Gold-Silver Price: ಸತತ 3ನೇ ದಿನವು ಚಿನ್ನದ ದರದಲ್ಲಿ ಏರಿಕೆ, ಅಕ್ಷಯ ತೃತೀಯದ ಮುನ್ಸೂಚನೆ ಹೀಗಿದೆ

Gold Rate Updates: ಚಿನ್ನ-ಬೆಳ್ಳಿಗಳ ಮೇಲಿನ ಹೂಡಿಕೆ ಹೆಚ್ಚಾಗುವ ಮುನ್ಸೂಚನೆ ಸಿಕ್ಕಿದೆ. ಕಾರಣ ಕೊಲ್ಲಿ ಯುದ್ಧ ಮತ್ತು ಜಾಗತಿಕ ಒಂದಷ್ಟು ಬದಲಾವಣೆಗಳ ನಂತರ ಈ ಎರಡು ಲೋಹಗಳ ದರ ನಿರಂತರವಾಗಿ ಏರುಗತಿಯಲ್ಲಿ ಸಾಗುತ್ತಿವೆ. ಕೆಲವು ವಾರಗಳ ಬಳಿಕ ಷೇರುಪೇಟೆ ಜೊತೆಗೆ ಚಿನ್ನಾಭರಣ ಮಾರುಕಟ್ಟೆಗೆ ಚೈತನ್ಯ ಬಂದಂತಾಗಿದೆ. ಮೂರು ದಿನಗಳಿಂದ ದರದಲ್ಲಿ ಏರಿಕೆ ಆಗುತ್ತಿದ್ದು, ಇಂದು ಗುರುವಾರ (ಏಪ್ರಿಲ್ 16) ಸಹ ಬಂಗಾರ, ಬೆಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆ ದಾಖಲಾಗಿದೆ.

ಬೆಳ್ಳಿಯು ಮೌಲ್ಯ ಬುಧವಾರ ದಾಖಲೆ ಏರಿಕೆ ಕಂಡಿತಾದರೂ ಇಂದು ತಕ್ಕಮಟ್ಟಿನ ಹೆಚ್ಚಳ ದಾಖಲಿಸಿದೆ. 100 ಗ್ರಾಂ ಬೆಳ್ಳಿಗೆ 10 ರೂಪಾಯಿ, ಒಂದು ಕೆಜಿಗೆ 100 ರೂಪಾಯಿ ಆಗುವ ಮೂಲಕ 2,70,100 ರೂಪಾಯಿ ಏರಿಕೆಯಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

Gold and Silver Prices

ಸತತ 3ನೇ ದಿನವು ಚಿನ್ನದ ಬೆಲೆ ಏರಿಕೆ

* 22 ಕ್ಯಾರಟ್ ಒಂದು ಗ್ರಾಂ ಚಿನ್ನಕ್ಕೆ 14,260 ರೂಪಾಯಿ ಇದೆ. ಇದೇ ಚಿನ್ನದ 10 ಗ್ರಾಂ ದರವು 200 ರೂಪಾಯಿ ಹೆಚ್ಚಳ ಮೂಲಕ 1,42,600 ರೂ.ಗೆ ತಲುಪಿದೆ.

* 24 ಕ್ಯಾರಟ್ ಚಿನ್ನದ ಒಂದು ಗ್ರಾಂಗೆ 15,557 ರೂಪಾಯಿ ಇದ್ದು, ಇದೇ ಚಿನ್ನದ 10 ಗ್ರಾ ಬೆಲೆಯು 220 ರೂಪಾಯಿಗೆ ಏರಿಕೆ ಆಗುವ ಮೂಲಕ ಒಟ್ಟು ದರವು 1,55,570 ರೂಪಾಯಿ ಮುಟ್ಟಿದೆ.

* 18 ಕ್ಯಾರಟ್ ಚಿನ್ನದ ಒಂದು ಗ್ರಾಂಗೆ 11,668 ರೂಪಾಯಿ ಇದ್ದು, 170 ರೂ. ಹೆಚ್ಚಚಳ ಮೂಲಕ 10 ಗ್ರಾಂ ಬೆಲೆ 1,16,680 ರೂಪಾಯಿಗೆ ಮಾರಾಟವಾಗಿದೆ.

ಅಕ್ಷಯ ತೃತಿಯಕ್ಕೆ ದರ ಏರಿಕೆ ಮುನ್ಸೂಚನೆ

ಇರಾನ್ ಮೇಲಿನ ಜಂಟಿ ಯುದ್ಧ, ಯುಎಸ್ ಡಾಲರ್ ಮೌಲ್ಯ ಕುಸಿತ, ಆರ್ಥಿಕ ಅಸ್ಥಿರತೆ ಸೇರಿದಂತೆ ರಾಜತಾಂತ್ರಿಕ ಕೆಲವು ಕಾರಣಗಳಿಂದ ಬಂಗಾರದ ದರದಲ್ಲಿ ಕುಸಿತವಾಗಿತ್ತು. ಗರಿಷ್ಠ ಮಟ್ಟ ತಲುಪಿದ್ದ ಬೆಳ್ಳಿ ಮತ್ತು ಚಿನ್ನವು ಫೆಬ್ರವರಿ ಮೊದಲ ದಿನದಿಂದ ಇಳಿಕೆ ಕಾಣುತ್ತಾ ಬಂದಿವೆ. ಇದೀಗ ಯುದ್ಧ ತಾತ್ಕಾಲಿಕವಾಗಿ ನಿಂತಿದೆ. ಇಂಧನ ಪೂರೈಕೆ ಸಹಜ ಸ್ಥಿತಿಯತ್ತ ಮರಳುತ್ತಿದೆ. ಸಣ್ಣಪುಟ್ಟ ಬದಲಾವಣೆಗಳ ಕಾರಣದಿಂದ ಷೇರುಪೇಟೆ ಹಾಗೂ ಬಂಗಾರ ವ್ಯಾಪಾರ ಚೇತರಿಕೆ ಕಂಡಿದೆ. ಸ್ಥಿರವಾದ ಬದಲಾವಣೆ ಕಾಣಬಹುದಾಗಿದೆ. ಮತ್ತೊಂದೆಡೆ ಏಪ್ರಿಲ್ 19ರಂದು ಅಕ್ಷಯ ತೃತೀಯ ಇರುವ ಕಾರಣ ಬಂಗಾರ ಖರೀದಿ ಪ್ರಮಾಣ ತುಸು ಹೆಚ್ಚಾಗಲಿದ್ದು, ಚಿನ್ನ ಬೆಳ್ಳಿ ನಿರಂತರವಾಗಿ ಏರಿಕೆ ಆಗಲಿದೆ ಎಂದು ಆರ್ಥಿಕ ತಜ್ಞರು ಊಹಿಸಿದ್ದಾರೆ.

ನಗರವಾರು 10 ಗ್ರಾಂ (22k) ಚಿನ್ನದ ಬೆಲೆ

ಬೆಂಗಳೂರು: 14,260 ರೂಪಾಯಿ

ಕೇರಳ: 14,260 ರೂಪಾಯಿ

ಚೆನ್ನೈ: 14,321 ರೂಪಾಯಿ

ಮುಂಬೈ: 14,260 ರೂಪಾಯಿ

ಕೊಲ್ಕತ್ತಾ: 14,260 ರೂಪಾಯಿ

ಅಹಮದಾಬಾದ್: 14,265 ರೂಪಾಯಿ

ದೆಹಲಿ: 14,275 ರೂಪಾಯಿ

ಹೈದರಾಬಾದ್: 14,26014,260 ರೂಪಾಯಿ

ಪುಣೆ: 14,260 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+