ಗುದ್ದೋಡು ಪ್ರಕರಣ: ಸಲ್ಮಾನ್ ಗೆ ಮತ್ತೆ ಸಂಕಟ, ಸುಪ್ರೀಂನಿಂದ ನೋಟಿಸ್

Posted By:
Subscribe to Oneindia Kannada

ನವದೆಹಲಿ, ಫೆ. 19: 2002ರ ಹಿಟ್‌ ಆಂಡ್‌ ರನ್ ಪ್ರಕರಣದಲ್ಲಿ ದೋಷಮುಕ್ತ ಎಂದು ಕರೆಸಿಕೊಂಡಿದ್ದ ನಟ ಸಲ್ಮಾನ್ ಖಾನ್ ಗೆ ಮತ್ತೆ ಸಂಕಟ ಶುರುವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್‌ಖಾನ್‌ಗೆ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.

ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟೀಗೆ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಜಸ್ಟೀಸ್ ಜಗ್ಜೀತ್ ಸಿಂಗ್ ಖೇಹಾರ್, ಜಸ್ಟೀಸ್ ಸಿ ನಾಗಪ್ಪನ್ ಅವರಿದ್ದ ನ್ಯಾಯಪೀಠ, ನಟ ಸಲ್ಮಾನ್ ಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಎದುರಿಸುವಂತೆ ನಿರ್ದೇಶಿಸಿದೆ.[ಹಿಟ್ ಅಂಡ್ ರನ್ ರಿಲೀಸ್ ಟೈಮ್ ಲೈನ್]

Hit-and-run case: SC issues notice to Salman Khan

'ಬಾಂಬೆ ಹೈಕೋರ್ಟ್ ನಿಂದ ದೋಷಮುಕ್ತರಾಗಿದ್ದಾರೆ ಎಂದ ಮೇಲೆ ಈ ಕೋರ್ಟಿನಿಂದಲೂ ದೋಷಮುಕ್ತರಾಗಲಿ' ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.[ಸಲ್ಮಾನ್ ಸೇಫ್ : ಕಮಲ್, ಅಶೋಕ್ ಮತ್ತೆ ಯಾರ ಹೆಲ್ಪ್ ಕಾರಣ?]

2002 ರ ಹಿಟ್ ಅಂಡ್ ರನ್ ಕೇಸಿನಲ್ಲಿ ಫಿಟ್ ಆಗಿದ್ದ 49 ವರ್ಷ ವಯಸ್ಸಿನ ನಟ ಸಲ್ಮಾನ್ ಖಾನ್ ಅವರಿಗೆ ಬಾಂಬೆ ಹೈಕೋರ್ಟಿನಿಂದ ಸಂಪೂರ್ಣ ನೆಮ್ಮದಿಯ ಸುದ್ದಿ ಸಿಕ್ಕಿದೆ. ಈ ಹಿಂದೆ ಸೆಷನ್ಸ್ ಕೋರ್ಟ್ 5 ವರ್ಷ ಶಿಕ್ಷೆ ವಿಧಿಸಿದಾಗಲೂ ಹೈಕೋರ್ಟ್ ತ್ವರಿತವಾಗಿ ಜಾಮೀನು ಮಂಜೂರು ಮಾಡಿತ್ತು.

ಸೆ.28, 2002ರಂದು ಸಲ್ಮಾನ್ ಖಾನ್ ಅವರಿದ್ದ ಲ್ಯಾಂಡ್ ರೋವರ್ ವಾಹನ ಅಡ್ಡಾದಿಡ್ಡಿ ಚಲಿಸಿ ಅಮೆರಿಕನ್ ಎಕ್ಸ್ ಪ್ರೆಸ್ ಲಾಂಡ್ರಿಯ ಫುಟ್ ಪಾತ್ ನಲ್ಲಿದ್ದ ನೂರುಲ್ಲಾ ಸಾವಿಗೆ ಕಾರಣವಾಗಿತ್ತು. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Supreme court on Friday issued notice to filmstar Salman Khan on the Maharashtra government's petition challenging a Bombay high court verdict acquitting him in a 2002 hit-and-run case.
Please Wait while comments are loading...