• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚೀನಾದ ಮೇಲೆ ಪಾಕಿಸ್ತಾನದ ಅವಲಂಬನೆ: ರಾಜನಾಥ್ ಸಿಂಗ್ ವ್ಯಂಗ್ಯ

|

ನವದೆಹಲಿ, ಡಿಸೆಂಬರ್ 04: ರಸ್ತೆ ಹಾಗೂ ವ್ಯಾಪಾರಕ್ಕಾಗಿ ಚೀನಾವನ್ನು ಅವನಂಬಿಸಿರುವ ಪಾಕಿಸ್ತಾನದ ವಿರುದ್ಧ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.

ಕೆಲವು ದೇಶಗಳು ನಮ್ಮ ನೆರೆಯ ದೇಶದಂತೆ ತಮ್ಮ ದೇಶದ ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳಲು ವಿಫಲರಾಗಿದ್ದಾರೆ.

ಮರಾಠ ಸಮಾಜದ ಹಿತ ಕಾಪಾಡಲು ರಾಜ್ಯ ಬಿಜೆಪಿ ಸರ್ಕಾರ ಬದ್ಧ!

ಕೆಲವು ರಾಷ್ಟ್ರಗಳಿಗೆ ತಮ್ಮ ದೇಶದ ರಸ್ತೆಯನ್ನು ತಾವು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಹಾಗೆಯೇ ತಾವು ಬೆಳೆದ ಸರಕುಗಳನ್ನು ವ್ಯಾಪಾರವನ್ನು ಕೂಡ ಸ್ವಂತವಾಗಿ ಮಾಡಿಕೊಳ್ಳುತ್ತಿಲ್ಲ.

ಹೀಗೆ ತಮ್ಮ ದೇಶದ ಸಾರ್ವಭೌಮತ್ವವನ್ನು ಪಡೆಯಲು ವಿಫಲರಾಗಿದ್ದಾರೆ ಎಂದರು.ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಅಂಗವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಸ್‌ಆರ್ ವೆಬಿನಾರ್ ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಸ್ವಂತ ಬಲದ ಮೇಲೆ ರಸ್ತೆ ನಿರ್ಮಾಣ ಮಾಡಲೂ ಸಾಧ್ಯವಾಗದ ದೇಶ ತನ್ನ ಸಾರ್ವಭೌಮತೆಯನ್ನು ಗಿರವಿಗೆ ಇಟ್ಟಿದೆ ಎಂದು ಪಾಕಿಸ್ತಾನಕ್ಕೆ ಪರೋಕ್ಷವಾಗಿ ಚುಚ್ಚಿದರು.

ನಮ್ಮ ನೆರೆಯ ರಾಷ್ಟ್ರಕ್ಕೆ ಸ್ವಂತ ಬಲದ ಮೇಲೆ ರಸ್ತೆ ನಿರ್ಮಾಣ ಮಾಡಲೂ ಸಾಧ್ಯವಿಲ್ಲ. ತನ್ನ ಇಷ್ಟದ ದೇಶದೊಂದಿಗೆ ಸ್ವತಂತ್ರ್ಯವಾಗಿ ವ್ಯಾಪಾರ ಮಾಡಲೂ ಆ ರಾಷ್ಟ್ರ ಶಕ್ತವಾಗಿಲ್ಲ ಎಂದು ರಾಜನಾಥ್ ಕುಹುಕವಾಗಿ ಮಾತನಾಡಿದರು.

English summary
Union Defence Minister Rajnath Singh on Friday indirectly slammed Pakistan for its dependence on China over roads and trade.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X