ಬೆಂಗಳೂರಲ್ಲಿ RCB ಪಂದ್ಯ: ಏ.15ರಂದು ಸ್ಟೇಡಿಯಂ ಸುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ
ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 15ರಂದು ಬುಧವಾರ ಐಪಿಎಲ್ ಪಂದ್ಯಾವಳಿಗಳು ನಡೆಯಲಿವೆ. ಸಾಮಾನ್ಯವಾಗಿ ಆರ್‍ಸಿಬಿ ಟಿ20 ಕ್ರಿಕೆಟ್ ಐಪಿಎಲ್ ಪಂದ್ಯ ನಡೆಯುವಾಗ ಹೆಚ್ಚಿನ ಜನರು ಸೇರಿತ್ತಾರೆ. ನಗರದಲ್ಲಿ ದಟ್ಟಣೆ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸಂಚಾರಿ ಪೊಲೀಸರು ನಾಳೆ ಕೆಲವು ರಸ್ತೆಗಳ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದ್ದಾರೆ. ವಿವಿಧ ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧಿಸಿದ್ದು, ಪರ್ಯಾಯ ಸ್ಥಳಗಳ ಬಳಕೆಗೆ ಸೂಚಿಸಲಾಗಿದೆ.
ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಈ ಸಂಚಾರ ಬದಲಾವಣೆ ಅನ್ವಯವಾಗಲಿದೆ. ನಿಷೇಧಿತ ಸ್ಥಳ, ಪರ್ಯಾಯ ಸ್ಥಳಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

ವಾಹನಗಳ ನಿಲುಗಡೆ ನಿಷೇಧಿತ ರಸ್ತೆಗಳು
* ಕ್ಲೀನ್ಸ್ ರಸ್ತೆಯ ಎರಡು ಬದಿಯಲ್ಲಿ, ಬಾಳೇಕುಂದ್ರಿ ವೃತ್ತದಿಂದ ಕ್ಲೀನ್ಸ್ ವೃತ್ತದ ವರೆಗೆ ಮತ್ತು ಕ್ಲೀನ್ಸ್ ವೃತ್ತದಿಂದ ಸಿ.ಟಿ.ಓ ಜಂಕ್ಷನ್ ವರೆಗೆ ರಸ್ತೆಯಲ್ಲಿ ನಿಲುಗಡೆ ನಿಷೇಧಿಸಲಾಗಿದೆ.
* ಎಂ.ಜಿ ರಸ್ತೆಯಲ್ಲಿ ಅನಿಲ್ ಕುಂಬ್ಳೆ ವೃತ್ತದಿಂದ ಕ್ಲೀನ್ಸ್ ವೃತ್ತದ ವರೆಗೆ ಮತ್ತು ಕ್ಲೀನ್ಸ್ ರಸ್ತೆಯಿಂದ ಅನಿಲ್ ಕುಂಬ್ಳೆ ಜಂಕ್ಷನ್ ವರೆಗೆ ರಸ್ತೆಯ ಎರಡೂ ಕಡೆ.
* ಲಿಂಕ್ ರಸ್ತೆ- ಎಂ.ಜಿ ರಸ್ತೆಯಿಂದ ಕಬ್ಬನ್ ರಸ್ತೆ ವರೆಗೆ.
* ರಾಜಭವನ ರಸ್ತೆ, ಟಿ.ಚೌಡಯ್ಯ ರಸ್ತೆ ಮತ್ತು ರೇಸ್ ಕೋರ್ಸ್ ರಸ್ತೆ
* ಸೆಂಟ್ರಲ್ ಸ್ಟ್ರೀಟ್ ರಸ್ತೆಯಲ್ಲಿ ರಸ್ತೆಯ ಎರಡೂ ಕಡೆ.
* ಕಬ್ಬನ್ ರಸ್ತೆಯಲ್ಲಿ, ಸಿ.ಟಿ.ಓ. ವೃತ್ತದಿಂದ ಡಿಕೆನ್ಸ್‌ನ್ ರಸ್ತೆ ಜಂಕ್ಷನ್ ವರೆಗೆ ರಸ್ತೆಯ ಎರಡೂ ಕಡೆ.
* ಕಬ್ಬನ್ ರಸ್ತೆಯಲ್ಲಿ ಕಾಮರಾಜ ರಸ್ತೆ ಜಂಕ್ಷನ್‌ನಿಂದ ಡಿಕೆನ್ಸ್‌ನ್ ರಸ್ತೆ ಜಂಕ್ಷನ್ ವರೆಗೆ ಬಿ.ಎಂ.ಟಿ.ಸಿ ಬಸ್ ಗಳನ್ನು ಹೊರತುಪಡಿಸಿ ಇತರೆ ಎಲ್ಲಾ ತರಹದ ವಾಹನಗಳ ನಿಲುಗಡೆಯನ್ನು ನಿಷೇಧಿಸಿದೆ.
* ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿ, ಕ್ಯಾಶ್ ಫಾರ್ಮಸಿ ಜಂಕ್ಷನ್ ನಿಂದ ಅನಿಲ್ ಕುಂಬ್ಳೆ ವೃತ್ತದ ವರೆಗೆ
ಮ್ಯೂಸಿಯಂ ರಸ್ತೆಯಲ್ಲಿ, ಎಂ.ಜಿ ರಸ್ತೆಯಿಂದ ಸೆಂಟ್ ಮಾರ್ಕ್ಸ್ ರಸ್ತೆ ವರೆಗೆ ಹಾಗೂ ಆಶಿರ್ವಾದಂ ವೃತ್ತದ ವರೆಗೆ ನಿಷೇಧಿಸಲಾಗಿದೆ.
* ಕಸ್ತೂರಬಾ ರಸ್ತೆಯಲ್ಲಿ, ಸ್ವೀನ್ಸ್‌ವೃತ್ತದಿಂದ ಹಡ್ರನ್ ವೃತ್ತದ ವರೆಗೆ ಹಾಗೂ ಮಲ್ಯ ಆಸ್ಪತ್ರೆ ರಸ್ತೆಯಲ್ಲಿ ಸಿದ್ದಲಿಂಗಯ್ಯ ವೃತ್ತದಿಂದ ಆರ್.ಆರ್.ಎಂ.ಆರ್ ವೃತ್ತದವರೆಗೆ.
* ಕಬ್ಬನ್ ಉದ್ಯಾನದ ಒಳಭಾಗದ ಕಿಂಗ್ ರಸ್ತೆ, ಪ್ರೆಸ್ ಕ್ಲಬ್ ಮುಂಭಾಗ, ಬಾಲಭವನ ಮುಂಭಾಗ, ಪೌಂಟೇನ್ ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್ ಮಾಡುವಂತಿಲ್ಲ.
* ಲ್ಯಾವೆಲ್ಲಿ ರಸ್ತೆಯಲಿಲ್ವೇನ್ಸ್ ವೃತ್ತದಿಂದ ವಿಠಲ್ ಮಲ್ಯ ರಸ್ತೆ ಜಂಕ್ಷನ್‌ವರೆಗೆ ವಾಹನಗಳ ನಿಲುಗಡೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
* ವಿಠಲ್ ಮಲ್ಯ ರಸ್ತೆ, ಸಿದ್ದಲಿಂಗಯ್ಯ ವೃತ್ತದಿಂದ ಸೆಂಟ್ ಮಾರ್ಕ್ಸ್ ರಸ್ತೆಯ ಬಿಷಪ್ ಕಾಟನ್ ಬಾಲಕೀಯರ ಶಾಲೆಯವರೆಗೆ ವಾಹನಗಳ ನಿಲುಗಡೆ ಮಾಡುವಂತಿಲ್ಲ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ವಾಹನ ನಿಲುಗಡೆ ಮಾಡುವ ಸ್ಥಳಗಳು
* ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ, ಸಿದ್ದಲಿಂಗಯ್ಯ ವೃತ್ತ.
* ಸೆಂಟ್ ಜೋಸೆಫ್ ಯುರೋಪಿಯನ್ ಸ್ಕೂಲ್ ಮೈದಾನ, ಮ್ಯೂಸಿಯಂ ರಸ್ತೆ.
* ಸ್ವಾತಂತ್ರ್ಯ ಉದ್ಯಾನ ಎಂ.ಎಲ್.ಸಿ.ಪಿ ಪಾರ್ಕಿಗ್ ಸ್ಥಳ
* ಗರುಡಾ ಮಾಲ್ ಪಾರ್ಕಿಗ್ ಸ್ಥಳ
* ಶಿವಾಜಿನಗರ ಬಸ್ ನಿಲ್ದಾಣದ 1ನೇ ಮಹಡಿ,
* ಯು.ಬಿ.ಸಿಟಿ ನಿಲುಗಡೆ ಸ್ಥಳ
* ಕಂಠೀರವ ಕ್ರೀಡಾಂಗಣ
ಕ್ರೀಡಾಂಗಣ ಪ್ರವೇಶ-ನಿರ್ಗಮನ ಮಾರ್ಗ ಗಮನಿಸಿ
ಚಿನ್ನಸ್ವಾಮಿ ಕ್ರೀಡಾಂಗಣದ ಪ್ರವೇಶಕ್ಕಾಗಿ ಸಾರ್ವಜನಿಕರಿಗೆ ಗೇಟ್‌ನಂ: ಇ-1 ರಿಂದ ಗೇಟ್ ನಂ: ಇ-3 ಮತ್ತು ಗೇಟ್‌ನಂ ಇ-18, ಇ-19, 2-22 ಹಾಗೂ -23 ಕಬ್ಬನ್ ರಸ್ತೆಯಲ್ಲಿದ್ದು, ಈ ಗೇಟ್‌ಗಳ ಮುಖಾಂತರ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ.
ಇನ್ನೂ ಗೇಟ್ ನಂ. ಇ-11 ರಿಂದ ಗೇಟ್ ನಂ ಇ-17 ರವರೆಗೆ ಲಿಂಕ್ ರಸ್ತೆಯಲ್ಲಿದ್ದು ಅನಿಲ್ ಕುಂಬ್ಳೆ ವೃತ್ತ ಮತ್ತು ಬಿ.ಆರ್.ವಿ. ವೃತ್ತದ ಕಡೆಯಿಂದಲೂ ಸ್ಟೇಡಿಯಂ ಪ್ರವೇಶಿಸಬಹುದಾಗಿದೆ. ಕ್ಲೀನ್ಸ್ ರಸ್ತೆಯಲ್ಲಿ ಗೇಟ್ ನಂ. ಇ-05 ಮತ್ತು ಇ-08 ರಲ್ಲಿ ಪ್ರವೇಶವಿದ್ದು, ಗೇಟ್ ನಂ- ಇ-09, ಇ-9ಎ ಗೇಟ್‌ನಲ್ಲಿ ನಿರ್ಗಮಿಸಲು ಮಾತ್ರ ಅವಕಾಶವಿರುತ್ತದೆ. ಕ್ಲೀನ್ಸ್ ರಸ್ತೆಯ ಗೇಟ್ ನಂ: ಇ-10 ರಲ್ಲಿ ಆಟಗಾರರು, ಸಹ ಆಟಗಾರರು ಹಾಗೂ ಸ್ಟೇಡಿಯಂ ಅಧಿಕಾರಿಗಳು ವಿ.ಐ.ಪಿ ರವರಿಗೆ ಅವಕಾಶವಿರುತ್ತದೆ ಎಂದು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನು ನಗರದ ಓಲಾ, ಉಬರ್ ಮತ್ತು ಆಟೋಗಳು ಚಾಲಕರು ನಿಗದಿತ ಸ್ಥಳಗಳ ಮೂಲಕವೇ ಪ್ರಯಾಣಿಕರನ್ನು ಪಿಕ್-ಅಪ್ ಮತ್ತು ಡ್ರಾಪ್ ಮಾಡುವಂತೆ ತಿಳಿಸಲಾಗಿದೆ.












Click it and Unblock the Notifications