• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಿಂಡಿಪ್ರಿಯರೇ ಎಚ್ಚರ; ಮೊಮೊಸ್ ತಿನ್ನುವಾಗ ಉಸಿರುಗಟ್ಟಿ ವ್ಯಕ್ತಿ ಸಾವು

|
Google Oneindia Kannada News

ನವದೆಹಲಿ, ಜೂನ್ 15: ಡಂಪ್ಲಿಂಗ್ ಅಥವಾ ಮೊಮೊಸ್ ತಿನ್ನುವಾಗ ಉಸಿರುಗಟ್ಟಿ 50 ವರ್ಷದ ವ್ಯಕ್ತಿ ಸಾವನ್ನಪ್ಪಿದ ಅಘಾತಕಾರಿ ಘಟನೆಯೊಂದು ದೆಹಲಿಯಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ AIIMS ನಿಂದ ಆರೋಗ್ಯ ಎಚ್ಚರಿಕೆ ನೀಡಲಾಗಿದೆ. ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯು ಭಾರತದ ಅಚ್ಚುಮೆಚ್ಚಿನ ತಿಂಡಿ ಮೊಮೊಸ್ ಕುರಿತು ಕೆಲ ಸಲಹೆಯನ್ನು ನೀಡಿದೆ.

AIIMS ಫೋರೆನ್ಸಿಕ್ ತಜ್ಞರು ವ್ಯಕ್ತಿಯ ಸಾವಿನ ಹಿಂದಿನ ಕಾರಣವನ್ನು ಕಂಡುಹಿಡಿದಿದ್ದಾರೆ. ಬಳಿಕ ವೈದ್ಯಕೀಯ ಸಂಸ್ಥೆ ಎಲ್ಲರಿಗೂ ಮೊಮೊಸ್ ಎಚ್ಚರಿಕೆಯಿಂದ ತಿನ್ನಲು ಮತ್ತು ನುಂಗಲು ಸಲಹೆ ನೀಡಿದೆ.

ಆಹಾರ ಪ್ರೇಮಿಗಳಿಗೆ ಮೊಮೊಸ್ ತಿನ್ನುವ ಸವಾಲ್: ಗೆದ್ದವರಿಗೆ 1 ಲಕ್ಷ ಬಹುಮಾನ ಆಹಾರ ಪ್ರೇಮಿಗಳಿಗೆ ಮೊಮೊಸ್ ತಿನ್ನುವ ಸವಾಲ್: ಗೆದ್ದವರಿಗೆ 1 ಲಕ್ಷ ಬಹುಮಾನ

ವ್ಯಕ್ತಿ ಪಾನಮತ್ತನಾಗಿದ್ದ ಎಂದು ನಂಬಲಾಗಿದೆ ಮತ್ತು ರಸ್ತೆ ಬದಿಯ ಅಂಗಡಿಯಲ್ಲಿ ಮೊಮೊಸ್ ತಿನ್ನುತ್ತಿದ್ದಾಗ ಅವರು ಇದ್ದಕ್ಕಿದ್ದಂತೆ ನೆಲದ ಮೇಲೆ ಕುಸಿದಿದ್ದಾನೆ. ಬಳಿಕ ಆತನನ್ನು ದೆಹಲಿಯ ಏಮ್ಸ್‌ಗೆ ತರಲಾಯಿತು ಎಂದು ವರದಿಯಾಗಿದೆ.

ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ವ್ಯಕ್ತಿಯ ಶ್ವಾಸನಾಳದ ತೆರೆಯುವಿಕೆಯಲ್ಲಿ ಡಂಪ್ಲಿಂಗ್ ಪತ್ತೆಯಾಗಿದೆ. ಹೀಗಾಗಿ ಅವರು ಉಸಿರುಗಟ್ಟಿಸುವಿಕೆಯಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತೀರ್ಮಾನಿಸಿದ್ದಾರೆ. ಗಂಟಲಿನಲ್ಲಿ ಕಂಡುಬಂದ ಮೊಮೊಸ್ ಉಸಿರುಗಟ್ಟಿಸಿ ವ್ಯಕ್ತಿ ಸಾವಿನ ಕಾರಣವನ್ನು ನ್ಯೂರೋಜೆನಿಕ್ ಕಾರ್ಡಿಯಾಕ್ ಅರೆಸ್ಟ್ ಎಂದು ತೀರ್ಮಾನಿಸಲಾಗಿದೆ.

ಭಾರತದಾದ್ಯಂತ ಪ್ರತಿಯೊಂದು ರಸ್ತೆಬದಿಯ ಅಂಗಡಿಗಳು ಮತ್ತು ಹೈ-ಎಂಡ್ ರೆಸ್ಟೋರೆಂಟ್‌ಗಳಲ್ಲಿ ಕಂಡುಬರುವ ಜನಪ್ರಿಯ ಖಾದ್ಯವನ್ನು ತಿನ್ನುವ ಕುರಿತು AIIMS ಸಲಹೆಯನ್ನು ನೀಡಿದೆ.

Man Dies Choking on Momos, AIIMS issues advisory

ಉಸಿರುಗಟ್ಟುವಿಕೆ ಎಂದರೆ ಶ್ವಾಸನಾಳದಲ್ಲಿ ಅಡಚಣೆಯಿರುವ ಸ್ಥಿತಿ. ನಾವು ಏನಾದರೂ ದೊಡ್ಡದನ್ನು ತಿಂದಾಗ, ಅದು ಆಹಾರದ ಪೈಪ್ ಅಥವಾ ಶ್ವಾಸನಾಳವನ್ನು ನಿರ್ಬಂಧಿಸುತ್ತದೆ. ಅಂತಹ ಆಹಾರವನ್ನು ನುಂಗುವ ಮೊದಲು ಅದನ್ನು ಸರಿಯಾಗಿ ಅಗಿಯಲು ಸೂಚಿಸಲಾಗಿದೆ.

(ಒನ್ಇಂಡಿಯಾ ಸುದ್ದಿ)

English summary
AIIMS issued an advisory on momos. The health warning was issued by AIIMS following the death of a 50-year-old man due to choking on a dumpling or the momo. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X