ಅಕ್ಷಯ ತೃತೀಯದಂದೇ ಸೂರ್ಯನ ನಕ್ಷತ್ರಕ್ಕೆ ಚಂದ್ರನ ಪ್ರವೇಶ: ನಾಲ್ಕು ರಾಶಿಯವರಿಗೆ ಒಲಿದು ಬರುವುದು ಸಂಪತ್ತು
ಅಕ್ಷಯ ತೃತೀಯದಂದು ಚಂದ್ರನು ಸೂರ್ಯನ ನಕ್ಷತ್ರಕ್ಕೆ ಕಾಲಿಡುತ್ತಾನೆ. ಚಂದ್ರನ ಈ ನಕ್ಷತ್ರ ಪರಿವರ್ತನೆ 4 ರಾಶಿಯವರಿಗೆ ಶುಭವಾಗಿ ಪರಿಣಮಿಸಲಿದೆ.ಇದು ನಾಲ್ಕು ರಾಶಿಯವರಿಗೆ ಸಂಪತ್ತು ಸಮೃದ್ಧಿ ಒಲಿದು ಬರುವ ನಿರೀಕ್ಷೆಯಿದೆ.ಮಾನಸಿಕ ಶಾಂತಿ ಹೆಚ್ಚಾಗುವ ಮೂಲಕ ಈ ರಾಶಿಯವರ ಆತ್ಮವಿಶ್ವಾಸ ಹೆಚ್ಚಳಕ್ಕೂ ಕಾರಣವಾಗುವುದು.
ಕೃತ್ತಿಕಾ ನಕ್ಷತ್ರದಲ್ಲಿ ಚಂದ್ರನ ಸಂಕ್ರಮಣ:
ಏಪ್ರಿಲ್ 19, 2026 ರ ಭಾನುವಾರ ಬೆಳಿಗ್ಗೆ 7:09 ಕ್ಕೆ ಚಂದ್ರನು ಸೂರ್ಯನ ನಕ್ಷತ್ರವಾದ ಕೃತ್ತಿಕಾ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಅದೇ ದಿನ ಅಕ್ಷಯ ತೃತೀಯವನ್ನು ಕೂಡಾ ಆಚರಿಸಲಾಗುವುದು.ಈ ಶುಭ ದಿನದಂದು ಸೂರ್ಯನ ನಕ್ಷತ್ರದಲ್ಲಿ ಚಂದ್ರನ ಉಪಸ್ಥಿತಿಯು ನಾಲ್ಕು ರಾಶಿಯವರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿ ಸಾಬೀತಾಗಲಿದೆ.ಈ ಕೃತ್ತಿಕಾ ನಕ್ಷತ್ರದಲ್ಲಿ ಚಂದ್ರನು ಏಪ್ರಿಲ್ 20 ರ ಬೆಳಿಗ್ಗೆ 4:34 ರವರೆಗೆ ಸಂಚಾರ ನಡೆಸಲಿದ್ದಾನೆ. ಆರ್ಥಿಕ ಲಾಭಗಳು, ಆತ್ಮವಿಶ್ವಾಸದ ಹೆಚ್ಚಳ, ಸಂಪತ್ತು ವೃದ್ಧಿ ಮತ್ತು ಮಾನಸಿಕ ಶಾಂತಿಯ ಮೂಲಕ ಈ ಚಂದ್ರ ಸಂಚಾರದ ಶುಭ ಪರಿಣಾಮಗಳು ಗೋಚರವಾಗಲಿದೆ. ಹಾಗಿದ್ದರೆ ಚಂದ್ರನ ನಕ್ಷತ್ರ ಬದಲಾವಣೆ ಯಾವ ರಾಶಿಯವರಿಗೆ ಶುಭ ಫಲ ನೀಡಲಿದೆ ಎಂದು ನೋಡುವುದಾದರೆ...

ಕರ್ಕಾಟಕ ರಾಶಿ:
ಸೂರ್ಯನ ನಕ್ಷತ್ರಕ್ಕೆ ಚಂದ್ರನ ಸಂಚಾರ ಕರ್ಕಾಟಕ ರಾಶಿಯವರ ಪಾಲಿಗೆ ಒಂದು ಮಹತ್ವದ ಬದಲಾವಣೆಯನ್ನು ತರಬಹುದು. ಆರ್ಥಿಕ ಲಾಭವಾಗುವುದು. ಆರೋಗ್ಯದಲ್ಲಿ ಸುಧಾರಣೆಯ ಸಾಧ್ಯತೆ ಹೆಚ್ಚಾಗುತ್ತದೆ. ಹಳೆಯ ಸಾಲಗಳಿಂದ ಮುಕ್ತಿ ಸಿಗುವುದರ ಜೊತೆಗೆ ಮಾನಸಿಕ ಶಾಂತಿ ದೊರೆಯುತ್ತದೆ. ಹೂಡಿಕೆ ಯೋಜನೆಗಳನ್ನು ಕಾರ್ಯಗತಗೊಳಿಸಲು ಈ ದಿನ ಶುಭವಾಗಿರಲಿದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ.
ಸಿಂಹ ರಾಶಿ:
ಚಂದ್ರನು ಕೃತ್ತಿಕಾ ನಕ್ಷತ್ರಕ್ಕೆ ಪ್ರವೇಶಿಸುವ ಮೂಲಕ ಸಿಂಹ ರಾಶಿಯವರು ಅನಿರೀಕ್ಷಿತ ಆರ್ಥಿಕ ಲಾಭವನ್ನು ಕಾಣಬಹುದು.ಆದಾಯ ಹೆಚ್ಚಾಗುವ ನಿರೀಕ್ಷೆಯಿದೆ.ಮಾಡುವ ಪ್ರತಿ ಕೆಲಸಕ್ಕೂ ಕುಟುಂಬ ಸದಸ್ಯರ ಬೆಂಬಲ ಸಿಗುವುದು. ಭಾವನಾತ್ಮಕವಾಗಿರುವುದರ ಜೊತೆಗೆ ಸಂಬಂಧಗಳು ಇನ್ನಷ್ಟು ಗಟ್ಟಿಯಾಗುವುದು. ಪ್ರಮುಖ ವ್ಯವಹಾರ ನಿರ್ಧಾರಗಳನ್ನು ಈ ದಿನ ತೆಗೆದುಕೊಳ್ಳಬಹುದು.ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆ ಹೆಚ್ಚಿದೆ.
ಧನು ರಾಶಿ:
ಚಂದ್ರನ ಸಂಚಾರವು ಧನು ರಾಶಿಯವರಿಗೆ ಹೆಚ್ಚು ಪ್ರಯೋಜನಕಾರಿಯಾಗಿ ಇರಲಿದೆ.ಹಠಾತ್ ಆಗಿ ಸಿಗುವ ಯಶಸ್ಸು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.ಆದಾಯದ ಬಹು ಮಾರ್ಗಗಳು ತೆರೆದುಕೊಳ್ಳಬಹುದು. ಕೈಗೂಡದೇ ಬಾಕಿ ಉಳಿದಿದ್ದ ಕೆಲಸಗಳು ಈ ಹೊತ್ತಿನಲ್ಲಿ ಪೂರ್ಣವಾಗುವುದು.ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳಬಹುದು.
ಕುಂಭ ರಾಶಿ:
ಕುಂಭ ರಾಶಿಯವರಿಗೆ ಚಂದ್ರನ ಸಂಚಾರವು ಗಮನಾರ್ಹ ಫಲಿತಾಂಶಗಳನ್ನು ನೀಡುವ ಸಾಧ್ಯತೆ ಇದೆ.ಆದಾಯ ಹೆಚ್ಚಾಗಬಹುದು.ಹೊಸ ಉದ್ಯೋಗಾವಕಾಶಗಳು ಒದಗಿ ಬರಬಹುದು. ಹೆಚ್ಚು ಸಂಪತ್ತನ್ನು ಸಂಪಾದಿಸುವ ಸಾಧ್ಯತೆಗಳು ಹೆಚ್ಚಾಗಬಹುದು. ಪೂರ್ವಜರ ಆಸ್ತಿ ನಿಮ್ಮದಾಗಬಹುದು. ಬಹುಕಾಲದ ಆಸೆ ಈಡೇರುವುದು.ಈ ಅವಧಿಯಲ್ಲಿ ಆರ್ಥಿಕ ಲಾಭವಾಗುವುದು.
(ಬರಹ: ರಂಜಿತಾ ಆರ್.ಕೆ.)
-
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
NASA Artemis II: ಬಾಹ್ಯಾಕಾಶಯಾನ ಯಶಸ್ವಿ, 4 ಗಗನಯಾನಿಗಳು ಮರಳಿ ಭೂಮಿಗೆ, ಅವರೊಂದಿಗೆ ಹಾರಿದ್ದ 'ಡಲ್ಕೋಫ್ಲೆಕ್ಸ್' ಮಾತ್ರೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ












Click it and Unblock the Notifications