ಹೊಸ ರೆಸ್ಟೋರೆಂಟ್ ತೆರೆದ ಬಾಬಾ ಕಾ ಢಾಬಾ ಮಾಲೀಕ ಕಾಂತ ಪ್ರಸಾದ್

ನವದೆಹಲಿ, ಡಿಸೆಂಬರ್ 21: ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗಷ್ಟೇ ಹೆಸರು ಮಾಡಿದ್ದ, ಬಾಬಾ ಕಾ ಢಾಬಾ ಖ್ಯಾತಿಯ ಕಾಂತ ಪ್ರಸಾದ್ ಇದೀಗ ಹೊಸ ರೆಸ್ಟೋರೆಂಟ್ ತೆರೆದಿದ್ದಾರೆ.

ಕಾಂತ ಪ್ರಸಾದ್ ಇದೀಗ ತನ್ನ ಹಳೇ ಡಾಬಾದ ಪಕ್ಕದಲ್ಲಿ ನೂತನ ರೆಸ್ಟೊರೆಂಟನ್ನು ತೆರೆದಿದ್ದಾರೆ. ಸುಸಜ್ಜಿತ ಅಡುಗೆ ಕೋಣೆಯನ್ನು ಹೊಂದಿರುವ ರೆಸ್ಟೊರೆಂಟಲ್ಲಿ ಬಾಬಾ ಅಡುಗೆ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡಿದ್ದಾರೆ.ಆದರೆ ತನಗೆ ಸಹಾಯಕರಗಿ ಕೆಲವರನ್ನು ಇರಿಸಿಕೊಂಡಿದ್ದಾರೆ.

ಡಾಬಾಕ್ಕೆ ಈಗಾಗಲೇ ಭಾರೀ ಸಂಖ್ಯೆಯಲ್ಲಿ ಗ್ರಾಹಕರು ಬರುತ್ತಿದ್ದಾರೆ. ಕಾಂತಪ್ರಸಾದ್ ಹೊಸ ರೆಸ್ಟೊರೆಂಟ್ ತೆರೆದಿದ್ದರೂ ಊಟತಿಮಡಿಯ ಹಣ ಮಾತ್ರ ರಿಕೆ ಮಾಡಿಲ್ಲ. ಈಗಲೂ ಹಳೆ ದರದಲ್ಲೇ ಊಟ ತಿಂಡಿ ಸಿಗುತ್ತಿದೆ.

 Delhis Baba Ka Dhaba Owner, Now Has Restaurant

ತನ್ನ ಹೊಸ ರೆಸ್ಟೊರೆಂಟ್ ನಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ. ಇತ್ತೀಚೆಗೆ ತಮಗೆ ಪ್ರಾಣಭಯ ಇದೆ ಎಂದು ಹೇಳಿಕೊಳ್ಳುತ್ತಿರುವ ಕಾಂತಪ್ರಸಾದ್ ತನ್ನ ರೆಸ್ಟೊರೆಂಟ್ ನಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ.

ಹೊಸ ರೆಸ್ಟೊರೆಂಟಲ್ಲಿ ತನಗಾಗಿ ಪ್ರತ್ಯೇಕ ಕ್ಯಾಬಿನ್ ಹೊಂದಿರುವ ಕಾಂತಪ್ರಸಾದ್ ರೆಸ್ಟೊರೆಂಟ್ ವ್ಯವಹಾರವನ್ನು ತಾನೇ ನೋಡಿಕೊಳ್ಳುತ್ತಿದ್ದಾರೆ.

ಲಾಕ್‌ಡೌನ್ ಸಂದರ್ಭದಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಈ ಢಾಬಾ ಮಾಲೀಕರಿಗೆ ಸ್ಪಿನ್ನರ್ ಅಶ್ವಿನ್ ಒಂದು ಟ್ವೀಟ್‌ನಿಂದಾಗಿ ಮುಖದಲ್ಲಿ ಮಂದಹಾಸ ಮೂಡಿತ್ತು. ಸಾಕಷ್ಟು ಮಂದಿ ಆರ್ಥಿಕ ಸಹಾಯ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+