Pre wedding shoot: ಹೀಗೂ ಪ್ರೀ ವೆಡ್ಡಿಂಗ್‌ ಶೂಟ್‌ ಮಾಡಬಹುದು ಎಂದು ತೋರಿಸಿದ ಮಹಿಳೆ ವಿಡಿಯೋ ವೈರಲ್‌

ಹಿಂದಿನ ಕಾಲಕ್ಕೆ ಹೋಲಿಸಿದರೆ ಇಂದು ನಡೆಯುತ್ತಿರುವ ಮದುವೆಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹಿಂದಿನ ಮದುವೆಗಳಲ್ಲಿ ನೀವು ಮದುವೆಯ ಪೂರ್ವ ಚಿತ್ರೀಕರಣವನ್ನು ನೋಡದೇ ಇರಬಹುದು. ಆದರೆ ಈಗ ಅದು ಟ್ರೆಂಡ್ ಆಗಿದೆ. ಮದುವೆಯಲ್ಲಿ ವದು ವರರ ಫೋಟೋ ತೆಗೆದಯುವುದು ಸಾಮಾನ್ಯ. ಆದರೆ ಈಗ ಕಾಲ ಬದಲಾಗಿದೆ ಮದುವೆಗೂ ಮುನ್ನ ವದು ವರರ ಪ್ರೀ ವೆಡ್ಡಿಂಗ್ ಶೂಟ್‌ ನಡೆಸುತ್ತಾರೆ. ಇದಕ್ಕಾಗಿ ಮುಂದಾಗುವ ಜೋಡಿ ಒಳ್ಳೆಯ ಸ್ಥಳವನ್ನು ಆಯ್ಕೆ ಮಾಡುತ್ತದೆ.

ಮೊದಲು ಸೆಲೆಬ್ರಿಟಿಗಳಿಗೆ ಅಷ್ಟೇ ಸೀಮಿತವಾಗಿದ್ದ ಪ್ರೀ ವೆಡ್ಡಿಂಗ್ ಶೂಟ್‌ ಇಂದು ಎಲ್ಲರ ಪ್ರಥಮ ಆಯ್ಕೆ ಆಗಿದೆ. ಮದುವೆಗೆ ಮುಂಚೆಯೇ ಮದುವೆಯ ಪೂರ್ವ ಶೂಟ್‌ಗಳ ಬಗ್ಗೆ ಜನರು ಹುಚ್ಚರಾಗಿದ್ದಾರೆ, ಪ್ರತಿಯೊಬ್ಬರೂ ಒಳ್ಳೆಯ ಸ್ಥಳದಲ್ಲಿ ಉತ್ತಮ ಫೋಟೋಶೂಟ್ ಮಾಡಲು ಬಯಸುತ್ತಾರೆ. ಪ್ರಕೃತಿಯ ಮಡಿಲು ಹಾಗೂ ತಮ್ಮ ಊರಿನ ಐಕಾನಿಕ್ ಪ್ಲೇಸ್‌ಗಳಲ್ಲಿ ಜನರು ಪ್ರೀ ವೆಡ್ಡಿಂಗ್ ಶೂಟ್‌ಗಳನ್ನು ಮಾಡುವುದುನ್ನು ನಾವೆಲ್ಲಾ ನೋಡಿರುತ್ತೇವೆ.

The video of pre-wedding shoot of a women Goes viral

ಮದುವೆಯ ಡ್ರೆಸ್‌ನಲ್ಲಿ ಮಹಿಳೆ ವ್ಯಾಯಾಮ

ಕೆಲ ದಿನಗಳ ಹಿಂದೆ ಮಹಿಳೆಯೊಬ್ಬರು ಪಾರ್ಕ್‌ನಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದೀಗ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದ್ದು, ಅದರಲ್ಲಿ ವಿಭಿನ್ನವಾದದ್ದನ್ನು ಕಾಣಬಹುದು. ಈ ಯುವತಿಯ ಪ್ರೀ ವೆಡ್ಡಿಂಗ್ ವಿಡಿಯೋ ಸಖತ್‌ ವೈರಲ್‌ ಆಗುತ್ತಿದೆ. ಈ ಯುವತಿ ಹೀಗೆ ಏಕೆ ಮಾಡುತ್ತಿದ್ದಾಳೆ ಎಂದು ನಿಮ್ಮ ಮನಸ್ಸಿನಲ್ಲಿ ಪ್ರಶ್ನೆಗಳು ಓಡಬಹುದು. ಆದರೆ ಇವಳು ಪ್ರೀ ವೆಡ್ಡಿಂಗ್ ಶೂಟ್ ಮಾಡಿಸುತ್ತಿದ್ದಾಳೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ಸಂಪೂರ್ಣವಾಗಿ ವಧುವಿನಂತೆ ಡ್ರೆಸ್‌ ಮಾಡಿಕೊಂಡಿರುವುದು ಕಂಡು ಬರುತ್ತದೆ. ಮಹಿಳೆ ಜಿಮ್‌ನಲ್ಲಿ ವರ್ಕ್‌ಔಟ್‌ ಮಾಡುತ್ತಿರುವ ಫೋಟ್‌ಗಳನ್ನು ಶೂಟ್‌ ಮಾಡಲಾಗುತ್ತಿದೆ. ಈ ಸಮಯದಲ್ಲಿ, ಅವರ ಮುಂದೆ ನಿಂತಿರುವ ಅವರ ಫೋಟೋಗ್ರಾಫರ್ ಅವರ ಫೋಟೋ ತೆಗೆಯುತ್ತಿದ್ದಾರೆ.

ಜಿಮ್‌ನಲ್ಲಿ ಪ್ರೀ ವೆಡ್ಡಿಂಗ್ ಶೂಟ್

ಮಹಿಳೆ ಬೈಸೆಪ್ಸ್ ಮತ್ತು ಟ್ರೈಸ್ಪ್ಸ್ ವ್ಯಾಯಾಮ ಮಾಡುವಾಗ ತನ್ನ ಫೋಟೋ ಶಾಟ್ ಅನ್ನು ಮಾಡಿಸಿಕೊಂಡಿದ್ದಾರೆ. ಮಹಿಳೆಯೊಬ್ಬರು ಜಿಮ್‌ನಲ್ಲಿ ಫೋಟೋ ಶೂಟ್ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಸಖತ್‌ ವೈರಲ್ ವಿಡಿಯೋ

ಈ ವಿಡಿಯೋ ಸಖತ್ ವೈರಲ್‌ ಆಗುತ್ತಿದೆ. ನೆಟ್ಟಿಗರು ಸಹ ತರಹೆವಾರಿ ಕಮೆಂಟ್ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರ ಅಷ್ಟಕ್ಕೂ ಮದುವೆ ಅಂದ್ರೆ ಭಯ. ಅಂತಹದರಲ್ಲಿ ಈ ಮಹಿಳೆಯ ಪ್ರೀ ವೆಡ್ಡಿಂಗ್ ಶೂಟ್‌ ನೋಡಿ ಆತ್ಮವೂ ಹೆದರಿತು ಎಂದು ಬರೆದುಕೊಂಡಿದ್ದಾರೆ. ಇನ್ನೂ ಒಬ್ಬ ನೆಟ್ಟಿಗ ನೀವು ವರನನ್ನು ಹೆದರಿಸುತ್ತಿದ್ದೀರಾ? ಎಂದು ಬರೆದಿದ್ದಾರೆ. ಸುದ್ದಿ ಬರೆಯುವವರೆಗೂ ಈ ವಿಡಿಯೋವನ್ನು 34 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಇದಕ್ಕೂ ಮೊದಲು ಕರ್ನಾಟಕದ ಚಿತ್ರದುರ್ಗದ ವೈದ್ಯರಿಬ್ಬರ ಫೋಟೋ ಶೂಟ್‌ ಸಖತ್ ವೈರಲ್ ಆಗಿತ್ತು. ಇವರು ಆಪರೇಷನ್ ಥಿಯೇಟರ್‌ನಲ್ಲಿ ಮದುವೆಯ ಪೂರ್ವ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಈ ವಿಡಿಯೋ ಸಖತ್‌ ವೈರಲ್‌ ಆಗಿತ್ತು. ಈ ಸುದ್ದಿ ಕರ್ನಾಟಕದ ಆರೋಗ್ಯ ಸಚಿವರಿಗೆ ತಿಳಿಯುತ್ತಿದ್ದಂತೆ ಆ ವೈದ್ಯರ ವಿರುದ್ಧ ಶಿಸ್ತು ಕ್ರಮವನ್ನು ಸಹ ತೆಗೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+