Get Updates
Get notified of breaking news, exclusive insights, and must-see stories!

Praful Hinge: ಒಂದೇ ರಾತ್ರಿಯಲ್ಲಿ ಚೇಂಜ್‌ ಆಯ್ತು ಪ್ರಫುಲ್‌ ಲಕ್‌, 3 ಲಕ್ಷ ದಾಟಿದ ಇನ್‌ಸ್ಟಾಗ್ರಾಂ ಫಾಲೋವರ್ಸ್

Praful Hinge: ಐಪಿಎಲ್‌ 2026ರಲ್ಲಿ ಹೊಸ ಸಂಚಲ ಸೃಷ್ಟಿಸಿದ ಪ್ರಫುಲ್ ಹಿಂಗೆ ಅವರು ಸೋಮವಾರ ಅಂದರೆ ಏಪ್ರಿಲ್ 13ರ ರಾತ್ರಿಯವರೆಗೆ ಯಾರೆಂಬುದು ಯಾರಿಗೂ ತಿಳಿದಿರಲಿಲ್ಲ. ಸನ್‌ ರೈಸರ್ಸ್ ಹೈದರಾಬಾದ್ ಪರ ಪಾದಾರ್ಪಣೆ ಪಂದ್ಯದಲ್ಲೇ ರಾಜಸ್ಥಾನ್ ರಾಯಲ್ಸ್‌ ತಂಡದ ಪ್ರಮುಖ ನಾಲ್ಕು ವಿಕೆಟ್‌ಗಳನ್ನ ಕಬಳಿಸಿದರು. ಇದರ ಬೆನ್ನಲ್ಲೇ ಅವರಿಗೆ ಇನ್‌ಸ್ಟಾಗ್ರಾಂ ಫಾಲೋವರ್ಸ್‌ ಸಂಖ್ಯೆ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದ್ದು, ಇದೀಗ ಇವರ ಎಲ್ಲೆಡೆಯೂ ಇವರದ್ದೇ ಚರ್ಚೆ ಜೋರಾಗಿದೆ.

ವಿದರ್ಭ ಮೂಲದ ಈ 24 ವರ್ಷದ ಬಲಗೈ ವೇಗದ ಬೌಲರ್, ಐಪಿಎಲ್ ಅಖಾಡಕ್ಕೆ ಕಾಲಿಡುವ ಮೊದಲು ತಮ್ಮ ಇಡೀ ವೃತ್ತಿಜೀವನದಲ್ಲಿ ಆಡಿದ್ದು ಕೇವಲ ಒಂದೇ ಒಂದು ವೃತ್ತಿಪರ ಟಿ20 ಪಂದ್ಯವನ್ನು. ಹೈದರಾಬಾದ್ ತಂಡವು ಇವರನ್ನು ಮೂಲ ಬೆಲೆ 30 ಲಕ್ಷ ರೂಪಾಯಿಗೆ ಖರೀದಿಸಿತ್ತು. ವಿಶೇಷವೆಂದರೆ, ಹರಾಜಿನಲ್ಲಿ ಇವರಿಗಾಗಿ ಬೇರೆ ಯಾವುದೇ ಫ್ರಾಂಚೈಸಿಗಳು ಬಿಡ್ ಮಾಡಲು ಆಸಕ್ತಿ ತೋರಿಸಿರಲಿಲ್ಲ.

Praful Hinge IPL 2026 Debut 4 Wickets for SRH From 3K to 3 7L Followers Overnight Know details

ಒಂದೇ ರಾತ್ರಿಯಲ್ಲಿ ಚೇಂಜಾಯ್ತು ಲಕ್

ಎಸ್‌ಆರ್‌ಎಚ್‌ ಪರ ಪಾದಾರ್ಪಣೆ ಪಂದ್ಯಕ್ಕೂ ಮುನ್ನ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೇವಲ 3,000 ಅನುಯಾಯಿಗಳಿದ್ದರು. ಇವರ ಪರಿಚಯ ಸಾಮಾನ್ಯ ಕ್ರಿಕೆಟ್ ಅಭಿಮಾನಿಗೂ ಇರಲಿಲ್ಲ. ಆದರೆ, ಸೋಮವಾರ ಸಂಜೆ ರಾಜಸ್ಥಾನ್ ರಾಯಲ್ಸ್‌ ವಿರುದ್ಧ ಎಸೆದ ಆ 6 ಎಸೆತಗಳು ಅವರ ಲಕ್‌ ಬದಲಾಯಿಸಿಬಿಟ್ಟವು.

ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ ಪ್ರಫುಲ್

ಸನ್‌ರೈಸರ್ಸ್ ಹೈದರಾಬಾದ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಹಿಂಗೆ ಕೈಗೆ ಹೊಸ ಚೆಂಡನ್ನು ನೀಡಿತು. ಇದೇ ಅವಕಾಶವನ್ನು ಉತ್ತಮವಾಗಿ ಬಳಿಸಿಕೊಂಡ ಅವರು ಪ್ರಮುಖ ವಿಕೆಟ್‌ಗಳನ್ನೂ ಕೀಳುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಇದರ ಬೆನ್ನಲ್ಲೇ ಇವರ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಕ್ರಾಂತಿಯೇ ಆಗಿದೆ.

ವೈಭವ್ ಸೂರ್ಯವಂಶಿಗೆ ಆರ್ಭಟಕ್ಕೆ ಬ್ರೇಕ್

ಪಂದ್ಯ ಆರಂಭಕ್ಕೂ ಮುನ್ನ 15 ವರ್ಷದ ಯುವ ಸ್ಫೋಟಕ ಬ್ಯಾಟರ್‌ ವೈಭವ್ ಸೂರ್ಯವಂಶಿ ಅವರ ವಿಕೆಟ್‌ ಕೀಳುವುದು ಹೇಗೆ ಎನ್ನುವ ಚಿಂತೆಯಲ್ಲಿ ಎಸ್‌ಆರ್‌ಎಚ್‌ ತಂಡದ ಆಟಗಾರರಿದ್ದರು. ಆದರೆ, ಒಂದು ರನ್‌ ಕಲೆಹಾಕಲು ಬಿಡದೇ ವೈಭವ್‌ಗೆ ಬ್ರೇಕ್‌ ಹಾಕಿದ್ದು ಇದೇ ಪ್ರಫುಲ್ ಹಿಂಗೆ ಅವರು. ಒಟ್ಟು ನಾಲ್ಕು ಪ್ರಮುಖ ವಿಕೆಟ್‌ ಕಬಳಿಸಿದ ಇವರು ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟರ್‌ಗಳಿಗೆ ನಡುಕ ಹುಟ್ಟಿಸಿದರು.

ಹಿಂಗೆ ತಮ್ಮ ಮೊದಲ ಎಸೆತದಲ್ಲಿ ಒಂದು ರನ್ ಬಿಟ್ಟುಕೊಟ್ಟರು. ಆದರೆ, ಎರಡನೇ ಎಸೆತದಲ್ಲೇ ಅಪಾಯಕಾರಿ ಬ್ಯಾಟರ್‌ ವೈಭವರ್ ಸೂರ್ಯವಂಶಿ ಅವರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಪೆವಿಲಿಯನ್ ಹಾದಿ ತೋರಿಸಿದರು. ಈ ವೇಳೆ ಇಡೀ ಕ್ರೀಡಾಂಗಣವೇ ಹರ್ಷೋದ್ಗಾರದಿಂದ ಮೊಳಗಿತು. ಆದರೆ, ಹಿಂಗೆ ಮಾರಕ ಬೌಲಿಂಗ್‌ ದಾಳಿ ಅಲ್ಲಿಗೇ ನಿಂತಿರಲಿಲ್ಲ.

ಪ್ರಮುಖ ವಿಕೆಟ್‌ಗಳನ್ನ ಕಬಳಿಸಿ ಮಿಂಚಿದ ಪ್ರಫುಲ್

ನಂತರ ಅವರು ಧ್ರುವ್ ಜುರೆಲ್ ವಿಕೆಟ್ ಉರುಳಿಸಿದರು. ಬಳಿಕ ಓವರ್‌ನ ಕೊನೆಯ ಎಸೆತದಲ್ಲಿ ಲುಹಾನ್-ಡ್ರೆ ಪ್ರಿಟೋರಿಯಸ್ ಅವರನ್ನೂ ಪೆವಿಲಿಯನ್‌ಗೆ ಅಟ್ಟಿದರು. ಹೀಗೆ ಕೇವಲ 6 ಎಸೆತಗಳಲ್ಲಿ 3 ವಿಕೆಟ್ ಕಬಳಿಸಿ ಮಿಂಚಿದರು. ಅದು ಇನಿಂಗ್ಸ್‌ನ ಮೊದಲ ಓವರ್ ಆಗಿದ್ದು, ಐಪಿಎಲ್ ಇತಿಹಾಸದಲ್ಲೇ ಇದು ಹೊಸ ದಾಖಲೆಯಾಗಿ ಉಳಿಯಿತು.

ತಮ್ಮ ಎರಡನೇ ಓವರ್‌ನಲ್ಲಿ ಅವರು ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಅವರನ್ನೂ ಔಟ್ ಮಾಡಿದರು. ನಾಲ್ಕು ಓವರ್‌ ಬೌಲಿಮಗ್ ಎಸೆದ ಅವರು, 34 ರನ್‌ ಬಿಟ್ಟುಕೊಟ್ಟರು. ಆದರೂ ನಾಲ್ಕು ಪ್ರಮುಖ ವಿಕೆಟ್‌ಗಳನ್ನು ಪಡೆದು ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಸನ್‌ರೈಸರ್ಸ್ ಹೈದರಾಬಾದ್ ತಂಡವು 57 ರನ್‌ಗಳಿಂದ ಭರ್ಜರಿ ಜಯ ಸಾಧಿಸುತ್ತಿದ್ದಂತೆ, ಹಿಂಗೆ ಅವರು 'ಮ್ಯಾನ್‌ ಆಫ್‌ ದಿ' ಮ್ಯಾಚ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

"ನಾನು ಮೊದಲೇ ಸಂಕಲ್ಪ ಮಾಡಿದ್ದೆ"

ಪಂದ್ಯದ ನಂತರ ಮಾತನಾಡಿದ ಪ್ರಫುಲ್ ಹಿಂಗೆ ಅವರು, "ಇದನ್ನು ನಾನು ಮೊದಲೇ ಸಂಕಲ್ಪ ಮಾಡಿದ್ದೆ. ನಾನು ಆಡುವ ಮೊದಲ ಪಂದ್ಯದಲ್ಲಿ 4 ಅಥವಾ 5 ವಿಕೆಟ್ ಪಡೆಯುತ್ತೇನೆ ಎಂದು ಕಳೆದ ವರ್ಷವೇ ಎಲ್ಲೋ ಬರೆದಿಟ್ಟಿದ್ದೆ ಎಂದು ನನಗೆ ಅನಿಸುತ್ತಿದೆ," ಎಂದು ಹೇಳಿ ಗಮನ ಸೆಳೆದಿದ್ದಾರೆ.

ಫಾಲೋವರ್ಸ್‌ ಸಂಖ್ಯೆಯಲ್ಲಿ ಗಣನೀಯ ಏರಿಕೆ

ಪಂದ್ಯದ ನಂತರದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಫುಲ್ ಹಿಂಗೆ ಮಾತು ಮುಗಿಸುವಷ್ಟರಲ್ಲಿ, ಅವರ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ 3,000 ರಿಂದ 3 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗೆ ಏರಿಕೆ ಕಂಡಿತ್ತು. ಮಂಗಳವಾರ (ಏಪ್ರಿಲ್‌ 14) ಬೆಳಗ್ಗೆ 376K ಆಗಿದೆ.

ಮಾಹಿತಿ ಪ್ರಕಾರ, ಸೋಮವಾರ ರಾತ್ರಿಯ ಮೊದಲು, ಹಿಂಗೆ ಕೇವಲ 3,000 ಫಾಲೋವರ್ಸ್ ಹೊಂದಿದ್ದರು. ಇದು ಅವರನ್ನು 'ನ್ಯಾನೋ ಇನ್ಫ್ಲುಯೆನ್ಸರ್' ವಿಭಾಗಕ್ಕೆ ಸೇರಿಸಿತ್ತು. ಒಂದು ವೇಳೆ ಯಾವುದಾದರೂ ಬ್ರಾಂಡ್ ಅವರನ್ನು ಸಂಪರ್ಕಿಸಿದ್ದರೂ ಸಹ, ಒಂದು ಪೋಸ್ಟ್‌ಗೆ ಕೇವಲ ₹2,000 ರಿಂದ ₹10,000 ನೀಡಲಾಗುತ್ತಿತ್ತು. ಆದರೆ ಇದುವರೆಗೂ ಯಾವುದೇ ಬ್ರಾಂಡ್ ಅವರತ್ತ ಸುಳಿದಿರಲಿಲ್ಲ.

ಹಿಂಗೆ ಅವರು ಮಿಡ್-ಟೈಯರ್ ವಿಭಾಗದಕ್ಕೆ ಸೇರುವ ಸಾಧ್ಯತೆಯಿದೆ. ಜಿಗ್ಸಾಕ್ರಾಫ್ಟ್ ಅಂಕಿಅಂಶಗಳ ಪ್ರಕಾರ, ಬ್ರಾಂಡ್‌ಗಳು ಸಾಮಾನ್ಯವಾಗಿ ಈ ವಿಭಾಗದ ಇನ್ಫ್ಲುಯೆನ್ಸರ್‌ಗಳಿಗೆ ಪ್ರತಿ ಪೋಸ್ಟ್‌ಗೆ ₹75,000 ರಿಂದ ₹2.5 ಲಕ್ಷ ರೂಪಾಯಿವರೆಗೆ ಹಣ ಪಾವತಿಸುತ್ತವೆ.

ಜಿಗ್ಸಾಕ್ರಾಫ್ಟ್ ಸಂಸ್ಥೆಯ ಪ್ರಕಾರ, 'ಮಿಡ್-ಟೈಯರ್' ಇನ್ಫ್ಲುಯೆನ್ಸರ್‌ಗಳಿಗೆ ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ₹60,000 ರಿಂದ ₹1.8 ಲಕ್ಷದವರೆಗೆ ದರವಿದ್ದರೆ, ರೀಲ್ಸ್‌ಗಳಿಗೆ ₹80,000 ರಿಂದ ₹2.5 ಲಕ್ಷದವರೆಗೆ ಸಂಭಾವನೆ ಸಿಗುತ್ತದೆ. ಅಲ್ಪಾವಧಿಯ ಇನ್‌ಸ್ಟಾಗ್ರಾಮ್ ಸ್ಟೋರಿಗಳ ಬೆಲೆ ₹30,000 ರಿಂದ ₹80,000 ರಷ್ಟಿರುತ್ತದೆ. ಇನ್ನು ದೊಡ್ಡ ಮಟ್ಟದ ಕಾರ್ಯಕ್ರಮಗಳ ಪ್ಯಾಕೇಜ್‌ಗಳು ₹1.5 ಲಕ್ಷದಿಂದ ₹4 ಲಕ್ಷದವರೆಗೆ ಏರಿಕೆಯಾಗಬಹುದು.

ಆದರೆ, ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಕೇವಲ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆಯ ಆಧಾರದ ಮೇಲೆ ಬ್ರಾಂಡ್‌ಗಳು ಹಣ ನೀಡುವುದಿಲ್ಲ. ಬದಲಿಗೆ ಅವರ ಪೋಸ್ಟ್‌ಗಳಿಗೆ ವ್ಯಕ್ತವಾಗುವ ಪ್ರತಿಕ್ರಿಯೆ, ಅವರ ಕ್ಷೇತ್ರಕ್ಕೆ ಇರುವ ವ್ಯಾಲ್ಯೂ ಮತ್ತು ಅವರ ವಿಡಿಯೋಗಳು ಎಷ್ಟು ವೈರಲ್ ಆಗುತ್ತಿವೆ ಎಂಬುದು ಬಹಳ ಮುಖ್ಯವಾಗುತ್ತದೆ.

ಹಿಂಗೆ ಅವರ ಫಾಲೋವರ್ಸ್ ಸಂಖ್ಯೆಯು ಒಂದೇ ರಾತ್ರಿಯಲ್ಲಿ ಗಮನಾರ್ಹವಾಗಿ ಹೆಚ್ಚಿರುವುದರಿಂದ, ಅವರ ಎಂಗೇಜ್‌ಮೆಂಟ್ ರೇಟ್ (ಲೈಕ್ಸ್, ಕಾಮೆಂಟ್ ಮತ್ತು ಶೇರ್) ಏರಿಕೆಯಾಗುತ್ತಲಿದೆ. ಇಂತಹ ಹೊಸದಾಗಿ ವೈರಲ್ ಆದ ಮತ್ತು ಸಕ್ರಿಯ ಅಭಿಮಾನಿಗಳನ್ನು ಹೊಂದಿರುವ ಖಾತೆಗಳು ಬ್ರಾಂಡ್‌ಗಳಿಗೆ ಹೆಚ್ಚು ಆಕರ್ಷಕವಾಗಿ ಕಾಣುತ್ತವೆ.

ಐಪಿಎಲ್‌ನ ಈ ರಾತ್ರೋರಾತ್ರಿ ಪ್ರಸಿದ್ಧಿಯನ್ನು ಗಮನಿಸಿದರೆ, ಹಿಂಗೆ ಅವರು ಪ್ರಸ್ತುತ ಪ್ರತಿ ಪ್ರಾಯೋಜಿತ ಪೋಸ್ಟ್‌ಗೆ ₹1 ಲಕ್ಷದಿಂದ ₹2.5 ಲಕ್ಷದವರೆಗೆ ಬೇಡಿಕೆ ಇಡಬಹುದು. ಒಂದು ವೇಳೆ ಕ್ರಿಕೆಟ್‌ಗೆ ಸಂಬಂಧಿಸಿದ ಬ್ರಾಂಡ್‌ಗಳು ಅವರನ್ನು ಸಂಪರ್ಕಿಸಿದರೆ, ಅವರು ಇದಕ್ಕಿಂತ ಹೆಚ್ಚಿನ ಮೊತ್ತವನ್ನೂ ಪಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+