ಈ ದಿನಾಂಕದಲ್ಲಿ ಜನಿಸಿದವರ ಮೇಲಿರುವುದು ರಾಹುವಿನ ಅನುಗ್ರಹ: ಹೆಜ್ಜೆ ಹೆಜ್ಜೆಗೂ ಸಿಗುವುದು ಗೆಲುವು

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿಗಳಿಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಹಾಗೆಯೇ ಸಂಖ್ಯಾಶಾಸ್ತ್ರದಲ್ಲಿ ಸಂಖ್ಯೆಗಳ ಪಾತ್ರ ಬಹಳ ದೊಡ್ಡದ್ದು. ಅದರಲ್ಲಿಯೂ ಕೆಲವೊಂದು ಸಂಖ್ಯೆಗಳಿಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಈ ಪೈಕಿ 4ನೇ ಸಂಖ್ಯೆಯನ್ನು ಬಹಳ ನಿಗೂಢ ಮತ್ತು ವಿಶೇಷ ಎಂದೇ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಯಾವುದೇ ತಿಂಗಳ 4, 13, 22, ಮತ್ತು 31ನೇ ತಾರೀಕಿಗೆ ಜನಿಸಿದವರ ಮೂಲಾಂಕ 4 ಆಗಿರುತ್ತದೆ. ಮೂಲಾಂಕ ಅಥವಾ ರಾಡಿಕ್ಸ್‌ ನಂಬರ್‌ 4 ಅನ್ನು ಹೊಂದಿರುವವರ ಮೇಲೆ ರಾಹುವಿನ ವಿಶೇಷ ಅನುಗ್ರಹ ಇರುತ್ತದೆ. ರಾಹುವಿನ ಕಾರಣದಿಂದ ಇವರ ಯೋಚನಾ ರೀತಿಯೂ ಕೂಡಾ ಭಿನ್ನವಾಗಿರುತ್ತದೆ. ಇವರ ಈ ಯೋಚನಾ ಶಕ್ತಿ ಮತ್ತು ರೀತಿ ಶತ್ರುಗಳಿಗೆ ಬಲು ಅಪಾಯಕಾರಿಯಂತೆ. ಇವರು ತಮ್ಮ ಬುದ್ದಿವಂತಿಕೆ ಮತ್ತು ತಂತ್ರದಿಂದ ತಮ್ಮ ಜೀವನದಲ್ಲಿ ಎದುರಾಗುವ ಪ್ರತಿಯೊಂದು ಸವಾಲನ್ನು ಎದುರಿಸುತ್ತಾರೆ. ಇವರು ಒಂದು ಸ್ಥಳದಲ್ಲಿ ಇದ್ದಾರೆ ಎನ್ನುವುದೇ ಅವರ ಶತ್ರುಗಳ ಚಡಪಡಿಕೆಗೆ ಕಾರಣವಾಗಿ ಬಿಡುತ್ತದೆ.

ಮೂಲಾಂಕ 4 ಹೊಂದಿರುವವರ ಸ್ವಭಾವ ಮತ್ತು ವ್ಯಕ್ತಿತ್ವ:

ಮೂಲಾಂಕ 4 ಹೊಂದಿರುವವರು ನೋಡುವುದಕ್ಕೆ ಶಾಂತವಾಗಿರುತ್ತಾರೆ. ಆದರೆ ಇವರು ಸದಾ ಗಂಭೀರವಾದ ಮತ್ತು ಆಳವಾದ ಚಿಂತನೆಯನ್ನು ಹೊಂದಿರುತ್ತಾರೆ. ಇವರು ನೋಡುವುದಕ್ಕೆ ಸಾಮಾನ್ಯರಂತೆಯೇ ಕಾಣುತ್ತಾರೆ. ಆದರೆ ನಂಬಲಾಗದಷ್ಟು ಬಲಶಾಲಿ ಮತ್ತು ದೂರದೃಷ್ಟಿ ಉಳ್ಳವರಾಗಿರುತ್ತಾರೆ. ಇವರ ಮೇಲೆ ರಾಹುವಿನ ಆಶೀರ್ವಾದ ಇರುವ ಕಾರಣದಿಂದಲೇ ಇವರ ಜೀವನದಲ್ಲಿ ಕೆಲವೊಂದು ಬದಲಾವಣೆಗಳು ಹಠಾತ್‌ ಅಗಿ ನಡೆದು ಹೋಗುತ್ತವೆ. ಅನಿರೀಕ್ಷಿತ ಯಶಸ್ಸು ಕೂಡಾ ಒಲಿದು ಬರುತ್ತದೆ. ಯಾವುದೇ ಕೆಲಸವನ್ನು ಸಾಧಿಸಬೇಕು ಅಂದುಕೊಂಡರೆ ಆ ಕೆಲಸವನ್ನು ಸಾಧಿಸಿಯೇ ಬಿಡುತ್ತಾರೆ. ಅಲ್ಲಿಯವರೆಗೆ ಶ್ರಮವಿಲ್ಲದೆ ದುಡಿಯುತ್ತಾರೆ.

Born on These Dates

ಮೂಲಾಂಕ 4 ಹೊಂದಿರುವವರು ಶತ್ರುಗಳಿಗೆ ಯಾಕೆ ಅಪಾಯಕಾರಿ:

ರಾಹುವಿನ ದೆಸೆಯಿಂದ ಇವರು ತೀಕ್ಷ್ಣವಾದ ಬುದ್ದಿ ಹೊಂದಿರುವವರಾಗಿದ್ದು ಬೇರೆಯೇ ರೀತಿಯಲ್ಲಿ ಲೆಕ್ಕ ಹಾಕುತ್ತಿರುತ್ತಾರೆ. ಅವರು ಯಾವತ್ತೂ ತಮ್ಮ ಶತ್ರುಗಳನ್ನು ನೇರಾ ನೇರ ಎದುರಿಸುವುದಿಲ್ಲ. ಬದಲಿಗೆ ಸದ್ದಿಲ್ಲದೆ, ಸಂಚು ರೂಪಿಸಿ ಅವರನ್ನು ದುರ್ಬಲರನ್ನಾಗಿ ಮಾಡಿ ಬಿಡುತ್ತಾರೆ. ಶತ್ರುಗಳು ತಮ್ಮ ಜೊತೆ ಏನಾಗುತ್ತಿದೆ ಎಂದು ಅರ್ಥ ಮಾಡಿಕೊಳ್ಳವಷ್ಟರಲ್ಲಿ ಇವರು ಗೆದ್ದು ಬೀಗಿ ಬಿಡುತ್ತಾರೆ. ಮೂಲಾಂಕ ೪ ಹೊಂದಿರುವವರು ತಮ್ಮ ಶತ್ರುಗಳ ದೌರ್ಬಲ್ಯವನ್ನು ಬಹಳ ಬೇಗನೆ ಗುರತಿಸಿಕೊಳ್ಳುತ್ತಾರೆ ಮಾತ್ರವಲ್ಲ ಅದಕ್ಕೆ ತಕ್ಕಂತೆ ತಂತ್ರಗಳನ್ನು ರೂಪಿಸಿ ಬಿಡುತ್ತಾರೆ.ಹಾಗಾಗಿಯೇ ಈ ಮೂಲಾಂಕ ಹೊಂದಿರುವವರು ಶತ್ರುಗಳ ಪಾಲಿಗೆ ಬಲು ಅಪಾಯಕಾರಿ.

ವಾಸ್ತು: ನಂಬಿಕೆನಾ? ಅಥವಾ ವೈಜ್ಞಾನಿಕ ಸತ್ಯನಾ? ತಿಳಿದುಕೊಳ್ಳಿ ನಿಜಾಂಶ
ವಾಸ್ತು: ನಂಬಿಕೆನಾ? ಅಥವಾ ವೈಜ್ಞಾನಿಕ ಸತ್ಯನಾ? ತಿಳಿದುಕೊಳ್ಳಿ ನಿಜಾಂಶ

ರಾಹುವಿನ ಕೃಪೆಯಿಂದಲೇ ಯಶಸ್ಸು:

ಮೂಲಾಂಕ 4 ಹೊಂದಿರುವವರಿಗೆ ರಾಹು ಅನಿರೀಕ್ಷಿತ ಯಶಸ್ಸನ್ನು ನೀಡುತ್ತಲೇ ಇರುತ್ತಾನೆ. ಜೀವನದಲ್ಲಿ ಒಂದಾದ ಮೇಲೆ ಒಂದರಂತೆ ಅವಕಾಶಗಳನ್ನು ಕರುಣಿಸುತ್ತಲೇ ಇರುತ್ತಾನೆ. ಇವರು ಹೊಸ ತಂತ್ರಜ್ಞಾನ, ಸಂಶೊಧನೆ, ರಾಜಕೀಯ, ಕಾನೂನು ಮತ್ತು ರಹಸ್ಯ ಕಾರ್ಯಾಚರಣೆಗಳನ್ನು ಒಳಗೊಂಡ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುತ್ತಾರೆ. ರಾಹುವಿನ ತೀಕ್ಷ್ಣತೆಯಂತೆ ಇವರು ಕೂಡಾ ಅಳೆದು ತೂಗಿ ಸರಿಯಾದ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಾರೆ.

ವೃತ್ತಿ ಮತ್ತು ಆರ್ಥಿಕ ಸ್ಥಿತಿ:

ಮೂಲಾಂಕ 4 ಹೊಂದಿರುವವರು ತಮ್ಮ ವೃತ್ತಿ ಜೀವನದಲ್ಲಿ ನಿಧಾನವಾಗಿ ಆದರೆ ಸ್ಥಿರವಾಗಿ ಪ್ರಗತಿ ಸಾಧಿಸುತ್ತಾರೆ. ಸಂಶೋಧನೆ, ತನಿಖೆ, ನಿರ್ವಹಣೆ ಅಥವಾ ಗುಪ್ತಚರ ಸೇವೆಗಳನ್ನು ಒಳಗೊಂಡಿರುವ ಕ್ಷೇತ್ರಗಳು ಇವರಿಗೆ ಹೆಚ್ಚು ಸೂಕ್ತವಾಗಿರುತ್ತವೆ. ರಾಹುವಿನ ಪ್ರಭಾವದಿಂದಲೇ ಇವರ ಆರ್ಥಿಕ ಸ್ಥಿತಿ ಬಲಗೊಳ್ಳುತ್ತಲೇ ಹೋಗುವುದು. ಜೀವನದ ಆರಂಭದಲ್ಲಿ ಕೆಲವು ತೊಂದರೆಗಳು ಎದುರಾದರೂ ೩೫ನೇ ವಯಸ್ಸಿನ ಬಳಿಕ ಇವರಿಗೆ ಜೀವನದಲ್ಲಿ ಯಶಸ್ಸು ಸಿಗುವುದು. ಇವರು ದೀರ್ಘಾವಧಿಯ ಯೋಜನೆಗಳಲ್ಲಿ ಯಶಸ್ಸು ಹೊಂದುತ್ತಾರೆ.

ಅಳೆದು ತೂಗಿ ಅನ್ನ ಮಾಡಬೇಡಿ,ತುಸು ಮಿಕ್ಕಲಿ: ಇದರ ಹಿಂದಿದೆ ಧಾರ್ಮಿಕ ಕಾರಣ
ಅಳೆದು ತೂಗಿ ಅನ್ನ ಮಾಡಬೇಡಿ,ತುಸು ಮಿಕ್ಕಲಿ: ಇದರ ಹಿಂದಿದೆ ಧಾರ್ಮಿಕ ಕಾರಣ

ಆರೋಗ್ಯ:

ಆರೋಗ್ಯದ ವಿಷಯದಲ್ಲಿ ಹೇಳುವುದಾದರೆ ಇವರು ಕೀಲು ನೋವು, ಒತ್ತಡ, ನಿದ್ರೆಯ ಸಮಸ್ಯೆಗಳಿಂದ ಬಳಲುತ್ತಿರಬಹುದು. ಹಾಗಾಗಿ ಇವರಿಗೆ ಯೋಗ ಮತ್ತು ಧ್ಯಾನ ಹೆಚ್ಚು ಪ್ರಯೋಜನಕಾರಿಯಾಗಿದೆ. ಸಂಬಂಧಗಳ ವಿಚಾರದಲ್ಲಿ ಇವರು ನಿಷ್ಠಾವಂತರು.

ಮೂಲಾಂಕ 4 ಹೊಂದಿರುವವರು ರಾಹುವಿನ ಅಶೀರ್ವಾದದಿಂದ ಜೀವನದಲ್ಲಿ ಉತ್ತಮ ಯಶಸ್ಸನ್ನು ಕಂಡುಕೊಳ್ಳುತ್ತಾರೆ. ಇವರ ಜಾಣ್ಮೆ ಮತ್ತು ತಾಳ್ಮೆಯೇ ಇವರ ಸಾಮರ್ಥ್ಯವಾಗಿರುವುದು. ಸರಿಯಾಗಿ ಪ್ರಯತ್ನಪಟ್ಟರೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಯಶಸ್ಸು ಸಿಗುವುದು.

(ಬರಹ: ರಂಜಿತಾ ಆರ್.ಕೆ.)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+