• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇನ್ಸುರೆನ್ಸ್ ದುಡ್ಡಿಗಾಗಿ ತನ್ನನ್ನು ತಾನೇ ಮರ್ಡರ್ ಮಾಡಿಸಿಕೊಂಡ ಉದ್ಯಮಿ

|

ನವದೆಹಲಿ, ಜೂನ್ 15: ಇದೊಂದು ತೀರಾ ಅಪರೂಪದ ಘಟನೆ. ಇನ್ಸುರೆನ್ಸ್ ದುಡ್ದಿಗಾಗಿ, ನಾಲ್ಕು ಜನರಿಗೆ ಸುಪಾರಿ ಕೊಟ್ಟು, ತನ್ನನ್ನು ತಾನೇ ಉದ್ಯಮಿಯೊಬ್ಬ ಕೊಲೆ ಮಾಡಿಸಿಕೊಂಡಿದ್ದಾನೆ.

   Eating Garlic During Pregnancy – Benefits, Risks | Oneindia Kannada

   ಐದು ದಿನಗಳ ಕೆಳಗೆ ಈ ಉದ್ಯಮಿಯ ಶವವು ದೆಹಲಿ ಹೊರಭಾಗದಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. 37ವರ್ಷದ ಗೌರವ್ ಎನ್ನುವ ಈ ವ್ಯಕ್ತಿ, ದಿನಸಿ ವಹಿವಾಟನ್ನು ನಡೆಸುತ್ತಿದ್ದ.

   ಡಿಜಿಟಲ್ ವಾಹನ ವಿಮೆ ನೀಡಲು ಮುಂದಾದ ಫ್ಲಿಪ್‍ಕಾರ್ಟ್ - ಬಜಾಜ್ ಅಲಾಯನ್ಜ್

   ಈತನ ಪತ್ನಿ, ಗಂಡ ಅಂಗಡಿ ಹೋದವರು ಹಿಂದಿರುಗಿ ಬಂದಿಲ್ಲ ಎಂದು ದೂರು ನೀಡಿದ ಮೇಲೆ, ಪೊಲೀಸರ ವಿಚಾರಣೆಯ ವೇಳೆ ನಿಜಾಂಶ ಬಯಲಾಗಿದೆ. ಕಳೆದ ಫೆಬ್ರವರಿಯಲ್ಲಿ ಗೌರವ್, ಆರು ಲಕ್ಷ ರೂಪಾಯಿ ವೈಯಕ್ತಿಕ ಸಾಲವನ್ನು ಪಡೆದುಕೊಂಡಿದ್ದ.

   ಖಿನ್ನತೆಗೊಳಗಾಗಿದ್ದ ಗೌರವ್, ಇದಕ್ಕಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದ. 3.5 ಲಕ್ಷ ರೂಪಾಯಿಯ ಅನಧಿಕೃತ ಕ್ರೆಡಿಟ್ ಕಾರ್ಡ್ ವಹಿವಾಟು ವಂಚನೆಗೆ ತನ್ನ ಪತಿ ಒಳಗಾಗಿದ್ದರು ಎಂದು ಈತನ ಪತ್ನಿ, ಪೊಲೀಸ್ ವಿಚಾರಣೆಯ ವೇಳೆ ಹೇಳಿದ್ದಾರೆ.

   ಗೌರವ್ ಮೊಬೈಲ್ ಸಂಭಾಷಣೆಯ ಜಾಡು ಹಿಡಿದ ಪೊಲೀಸರಿಗೆ, ಗೌರವ್ ತನ್ನನ್ನು ಸಾಯಿಸಲು ನಾಲ್ಕು ಜನರಿಗೆ ಸುಪಾರಿ ಕೊಟ್ಟ ವಿಚಾರ ಬಯಲಾಗಿದೆ. ಜೂನ್ ಒಂಬತ್ತರಂದು ಸಾರ್ವಜನಿಕ ಸಾರಿಗೆಯ ಮೂಲಕ, ದೆಹಲಿ ಹೊರಭಾಗಕ್ಕೆ ಆಗಮಿಸಿದ ಗೌರವ್ ತನ್ನ ಫೋಟೋವನ್ನು ಸುಪಾರಿ ಕಿಲ್ಲರ್ ಗಳಿಗೆ ಕಳುಹಿಸಿದ್ದಾನೆ.

   ಸ್ಥಳಕ್ಕೆ ಆಗಮಿಸಿದ ಕಿಲ್ಲರ್ ಗಳು, ಗೌರವ್ ಕೈಯನ್ನು ಕಟ್ಟಿ, ಕುತ್ತಿಗೆಗೆ ಹಗ್ಗ ಸುತ್ತಿ, ಮರಕ್ಕೆ ಹಗ್ಗ ಬಿಗಿದು ಸಾಯಿಸಿದ್ದಾರೆ. ಎಲ್ಲಾ ಕಿಲ್ಲರ್ ಗಳನ್ನು ಪೊಲೀಸರು ಬಂಧಿಸಿದ್ದು, ಇನ್ಸುರೆನ್ಸ್ ಹಣಕ್ಕಾಗಿ ತನ್ನನ್ನು ಸಾಯಿಸುವಂತೆ, ಗೌರವ್ ಸುಪಾರಿ ನೀಡಿದ್ದರು ಎಂದು ಹಂತಕರು ಬಾಯ್ಬಿಟ್ಟಿದ್ದಾರೆ.

   English summary
   Delhi Grocery Business Man Got Himself Murdered For Insurance Money,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X