ಇಂದು ಸಂಜೆ 6 ಗಂಟೆಗೆ ಬಹುನಿರೀಕ್ಷಿತ ಚುನಾವಣೋತ್ತರ ಸಮೀಕ್ಷೆ
ನವದೆಹಲಿ, ಮೇ 19: ಬಹುನಿರೀಕ್ಷಿತ ಚುನಾವಣೋತ್ತರ ಸಮೀಕ್ಷೆ ಅಥವಾ ಎಕ್ಸಿಟ್ ಪೋಲ್ ಇಂದು ಸಂಜೆ 6 ಗಂಟೆಯಿಂದ ಪ್ರಕಟವಾಗಲಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಜನಪ್ರತಿನಿಧಿ ಕಾಯ್ದೆ ಹಾಗೂ ಚುನಾವಣಾ ಆಯೋಗದ ನಿರ್ದೇಶನದ ಮೊದಲ ಹಂತದ ಮತದಾನಕ್ಕೆ 48 ಗಂಟೆಗಳಿರುವ ಮುಂಚೆ ಹಾಗೂ ಕೊನೆಯ ಹಂತದ ಮತದಾನ ಅಂತ್ಯವಾಗುವವರೆಗೂ ಯಾವುದೇ ರೀತಿಯ ಚುನಾವಣಾ ಪೂರ್ವ ಅಥವಾ ಚುನಾವಣೋತ್ತರ ಸಮೀಕ್ಷೆಯನ್ನು ಮಾಡಕೂಡದು.
ಹೀಗಾಗಿ ಕಳೆದ 40ದಿನಗಳಿಂದ ನಡೆಯುತ್ತಿರುವ ಮತೋತ್ಸವದ ಫಲಿತಾಂಶದ ಬಗ್ಗೆ ಕೋಟ್ಯಂತರ ಮತದಾರರಲ್ಲಿ ಕುತೂಹಲ ಮೂಡಿಸಿದೆ.

ಮೇ 23ಕ್ಕೆ ಫಲಿತಾಂಶವಿದ್ದರೂ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎನ್ನುವ ಅಂದಾಜು ಲೆಕ್ಕಾಚಾರ ಈ ಎಕ್ಸಿಟ್ ಪೋಲ್ ವರದಿ ಮಾಡಲಿದೆ.
ಎಕ್ಸಿಟ್ ಪೋಲ್ ಹಿನ್ನೆಲೆ: 1960ರ ದಶಕದಲ್ಲಿ ಸಿಎಸ್‌ಡಿಎಸ್ ಎನ್ನುವ ಸಂಸ್ಥೆ ಮೂಲಕ ಭಾರತದಲ್ಲಿ ಚುನಾವಣೋತ್ತರ ಸಮೀಕ್ಷೆ ಆರಂಭವಾಯಿತು. ಆದರೆ 1998ರವರೆಗೂ ಮಾಧ್ಯಮ ವಲಯದಲ್ಲಿ ಗಂಭೀರ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿರಲಿಲ್ಲ.
1999-2004, 20092014ರ ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್ ಭಾರತದಲ್ಲಿ ಪ್ರಕಟವಾಗಿದೆ.
ಈ ನಾಲ್ಕು ಲೋಕಸಭಾ ಚುನಾವಣೆಯ ಪೈಕಿ 99 ಹಾಗೂ 2014ರಲ್ಲಿ ಚುನಾವಣೋತ್ತರ ಸಮೀಕ್ಷೆ ನಿಜವಾಗಿದ್ದರೆ 2004, 2009ರಲ್ಲಿ ಸುಳ್ಳಾಗಿದೆ ಹೀಗಾಗಿ ಈ ಬಾರಿ ಯಾವ ಮಾಧ್ಯಮ ಹಾಗೂ ಏಜೆನ್ಸಿಗಳು ನಿಖರ ಫಲಿತಾಂಶ ಅಂದಾಜಿಸುತ್ತವೆ ಎನ್ನುವುದು ಕುತೂಹಲ ಮೂಡಿಸಿದೆ.











Click it and Unblock the Notifications