“ಕಾಂಗ್ರೆಸ್ ಸಂವಿಧಾನವನ್ನು ಸ್ವಾರ್ಥಕ್ಕೆ ಬಳಸಿದೆ”: ಬಸವರಾಜ ಬೊಮ್ಮಾಯಿ ಹೇಳಿಕೆ

ಬೆಂಗಳೂರು: ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬುದ್ದನ ಪ್ರೇರಣೆ, ಬಸವಣ್ಣನ ಸಮಾನತೆ ಎರಡನ್ನೂ ಒಳಗೊಂಡಿರುವ ವ್ಯಕ್ತಿಯಾಗಿದ್ದರು. ಅವರು ಭಾರತಕ್ಕೆ ಸಮಾನತೆ ಅಭಿವ್ಯಕ್ತಿ ಸ್ವಾತಂತ್ರ್ಯ ಕೊಟ್ಟವರು. ಅಂಬೇಡ್ಕರ್ ಸಂವಿಧಾನದ ಸಮಿತಿಯಲ್ಲಿ ಇಲ್ಲದಿದ್ದರೆ ಸರ್ವ ಸ್ಪರ್ಶಿ, ಸರ್ವ ವ್ಯಾಪಿ ಸಂವಿಧಾನ ಆಗುತ್ತಿರಲಿಲ್ಲ ಎಲ್ಲರ ಒಪ್ಪಿಗೆಯೂ ಸಿಗುತ್ತಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

Basavaraj Bommai

ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಹಲವಾರು ಜನ್ಮ‌ದಿನಾಚರಣೆ ಮಾಡಿದಂತೆ ಮಾಡಿದರೆ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿದಂತಾಗುವುದಿಲ್ಲ. ಬೇರೆ ಚಿಂತಕರು ಮತ್ತು ನಾಯಕರು ಹಾಗೂ ಅಂಬೇಡ್ಕರ್ ನಡುವೆ ವ್ಯತ್ಯಾಸ ಇದೆ. ಈಗಿರುವ ಭಾರತದ ಪ್ರಜೆ, ಮುಂದೆ ಹುಟ್ಡುವ ಪ್ರಜೆಗೆ ನ್ಯಾಯ, ಸ್ವಾತಂತ್ರ್ಯ ದೇಶಭಕ್ತಿ, ನಾಗರಿಕ ಹಕ್ಕುಗಳ ಎಲ್ಲವನ್ನು ಸದಾಕಾಲ ಕೊಟ್ಡಿದ್ದಾರೆ. ಕಾಲಾತೀತವಾಗಿ ಕೆಲವು ನಾಯಕರು ಇರುತ್ತಾರೆ. ಕೆಲವರು ಕಾಲಕ್ಕೆ ಸೀಮಿತ ಆಗಿರುತ್ತಾರೆ.

ಅಂಬೇಡ್ಕರ್ ಅವರು ಜಗತ್ತಿನ ಮಹಾ ಚಿಂತಕ ಪ್ಲೇಟೊ ಹಾಗೂ ಕಾರ್ಲ್ ಮಾರ್ಕ್ಸ್ ಅವರ ಸ್ಥಾನದಲ್ಲಿ ನಿಲ್ಲುತ್ತಾರೆ. ಪ್ಲೇಟೊ ಅತ್ಯಂತ ಶ್ರೇಷ್ಠ ಚಿಂತಕ ಸದಾ ಜೀವಂತವಾಗಿರುತ್ತಾರೆ. ಎರಡನೆಯವರು ಕಾರ್ಲ್ ಮಾರ್ಕ್ ಮಾನವನ ಗೌರವ ಮಾನವನ ಹಕ್ಕುಗಳು ಶ್ರಮ ಎಲ್ಲ ವಿಚಾರಗಳಲ್ಲಿ ಅದ್ಬುತ ಕಲ್ಪನೆ ಕೊಟ್ಟಿದ್ದಾನೆ.

ಜಗತ್ತಿನ ಎಲ್ಲ ನಾಗರಿಕತೆಯನ್ನು ಸದಾಕಾಲ ಸಕ್ರಿಯವಾಗಿಟ್ಡಿದ್ದಾರೆ. ಮೂರನೆಯವರು ಅಂಬೇಡ್ಕರ್ ಅವರು ಅಂಬೇಡ್ಕರ ಅವರಿಗೆ ಬುದ್ದನ ಪ್ರೇರಣೆ, ಬಸವಣ್ಣನ ಸಮಾನತೆ ಎರಡನ್ನೂ ಒಳಗೊಂಡಿರುವ ವ್ಯಕ್ತಿ ಅಂಬೇಡ್ಕರ್. ಹೀಗಾಗಿ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಎಲ್ಲರ ದಿನಾಚರಣೆಯಂತೆ ಮಾಡಬಾರದು.

ಭಾರತಕ್ಕೆ ಸಮಾನತೆ ಅಭಿವ್ಯಕ್ತಿ ಸ್ವಾತಂತ್ರ್ಯ ಕೊಟ್ಟವರು. ಅಂಬೇಡ್ಕರ್ ಸಂವಿಧಾನದ ಸಮಿತಿಯಲ್ಲಿ ಇಲ್ಲದಿದ್ದರೆ ಏನಾಗುತ್ತಿತ್ತು ಎಂದು ಯೊಚಿಸಿ, ಸರ್ವ ಸ್ಪರ್ಶಿ ಸರ್ವ ವ್ಯಾಪಿ ಸಂವಿಧಾನ ಆಗುತ್ತಿರಲಿಲ್ಲ. ಎಲ್ಲರ ಒಪ್ಪಿಗೆಯೂ ಸಿಗುತ್ತಿರಲಿಲ್ಲ. ಅಂಬೇಡ್ಕರ್ ಅವರು ತಳ ಸಮುದಾಯಗಳನ್ನು ಜೋಡಿಸುವ ಕೆಲಸ ಮಾಡಿದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸ್ವಾತಂತ್ರ್ಯ ಯಾರಿಗಾಗಿ ಎನ್ನುವ ಪ್ರಶ್ನೆ ಮೂಡಿತು. ಸ್ವಾತಂತ್ರ್ಯ ಮೇಲ್ವರ್ಗದವರಿಗೆ ಮಾತ್ರನಾ ತಳ ಸಮುದಾಯದವರಿಗೂ ಇದೆಯಾ ಎನ್ನುವ ಪ್ರಶ್ನೆ ಕೇಳಿದರು. ಅಂಬೇಡ್ಕರ್ ಅವರು ತಳಸ‌ಮುದಾಯಕ್ಕೆ ಹಕ್ಕು ಸ್ವಾತಂತ್ರ್ಯ ಕೊಟ್ಟರು ಎಂದು ಹೇಳಿದರು.

ಮಾನವೀಯ ಸಂವಿಧಾನ

ಜಗತ್ತಿನಲ್ಲಿ ಆರ್ಥಿಕವಾಗಿ ಪ್ರಬಲವಾಗಿರುವ ದೇಶಗಳಿವೆ. ಮಾನವೀಯ ಗುಣ ರಕ್ಷಣೆ ಮಾಡಿರುವ ಸಂವಿಧಾನ ಭಾರತ ಬಿಟ್ಟರೆ ಬೇರೆ ಎಲ್ಲೂ ಇಲ್ಲ. ಕೆಲವು ದೇಶಗಳು ಆರ್ಥಿಕತೆಯ ಬೆಳವಣಿಗೆ ಇಟ್ಟುಕೊಂಡು ಸಂವಿಧಾನ ಬರೆದಿದ್ದಾರೆ‌. ಇನ್ನು ಕೆಲವು ದುಡಿಯುವ ವರ್ಗವನ್ನು ಇರಿಸಿಕೊಂಡು ಸಮಾಜವಾದದ ಸಿದ್ದಾಂತದಲ್ಲಿ ಸಂವಿಧಾನ ಬರೆದಿದ್ದಾರೆ. ಇವೆರಡರಲ್ಲೂ ಮಾನವೀಯತ ಇಲ್ಲ. ಉತ್ತಾದನೆಗೆ ಒತ್ತು ಕೊಟ್ಡಿದ್ದಾರೆ‌ ಹಂಚಿಕೆಗೆ ಒತ್ತು ಕೊಟ್ಟಿಲ್ಲ. ಇದಕ್ಕೆ ಉತ್ತರವಾಗಿ ನಮ್ಮದು ಮಾನವೀಯತೆಯ ಮೇಲೆ ಸಂವಿಧಾನ ರಚನೆ ಮಾಡಿದ್ದಾರೆ.

ಸಂವಿಧಾನವನ್ನು ಶ್ರದ್ಧೆಯಿಂದ ಓದಿದರೆ ಅರ್ಥವಾಗುತ್ತದೆ. ಕೆಲವರು ಸಂವಿಧಾನವನ್ನು ಜೇಬಿನಲ್ಲಿ ಇಟ್ಟುಕೊಂಡು ತಿರುಗಾಡುತ್ತಾರೆ. ಆದರೆ ಅದನ್ನು ಓದಿರುವುದಿಲ್ಲ. ಈ ದೇಶದಲ್ಲಿ ಸಂವಿಧಾನವನ್ನು ಹೆಚ್ಚು ಸ್ವಾರ್ಥಕ್ಕೆ ಬಳಕೆ ಮಾಡಿರುವುದು ಕಾಂಗ್ರೆಸ್. ಅಂಬೇಡ್ಕರ್ ಅವರನ್ನು ಸೋಲಿಸಿದ್ದು, ಅವರು ತೀರಿಕೊಂಡಾಗ ಅವರಿಗೆ ಜಾಗ ನೀಡದಿರುವುದು. ವ್ಯಕ್ತಿಗತವಾಗಿ ಕಾಂಗ್ರೆಸ್ ‌ನಾಯಕರಿಗೆ ಅಸೂಯೆ ಇತ್ತು. ನೆಹರೂಗೆ ಅಂಬೇಡ್ಕರ್ ಬಗ್ಗೆ ಅಸೂಯೆ ಇತ್ತು. ಅವರನ್ನು ಕಾನೂನು ಸಚಿವ ಸ್ಥಾನದಿಂದ ತೆಗೆದು ಹಾಕಿದರು.

ಅಂಬೇಡ್ಕರ್ ಓಟ್ ಬ್ಯಾಂಕ್‌ಗೆ ಇರುವ ನಾಯಕ ಅಂತ ತಿಳಿದುಕೊಂಡಿದ್ದಾರೆ. ಅವರ ಉದ್ದೇಶ ತಳ ಸಮುದಾಯ ಮೇಲೆ ಬರಬಾರದು ಶಿಕ್ಷಣ ಆರ್ಥಿಕ ಸ್ವಾತಂತ್ರ್ಯ ಪಡೆಯಬಾರದು ಅನ್ನುವುದು ಅವರ ಬಯಕೆ ದಲಿತರು ಈಗ ಜಾಗೃತರಾಗುತ್ತಿದ್ದಾರೆ. ಇನ್ನೂ ಜಾಗೃತರಾಗಬೇಕು. ಗ್ರಾಮೀಣ ಪ್ರದೇಶಗಳಲ್ಲಿ ತಾಯಂದಿರು ಇನ್ನೂ ತಮಗೆ ಅನ್ಯಾಯ ಮಾಡುವವರನ್ನೇ ನಂಬುತ್ತಾರೆ. ನಾವು ಕೇವಲ ಮಾತನಾಡದೇ ನಮ್ಮ ಕರ್ತವ್ಯ ಮಾಡಬೇಕು ಜಾಗೃತಿ ಮೂಡಿಸುವ ಚಳವಳಿಯಂತೆ ಆಗಬೇಕು ಎಂದು ಹೇಳಿದರು.

ಹೆಜ್ಜೆ ಗುರುತು ಪೂರ್ಣಗೊಳಿಸಿ

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಾಜ್ಯಕ್ಕೆ ಭೇಟಿ ನೀಡಿದ್ದ ಹತ್ತು ಸ್ಥಳಗಳ ಅಭಿವೃದ್ಧಿಗೆ ಅಂಬೇಡ್ಕರ್ ಹೆಜ್ಜೆ ಗುರುತು ಅಂತ ಯೋಜನೆ ಮಾಡಿ ಹತ್ತು ಕೋಟಿ ರೂ. ನೀಡಿದ್ದೇನೆ. ಕಾಂಗ್ರೆಸ್ ಸರ್ಕಾರ ಬಿಜೆಪಿ ಮೇಲಿನ ದ್ವೇಷಕ್ಕೆ ಬಾಬಾ ಸಹೇಬರ ಸ್ಥಾನಗಳನ್ನು ಅಭಿವೃದ್ಧಿ ಮಾಡದಿರುವುದು ಅವರಿಗೆ ಮಾಡುವ ಅವಮಾನ. ಸರ್ಕಾರ ಅಗತ್ಯ ಹಣವನ್ನು ನೀಡಿ ಹತ್ತೂ ಸ್ಥಳಗಳನ್ನು ಅಭಿವೃದ್ಧಿ ಮಾಡಬೇಕೆಂದು ಆಗ್ರಹಿಸಿದರು.

ಅಹಿಂದ ದುರ್ಬಳಕೆ

ಅಹಿಂದ ಹುಟ್ಟು ಹಾಕುವಲ್ಲಿ ನಾನು ಒಬ್ಬ ಕಾರಣೀಕರ್ತ. ಒಬ್ಬ ವ್ಯಕ್ತಿಯ ಲಾಭಕ್ಕಾಗಿ ಅಹಿಂದ ಬಳಕೆಯಾಗುತ್ತಿದೆ. ಎಸ್ ಸಿಪಿ ಟಿಎಸ್ ಪಿ ಹಣವನ್ನು ಸರಿಯಾಗಿ ಬಳಕೆ ಮಾಡುತ್ತಿಲ್ಲ. ಗಂಗಾ ಕಲ್ಯಾಣಕ್ಕೆ ಹಣ ನೀಡುತ್ತಿಲ್ಲ. ನಾವು ಅಂಬೇಡ್ಕರ್ ಅವರ ವಿಚಾರಧಾರೆ ಇಟ್ಟುಕೊಂಡು ಹೋದರೆ ದೊಡ್ಡ ಪ್ರಮಾಣದ ಬದಲಾವಣೆ ಸಾಧ್ಯವಿದೆ. ಅಂಬೇಡ್ಕರ್ ವಿಚಾರಾಧಾರೆಯಿಂದ ರಾಜಕೀಯ ಸಾಮಾಜಿಕ ಬದಲಾವಣೆ ತರಲು ಸಾಧ್ಯವಿದೆ. ಕಾಂಗ್ರೆಸ್ ನವರು ನಿರಂತರವಾಗಿ ಅಂಬೇಡ್ಕರ್ ಅವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಆ ಜನಾಂಗಕ್ಕೆ ನ್ಯಾಯ ಕೊಡಿಸಲು ನಿರಂತರ ಹೊರಾಟ ಮಾಡೋಣ. ಸ್ವಾಮಿ ವಿವೇಕಾನಂದರು ಸಾಧಕನಿಗೆ ಸಾವು ಅಂತ್ಯವಲ್ಲ ಸಾವಿನ ನಂತರವೂ ಬದುಕುವವನು ನಿಜವಾದ ಸಾಧಕ ಅವರು ನಮ್ಮ ಜೊತೆಗೆ ಇಲ್ಲದಿದ್ದರೂ ಸ್ಪೂರ್ತಿಯಾಗಿ ನಮ್ಮ ಜೊತೆಗೆ ಇದ್ದಾರೆ. ಅವರು ಸಾಧಕರು ಯಾವಾಗಲೂ ನಮ್ಮ‌ ಜೊತೆಗೆ ಇರುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ರವಿಕುಮಾರ್, ಶಾಸಕ ಹಾಗೂ ಎಸ್ಸಿ ಮೋರ್ಚಾ ಅಧ್ಯಕ್ಷ ಸಿಮೆಂಟ್ ಮಂಜು, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಠಗಿಮಠ, ಜಗದೀಶ್ ಹಿರೇಮನಿ ಹಾಗೂ ಮತ್ತಿತರರು ಹಾಜರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+