Money Vastu Tips: ಮನೆಯ ಈ ದಿಕ್ಕಿನಲ್ಲಿ ತಿಜೋರಿ ಇಟ್ಟರೆ ಆರ್ಥಿಕ ಸಮೃದ್ಧಿ! ಇಲ್ಲವಾದರೆ ತೊಂದರೆ ಸಾಧ್ಯತೆ
Money Vastu Tips in Kannada: ನಮ್ಮ ಮನೆಯ ವಾಸ್ತು ಶಾಸ್ತ್ರದ ವಿನ್ಯಾಸವು ನಮ್ಮ ಜೀವನದ ಮೇಲೆ ತುಂಬಾ ಪ್ರಭಾವ ಬೀರುತ್ತದೆ ಎಂಬ ನಂಬಿಕೆ ಇದೆ. ವಿಶೇಷವಾಗಿ ನಮ್ಮ ಆರ್ಥಿಕ ಸ್ಥಿರತೆ ಮತ್ತು ಸಮೃದ್ಧಿಗೆ ಸಂಬಂಧಿಸಿದಂತೆ ವಾಸ್ತು ಶಾಸ್ತ್ರದಲ್ಲಿ ತಜ್ಞರು ಹಲವು ಸಲಹೆಗಳು ಮತ್ತು ಸೂಚನೆಗಳನ್ನು ನೀಡುತ್ತಾರೆ. ಸರಿಯಾದ ದಿಕ್ಕು, ಬೆಳಕು ಮತ್ತು ಸ್ವಚ್ಛತೆ ಇವುಗಳು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬಲು ಸಹಾಯವನ್ನು ಮಾಡುತ್ತವೆ ಆದ್ದರಿಂದ ನಾವು ವಾಸ್ತು ಪಾಲನೆ ಮಾಡಬೇಕಾಗುತ್ತದೆ.
ಹಿಂದೂ ಪುರಾಣದ ಪ್ರಕಾರ ಉತ್ತರ ದಿಕ್ಕು ಸಂಪತ್ತಿನ ದೇವರಾದ ಕುಬೇರನಿಗೆ ಸಂಬಂಧಿಸಿದರೆ, ಈಶಾನ್ಯ ದಿಕ್ಕು ಶಿವನಿಗೆ ಸಂಬಂಧಿಸಿದೆ. ಆದ್ದರಿಂದ ನಮ್ಮ ಮನೆಯ ಈಶಾನ್ಯ ಭಾಗವನ್ನು ಯಾವಾಗಲೂ ಸ್ವಚ್ಛವಾಗಿ, ಬೆಳಕಿನಿಂದ ಮತ್ತು ತೊಂದರೆಗಳಾಗಂತೆ ಇಡುವುದು ಮುಖ್ಯವಾಗಿದೆ. ಆದರೆ ಈ ಭಾಗದಲ್ಲಿ ಭಾರವಾದ ವಸ್ತುಗಳು, ಕಸ, ಅಥವಾ ಶೂ ರ್ಯಾಕ್‌ಗಳನ್ನು ಇಡುವುದು ನಿಲ್ಲಿಸಬೇಕು. ಹೂವಿನಿಂದ ಅಲಂಕರಿಸಿದ ನೀರಿನ ಪಾತ್ರೆಯನ್ನು ಇಲ್ಲಿ ಇಡುವುದುದರಿಂದ ಮನೆಯ ವಾತಾವರಣವು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

ಮನೆಯಲ್ಲಿ ಹಣ, ಮುಖ್ಯವಾದ ದಾಖಲೆಗಳು ಅಥವಾ ಆಭರಣಗಳನ್ನು ಸುರಕ್ಷಿತವಾಗಿಡಲು ಬಳಸುವ ಜಾಗ ಅದುವೇ ತಿಜೋರಿ. ಇದನ್ನು ನೈಋತ್ಯ ದಿಕ್ಕಿನಲ್ಲಿ ಇಡುವುದು ಉತ್ತಮ ಎಂದು ವಾಸ್ತು ತಜ್ಞರ ಅಭಿಪ್ರಾಯ ಆಗಿದೆ. ಅದರ ಬಾಗಿಲುಗಳು ಉತ್ತರ ಅಥವಾ ಈಶಾನ್ಯ ದಿಕ್ಕಿಗೆ ತೆರೆದುಕೊಳ್ಳುವಂತೆ ಮಾಡವುದು ಒಳ್ಳೆಯದು. ತಿಜೋರಿ ಒಳಗಿನ ಉತ್ತರ ದಿಕ್ಕಿನಲ್ಲಿ ಒಂದು ಸಣ್ಣ ಕನ್ನಡಿಯನ್ನು ಇಡುವುದರಿಂದ ಅದರಲ್ಲಿ ಹಣ ಪ್ರತಿಫಲಿಸುವುದರಿಂದ ನಮ್ಮ ಆರ್ಥಿಕ ಸಂಪತ್ತು ಹೆಚ್ಚಾಗಬಹುದು ಎಂಬ ನಂಬಿಕೆ ಇದೆ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರವು ನಮ್ಮ ಸಂಪತ್ತಿನ ಪ್ರವೇಶ ದ್ವಾರ ಎಂದು ಹೇಳಲಾಗುತ್ತದೆ. ಆದ್ದರಿಂದ ಮುಖ್ಯ ದ್ವಾರವು ಯಾವುದೆ ತೊಂದರೆ ಇಲ್ಲದೆ ತೆರೆಯುವಂತೆ ಇರಬೇಕು, ಬಾಗಿಲುಗಳಲ್ಲಿ ಬಿರುಕುಗಳಾಗಲಿ, ಶಬ್ದಗಳು ಬರುವುದಾಗಲಿ ಇರಬಾರದು, ಸರಾಗವಾಗಿ ತೆರೆಯುವಂತಿರಬೇಕು. ಮನೆಯ ಮುಖ್ಯ ದ್ವಾರಕ್ಕೆ 'ಓಂ' ಅಥವಾ 'ಸ್ವಸ್ತಿಕ್' ಇಂತಹ ಮಂಗಳಕರವಾದ ಚಿಹ್ನೆಗಳನ್ನು ಬರೆಯುವುದರಿಂದ ಮನೆಯ ಒಳಗೆ ನಕಾರತ್ಮಕ ಶಕ್ತಿ ಬರದಂತೆ ತಡೆಯಲು ಸಾಧ್ಯ ಎಂದು ತಜ್ಞರು ಸೊಚಿಸುತ್ತಾರೆ.
ಮನೆಯಲ್ಲಿ ನೀರು ಸೋರಿಕೆಯಾಗುವುದು ಒಂದು ರೀತಿಯಲ್ಲಿ ನಮ್ಮ ಆರ್ಥಿಕ ನಷ್ಟದ ಸಂಕೇತ ಎಂದು ವಾಸ್ತು ಹೇಳುತ್ತದೆ. ನಲ್ಲಿಗಳಿಂದ ನೀರು ಸೋರದಂತೆ ನೋಡಿಕೊಳ್ಳಬೇಕಾಗುತ್ತದೆ ಇದರಿಂದ ನಮ್ಮ ಆರ್ಥಿಕತೆಗೆ ತೊಂದರೆ ಆಗುತ್ತದೆ. ಮತ್ತು ಮನೆಯ ಮಧ್ಯಭಾಗವನ್ನು ಯಾವಾಗಲೂ ಸ್ವಚ್ಚವಾಗಿ ಇಡಬೇಕು ಇದರಿಂದ ಆರೋಗ್ಯ ಮತ್ತು ಆರ್ಥಿಕ ಸಮೃದ್ದಿ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ.
ಅಡುಗೆಮನೆ ಆಗ್ನೇಯ ದಿಕ್ಕಿನಲ್ಲಿ ಇರಬೇಕು ಎಂಬುದು ವಾಸ್ತು ಶಾಸ್ತ್ರದ ನಿಯಮ ಆಗಿದೆ. ಇದು ಸಾಧ್ಯವಾಗದಿದ್ದರೆ, ಕನಿಷ್ಠ ಸ್ಟೌವ್ ಅನ್ನು ಆಗ್ನೇಯ ಭಾಗದಲ್ಲಿ ಇಡುವುದು ಸೂಕ್ತ. ಅಡುಗೆಮನೆಯಲ್ಲಿ ಔಷಧಿಗಳನ್ನು ಇಡುವುದನ್ನು ಇಡಬಾರದು. ಹಾಗೆಯೇ ರಾತ್ರಿ ವೇಳೆ ಪಾತ್ರೆಗಳನ್ನು ತೊಳೆಯಬೇಕು ಹಾಗೆ ಬಿಟ್ಟುಹೋಗದೇ ಸ್ವಚ್ಛಗೊಳಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು.
ಪ್ರತಿದಿನ ಸಂಜೆ ದೀಪ ಬೆಳಗಿಸುವುದು ಮತ್ತು ಧೂಪ ಹಚ್ಚುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ಹೆಚ್ಚಿಸಲು ಸಹಾಯ ಆಗುತ್ತದೆ. ಈ ಸರಳ ವಾಸ್ತು ಕ್ರಮಗಳನ್ನು ಅನುಸರಿಸುವುದರಿಂದ ಮನೆಯಲ್ಲಿ ಶಾಂತಿ, ಆರೋಗ್ಯ ಮತ್ತು ಆರ್ಥಿಕ ಸಮೃದ್ದಿ ಹೆಚ್ಚುತ್ತದೆ ಎಂಬದು ವಾಸ್ತು ತಜ್ಞರ ನಂಬಿಕೆಯಾಗಿದೆ.














Click it and Unblock the Notifications