, ಇದ್ದ ದರವು ಏಪ್ರಿಲ್ 6ರ ಹೊತ್ತಿಗೆ 32,000 ರೂ. ದಾಟಿ ಇತಿಹಾಸ ನಿರ್ಮಿಸಿತ್ತು. ಏಪ್ರಿಲ್ 09 ರಂದು 36,006 ರೂಪಾಯಿ ಹೆಚ್ಚಾಗುವ ಮೂಲಕ ದರದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿತ್ತು. ಸೋಮವಾರ ಆ ದಾಖಲೆಯನ್ನು ಪುಡಿಮಾಡಿದೆ. ಸದ್ಯಕ್ಕೆ ಉಂಡೆ ಕೊಬ್ಬರಿಯ ಬೆಲೆ ಇದೇ ರೀತಿಯಲ್ಲಿ ಮುಂದುವರಿಯಲಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

Copra Price

ದರ ಏರಿಕೆಗೆ ಪ್ರಮುಖ ಕಾರಣವೇನು?

ಕರ್ನಾಟಕ ಸೇರಿದಂತೆ ಬೇರೆ ಬೇರೆ (ತಮಿಳುನಾಡು, ಕೇರಳ ಇತರ) ರಾಜ್ಯಗಳಲ್ಲಿ ತೆಂಗಿನಕಾಯಿಯನ್ನು ಬೆಳೆಯುತ್ತಾರೆ. ಆದರೆ ತಿಪಟೂರಿನ ತೆಂಗಿನಕಾಯಿ ಸಿಹಿ ಹೆಚ್ಚು. ಹೀಗಾಗಿ ದೈನಂದಿನ ಬಳಕೆಗೆ ಇದರ ಪಾತ್ರ ಮಹತ್ವದ್ದಾಗಿರುತ್ತದೆ. ಉತ್ತರ ಭಾರತದ ಕಡೆಗೆ ನಮ್ಮ ರಾಜ್ಯದ ಕೊಬ್ಬರಿಗೆ ಡಿಮ್ಯಾಂಡ್ ಹೆಚ್ಚಿದೆ. ಒಂದು ಕಡೆ ಬಳಕೆ ಹೆಚ್ಚಾಗುತ್ತಿದೆ. ಮತ್ತೊಂದು ಕಡೆಗಳಲ್ಲಿ ತಿಪಟೂರು ಎಪಿಎಂಸಿಗೆ ಈ ಮೊದಲು ಬರುತ್ತಿದ್ದಷ್ಟು ತೆಂಗಿನ ಕಾಯಿ ಬರುತ್ತಿಲ್ಲ. ಆವಕ ಈ ಬಾರಿ ಕಡಿಮೆ ಆಗಿದೆ. ಕೇವಲ 1700 ಕ್ವಿಂಟಾಲ್ ಕೊಬ್ಬರಿ ಮಾತ್ರ ಆವಕವಾಗಿದೆ. ಇದೆಲ್ಲ ಕಾರಣದಿಂದ ತಿಪಟೂರು ತೆಂಗಿನ ಕಾಯಿಗೆ ಬಂಗಾರದ ಬೆಲೆ ಬಂದಿದೆ.

Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್

ಉಂಡೆ ಕೊಬ್ಬರಿ ದರ 40,000 ರೂ. ದಾಟಲಿದೆ!

ಉತ್ಪಾದನೆ ಕಡಿಮೆ ಆಗಿದ್ದರಿಂದ ಪೂರೈಕೆ ಇಳಿಕೆ ಕಂಡಿದೆ. ಬೇಡಿಕೆ ಹೆಚ್ಚಿರುವ ಕಾರಣಕ್ಕೆ ತಿಪಟೂರು
ತೆಂಗಿನಕಾಯಿಗೆ ದಿನ ದಿನಕ್ಕೆ ಬೆಲೆ ಹೆಚ್ಚಾಗುತ್ತಿದೆ. ಕಳೆದ ಹದಿಮೂರು ದಿನಗಳಲ್ಲಿ ಏರಿಕೆಯಾದ ಈ ದರ ನೋಡಿದರೆ ಮುಂದಿನ ದಿನಗಳಲ್ಲಿ ಉಂಡೆ ಕೊಬ್ಬರಿ ಪ್ರತಿ ಕ್ವಿಂಟಾಲ್‌ಗೆ 40,000 ರೂಪಾಯಿ ಗಡಿ ದಾಟುವ ನಿರೀಕ್ಷೆ ಇದೆ ಎಂದು ಮಾರುಕಟ್ಟೆ ವರ್ತಕರು ಅಂದಾಜಿಸಿದ್ದಾರೆ. ಇತರ ಬೆಳೆಗಳಿಂದ ಕಂಗಾಲಾಗುವ ರೈತರ ಪೈಕಿ ತೆಂಗು ಬೆಳೆದವರು ಈ ವರ್ಷ ಜಾಕ್‌ಪಾಟ್ ಹೊಡೆದಂತಾಗಿದೆ.

ತೆಂಗು ಬೆಳೆ ಮೇಲೆ ಹೆಚ್ಚು ಅವಲಂಬನೆ

ತುಮಕೂರು, ತಿಪಟೂರು ಭಾಗದಲ್ಲಿ ರೈತರು ಹೆಚ್ಚಾಗಿ ತೆಂಗು ಬೆಳೆಯನ್ನು ನೆಚ್ಚಿಕೊಂಡಿದ್ದಾರೆ. ಇತರ ಬೆಳೆಗಳನ್ನು ಬೆಳೆದರೂ ಸಹಿತ ತೆಂಗಿನ ಮೇಲೆ ಅವಲಂಬಿತರಾದವರ ಪ್ರಮಾಣ ಬಹಳಷ್ಟಿದೆ. ಇದೊಂದು ವಾಣಿಜ್ಯ ಬೆಳೆಯಾಗಿದ್ದರಿಂದ ಲಾಭ ನಿರೀಕ್ಷೆಯಲ್ಲಿ ಹೆಚ್ಚು ಹೆಚ್ಚು ಬೆಳೆಯಲಾಗುತ್ತಿದೆ. ಈ ವರ್ಷ ರೈತರು ಅಂದುಕೊಂಡ ಬೆಲೆಗಿಂತಲೂ ಅತ್ಯಧಿಕ ಬೆಲೆಗೆ ಉಂಡೆ ಕೊಬ್ಬರಿ ಮಾರಾಟವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+