Cat: ಬೆಂಗಳೂರಲ್ಲಿ ಬೆಕ್ಕುಗಳ ಪ್ರೇಮ ಪ್ರಕರಣ - ಇತ್ಯರ್ಥಕ್ಕೆ ಪೊಲೀಸರೇ ಬರಬೇಕಾಯ್ತು, ವೈರಲ್ ಸುದ್ದಿ
Bengaluru Cat Love Drama: ಬೆಂಗಳೂರಿನಲ್ಲಿ ಬೆಕ್ಕಿನ ಮರಿಗಳ ವಿಚಾರಕ್ಕೆ ಸಂಬಂಧಿಸಿದಂತೆ ವಿಚಿತ್ರ ಜಗಳವೊಂದು ನಡೆದಿದ್ದು, ಈ ಜಗಳ ಬಿಡಿಸುವುದಕ್ಕೆ ಪೊಲೀಸರೇ ಬರಬೇಕಾಯ್ತು. ಹೌದು ಬೆಂಗಳೂರಿನಂತಹ ನಗರದಲ್ಲಿ ಬೆಕ್ಕಿನ ಮರಿಗಾಗಿ ಜನ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ವಿಚಿತ್ರ ಸಮಸ್ಯೆಗೆ ಪೊಲೀಸರು ಸರಳ ಮಾರ್ಗವನ್ನು ಕಂಡುಕೊಂಡಿದ್ದಾರೆ. ಈ ವಿಚಾರವು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಮೊದಲಿಗೆ ಬೆಕ್ಕು ಮರಿ ಹಾಕುವುದಕ್ಕೆ ಯಾವ ಬೆಕ್ಕು ಕಾರಣ ಎನ್ನುವ ವಿಚಾರಕ್ಕೆ ಬೆಂಗಳೂರಿನ ಎರಡು ಕುಟುಂಬಗಳು ಜಗಳವಾಡಿಕೊಂಡಿರುವುದನ್ನು ನೋಡಿ ಪೊಲೀಸರೇ ನಕ್ಕಿದ್ದಾರೆ. ಇಷ್ಟಕ್ಕೂ ಏನಿದು ಬೆಕ್ಕು - ಬೆಕ್ಕು ಮರಿ ಜಗಳ ಪೊಲೀಸರು ಕಂಡುಕೊಂಡ ಸರಳ ಪರಿಹಾರವೇನು ಎನ್ನುವ ಸಂಪೂರ್ಣ ವಿವರ ಈ ಲೇಖನದಲ್ಲಿದೆ.
ಬೆಂಗಳೂರು ನಗರದಲ್ಲಿ ಅಕ್ಕ ಪಕ್ಕದ ಎರಡು ಮನೆಗಳಲ್ಲಿರುವ ಮಾರ್ಜಾಲಗಳ ಪ್ರೇಮ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದೆ. ಹೌದು ಇದು ಕೇಳುವುದಕ್ಕೆ ಹಾಸ್ಯವೆನಿಸದರೂ ಬೆಕ್ಕಿನ ಪ್ರೇಮ ವಿಚಾರವು ಎರಡು ಕುಟುಂಬಗಳು ಜಗಳವಾಡಿಕೊಳ್ಳುವುದಕ್ಕೆ ಕಾರಣವಾಗಿದೆ. ಅಲ್ಲದೆ ಈ ಜಗಳವನ್ನು ಬಿಡಿಸುವುದಕ್ಕೆ ಪೊಲೀಸರೇ ಮಧ್ಯಪ್ರವೇಶ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು.

ನಗರದಲ್ಲಿ ಎರಡು ಬೆಕ್ಕು ಮರಿಗಳ ನಡುವಿನ ಆತ್ಮೀಯತೆ ವಿಚಾರವು ಇಬ್ಬರು ಕುಟುಂಬದ ನಡುವೆ ದೊಡ್ಡ ಮಟ್ಟದ ಜಗಳವಾಗುವುದಕ್ಕೆ ಹಾಗೂ ಕೈ - ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ನಮ್ಮ ಹೆಣ್ಣು ಬೆಕ್ಕು ಮರಿ ಹಾಕುವುದಕ್ಕೆ ನಿಮ್ಮ ಗಂಡು ಬೆಕ್ಕೇ ಕಾರಣ ಎಂದು ಆರೋಪಿಸಿ, ಹೆಣ್ಣು ಬೆಕ್ಕು ಸಾಕುತ್ತಿದ್ದ ಮಾಲೀಕರೊಬ್ಬರು ಗಂಡು ಬೆಕ್ಕಿನ ಮಾಲೀಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮಾರ್ಜಾಲ ಪ್ರೇಮ ಪ್ರಕರಣ: ಹಿನ್ನೆಲೆ ಏನು
ಬೆಂಗಳೂರಿನ ಶೇಷಾದ್ರಿಪುರದ ಜಯಭೀಮ ನಗರದಲ್ಲಿರುವ ಅಕ್ಕ-ಪಕ್ಕದ ಮನೆಗಳಲ್ಲಿರುವವರು ತಮ್ಮ ಮನೆಗಳಲ್ಲಿ 2 ಬೆಕ್ಕುಗಳನ್ನು ಸಾಕಿಕೊಂಡಿದ್ದಾರೆ. ಹೆಣ್ಣು ಬೆಕ್ಕು ಭಾನುವಾರ 4 ಮರಿಗಳಿಗೆ ಜನ್ಮ ಕೊಟ್ಟಿದೆ. ಮರಿಗಳು ಹುಟ್ಟಿದ ಕೂಡಲೇ ಕೋಪಗೊಂಡ ಹೆಣ್ಣು ಬೆಕ್ಕಿನ ಮಾಲೀಕರು, ಗಂಡು ಬೆಕ್ಕಿನ ಮಾಲೀಕರೊಂದಿಗೆ ಜಗಳಕ್ಕೆ ಇಳಿದಿದ್ದಾರೆ. ನಮ್ಮ ಬೆಕ್ಕು ಮರಿಗಳು ಹಾಕುವುದಕ್ಕೆ ನಿಮ್ಮ ಬೆಕ್ಕೇ ಕಾರಣ ಎಂದು ಆರೋಪಿಸಿದ್ದಾರೆ. ಈ ಮರಿಗಳನ್ನು ನೀವೇ ಸಾಕಿ ಎಂದು ಮರಿಗಳನ್ನು ಗಂಡು ಬೆಕ್ಕಿನವರ ಮನೆಗೆ ಬಿಟ್ಟು ಬಂದಿದ್ದಾರೆ. ಈ ವಿಚಾರವು ಮಾತಿನಿಂದ ಜಗಳಕ್ಕೆ ತಿರುಗಿದೆ. ನಡು ರಸ್ತೆಯಲ್ಲಿ ಪರಸ್ಪರ ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಅಲ್ಲದೆ ಹೆಣ್ಣು ಬೆಕ್ಕಿನ ಮನೆಯವರು ನಿಮ್ಮ ಮಕ್ಕಳಿಗೆ ಆ್ಯಸಿಡ್ ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದೂ ಹೇಳಲಾಗಿದೆ.
Bengaluru Cat Love Drama: ತಲಾ ಎರಡು ಬೆಕ್ಕು ಹಂಚಿ ಪ್ರಕರಣ ಇತ್ಯರ್ಥ
ಇನ್ನು ಈ ವಿಚಾರವಾಗಿ ತಕ್ಷಣವೇ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಲಾಗಿದ್ದು, ಹೊಯ್ಸಳ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಬೆಂಗಳೂರು ನಗರ ಪೊಲೀಸರು ಎರಡೂ ಕಡೆಯವರ ಜಗಳವನ್ನು ಬಿಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಅಲ್ಲದೆ 4 ಬೆಕ್ಕಿನ ಮರಿಗಳಲ್ಲಿ ಎರಡೂ ಕುಟುಂಬಕ್ಕೆ ತಲಾ ಎರಡೆರಡು ಬೆಕ್ಕುಗಳ ಹಂಚಿದ್ದು, ಸಾಕುವಂತೆ ಹೇಳಿದ್ದಾರೆ. ಈ ಮೂಲಜ ಶೇಷಾದ್ರಿಪುರಂ ಪೊಲೀಸರು ಪ್ರಕರಣ ಇತ್ಯರ್ಥ ಮಾಡಿದ್ದಾರೆ.
-
ಬೆಂಗಳೂರು ಹೆಬ್ಬಾಳದ ಮೆಟ್ರೋ ಏಕೀಕೃತ ಸಾರಿಗೆ: 55 ಎಕರೆ ಭೂ ವಿವಾದ - ಸಿಬಿಐ ತನಿಖೆಗೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ












Click it and Unblock the Notifications