Breaking: ಇಂದು ಕೆಲವೇ ಕ್ಷಣಗಳಲ್ಲಿ ಕೊಲೆಗಾರ ವಿನಯ್ ಕುಲಕರ್ಣಿಗೆ ಶಿಕ್ಷೆ ಪ್ರಮಾಣ ಪ್ರಕಟ

ಬೆಂಗಳೂರು: ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಧಾರವಾಡದ ಜಿ.ಪಂ ಮಾಜಿ ಸದಸ್ಯ ಯೋಗೇಶ್ ಗೌಡ ಅವರ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಮತ್ತು ಹಾಲಿ ಶಾಸಕ ವಿನಯ್ ಕುಲಕರ್ಣಿ , ಇನ್‌ಸ್ಪೆಕ್ಟರ್ ಸೇರಿದಂತೆ ಒಟ್ಟು 17 ಮಂದಿಯ ಅಪರಾಧಿಗಳು (ಕೊಲೆಗಾರರು) ಎಂದಿರುವ ಕೋರ್ಟ್ ಇಂದು ಗುರುವಾರ (ಏ.16) ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ. ನೆನ್ನೆ ಬುಧವಾರ (ಏ.15) ರಂದು ಈ ಎಲ್ಲ ಆರೋಪಿಗಳನ್ನು ಪ್ರಕರಣ ದೋಷಿಗಳೆಂದು ಮಹತ್ವದ ತೀರ್ಪು ನೀಡಿತು. ಇವತ್ತು ಶಿಕ್ಷೆ ಪ್ರಮಾಣ ಕಾಯ್ದಿರಿಸಿತು.

ಧಾರವಾಡದ ಜಿಮ್‌ನಲ್ಲಿ ಯೋಗೇಶ್ ಗೌಡ ಹತ್ಯೆ ನಡೆದು 10 ವರ್ಷಗಳು ಕಳೆದಿವೆ. ಸುದೀರ್ಘ 8 ವರ್ಷಗಳ ಕಾಲ ವಿಚಾರಣೆ ನಡೆಸಿ, ಪೂರ್ಣಗೊಳಿಸಿರುವ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 15ನೇ ಆರೋಪಿ ವಿನಯ್ ಕುಲಕರ್ಣಿಗೆ ಶಾಕ್ ನೀಡಿದೆ. ಹತ್ಯೆಯಲ್ಲಿ ವಿನಯ್ ಕುಲಕರ್ಣಿ ಅವರ ಪಾತ್ರ, ಸಾಕ್ಷ್ಯ ನಾಶ ಯತ್ನದಂತೆ ಗಂಭೀರ ಆರೋಪಗಳು ಸಿಬಿಐ ತನಿಖೆಯಲ್ಲಿ ಸಾಬೀತಾಗಿವೆ.

Vinay Kulkarni

ಒಟ್ಟು 21 ಮಂದಿ ಆರೋಪಿಗಳ ಪೈಕಿ ಇಬ್ಬರು (ಎ1 ಬಸವರಾಜ ಮುತ್ತಗಿ ಮತ್ತು ಎ17 ಶಿವಾನಂದ ) ಮಾಫಿ ಸಾಕ್ಷಿ ಹೇಳಿದ್ದಾರೆ. ಅವರನ್ನು ಬಿಟ್ಟು 19 ಜನರ ಪೈಕಿ 17ಆರೋಪಿಗಳನ್ನು ಅಪರಾಧಿ ಎಂದು ಕೋರ್ಟ್ ತಿಳಿಸಿದೆ. ಇಂದು ಗುರುವಾರ ಅವರ ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ. ವಿನಯ್ ಕುಲಕರ್ಣಿಗೆ ಶಿಕ್ಷೆಯ ಪ್ರಮಾಣದ ಮೇಲೆ ಅವರ ಭವಿಷ್ಯ ನಿಂತಿದೆ. ಶಿಕ್ಷೆ ಆದೇಶ ಹೊರ ಬರುತ್ತಿದ್ದಂತೆ ಅವರ ರಾಜಕೀಯ, ವೈಯಕ್ತಿಕ ಜೀವನದ ಕುರಿತು ನಿರ್ಧಾರವಾಗಲಿದೆ. ಕೋರ್ಟ್ ಆದೇಶ ಪ್ರಶ್ನಿಸಿ ಶಾಸಕ ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ.

ಯೋಗೇಶ್ ಗೌಡ ಕೇಸ್ ತೀರ್ಪು ಪ್ರಕಟ: ವಿನಯ್ ಕುಲಕರ್ಣಿ ಅಪರಾಧಿ ಎಂದ ಕೋರ್ಟ್: 17 ಮಂದಿ ಸಿಬಿಐ ವಶಕ್ಕೆ
ಯೋಗೇಶ್ ಗೌಡ ಕೇಸ್ ತೀರ್ಪು ಪ್ರಕಟ: ವಿನಯ್ ಕುಲಕರ್ಣಿ ಅಪರಾಧಿ ಎಂದ ಕೋರ್ಟ್: 17 ಮಂದಿ ಸಿಬಿಐ ವಶಕ್ಕೆ

ಕುಸಿದು ಕಣ್ಣೀರಿಟ್ಟ ಶಾಸಕ ವಿನಯ್ ಕುಲಕರ್ಣಿ

ಬುಧವಾರ ಅಂತಿಮ ತೀರ್ಪು ಹಿನ್ನೆಲೆಯಲ್ಲಿ ಇತರ ಎಲ್ಲ ಆರೋಪಿಗಳಂತೆ ಶಾಸಕ ವಿನಯ್ ಕುಲಕರ್ಣಿ ಸಹ ಖುದ್ದು ಕೋರ್ಟ್‌ಗೆ ಹಾಜರಾಗಿದ್ದರು. ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಪ್ರಕರಣ ದೂಷಿ ಎಂದು ತೀರ್ಪು ನೀಡುತ್ತಿದ್ದಂತೆ ನಿಂತಲ್ಲೇ ಕುಸಿದ ವಿನಯ್ ಕುಲಕರ್ಣಿ ಕಣ್ಣೀರಿಟ್ಟಿದ್ದಾರೆ. ಕೋರ್ಟ್ ಹಾಲ್‌ನಲ್ಲಿದ್ದ ಮೂವರು ಮಕ್ಕಳು ತಂದೆ ನೋಡಿ ಕಣ್ಣೀರಿಟ್ಟಿದ್ದಾರೆ. ಅವರು ಪ್ರಕರಣದಿಂದ ನಿರ್ದೋಷಿ, ಖುಲಾಸೆ ಆಗುವ ವಿಶ್ವಾಸ ಹೊಂದಿದ್ದರು. ಆದರೆ ಕೋರ್ಟ್ ತೀರ್ಪು ಅವರ ನಿರೀಕ್ಷೆಯನ್ನು ಹುಸಿ ಮಾಡಿದೆ. ಹೀಗಾಗಿ ಅವರಿಗೆ ಆದೇಶ ಎದುರಿಸಲಾಗದೇ ದಂಗಾದರು. ಕುಸಿತು ಕಣ್ಣೀರಿಟ್ಟಿದ್ದು ಕಂಡು ಬಂತು.

ಸಾಲು ಸಾಲು ಆರೋಪಗಳು ಸಾಬೀತು

ಭೂಮಿ ವಿಚಾರಕ್ಕೆ, ತಾಲೂಕು ಪಂಚಾಯಿತಿ ಸ್ಥಾನದ ವಿಚಾರಕ್ಕೆ ಯೋಗೇಶ್ ಗೌಡ ಮತ್ತು ವಿನಯ್ ಕುಲಕರ್ಣಿ ಮಧ್ಯೆ ಜಗಳವಿತ್ತು ಎನ್ನಲಾಗಿದೆ. ಹತ್ಯೆ ಬಳಿಕ ಪೊಲೀಸರು ಸತ್ಯ ಮುಚ್ಚಿಡಲು ಯತ್ನಿಸಿದ್ದರು ಎಂದು ಸಿಬಿಐ ತನಿಖೆಯಲ್ಲಿ ಬಯಲಾಗಿದೆ. ಅಲ್ಲದೇ ವಿನಯ್ ಕುಲಕರ್ಣಿ ಅಧಿಕಾರ ದುರುಪಯೋಗ, ಸಾಕ್ಷ್ಯಗಳ ನಾಶ ಮಾತ್ರವಲ್ಲದೇ ಸಿಬಿಐ ತನಿಖೆ ಮೇಲೂ ತಮ್ಮ ಪ್ರಭಾವ ಬೀರಲು ದೆಹಲಿಗೆ ತೆರಳಿದ್ದು ಎಂಬುದೆಲ್ಲವು ಬೆಳಕಿಗೆ ಬಂದಿವೆ. ಪ್ರಕರಣದಲ್ಲಿ ಶಾಸಕರ ಪಾತ್ರವೇ ಪ್ರಮುಖವಾಗಿತ್ತು ಎಂದು ಸಿಬಿಐ ಪ್ರತಿಪಾದಿಸಿ, ಸಾಬೀತು ಮಾಡುವಲ್ಲಿ ಯಶಸ್ವಿಯಾಗಿದೆ. ಅದರ ಫಲಿತಾಂಶವೆಂಬಂತೆ ಇಂದು ಅಪರಾಧಿಕಗಳಿಗೆ ಶಿಕ್ಷೆ ಪ್ರಕಟವಾಗಲಿದೆ. ತೀರ್ಪನ್ನು ಯೋಗೇಶ ಗೌಡ ಕುಟುಂಬಸ್ಥರು, ಆಪ್ತರು ಹಾಗೂ ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+