ದೆಹಲಿಯಲ್ಲಿ 2 ತಿಂಗಳ ಬಳಿಕ ಗರಿಷ್ಠ ಕೊರೊನಾ ಪ್ರಕರಣ ದಾಖಲು
ನವದೆಹಲಿ, ಸೆಪ್ಟೆಂಬರ್ 02: ದೆಹಲಿಯಲ್ಲಿ ಎರಡು ತಿಂಗಳ ಬಳಿಕ ಇದೀಗ ಗರಿಷ್ಠ ಕೊರೊನಾ ಪ್ರಕರಣ ದಾಖಲಾಗಿದೆ.
Recommended Video
ಒಂದೇ ದಿನ 2312 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 18 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 1.77 ಕೊರೊನಾ ಸೋಂಕಿತರಿದ್ದು 4462 ಮಂದಿ ಮೃತಪಟ್ಟಿದ್ದಾರೆ.
ಶೇ.88.5ರಷ್ಟು ಮಂದಿ ಗುಣಮುಖರಾಗಿದ್ದಾರೆ. ಜುಲೈ 4 ರಂದು ಒಂದೇ ದಿನ 2505 ಪ್ರಕರಣಗಳು ಪತ್ತೆಯಾಗಿತ್ತು. ಬಳಿಕ ಇಲ್ಲಿಯವರೆಗೂ ಪ್ರಕರಣಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿತ್ತು.

ನಗರದಲ್ಲಿ ಹಂತ ಹಂತವಾಗಿ ಲಾಕ್‌ಡೌನ್ ಸಡಿಲಗೊಳಿಸಲಾಯಿತು. ಆಗಸ್ಟ್ 1 ರಿಂದ 7ರವರೆಗೆ ಸೆರೋ ನಡೆಸಿದ ಸಮೀಕ್ಷೆಯಲ್ಲಿ ಶೇ.29.1ರಷ್ಟು ಮಂದಿ ಪ್ರತಿಕಾಯವನ್ನು ಹೊಂದಿದ್ದಾರೆ ಎಂಬುದು ಪತ್ತೆಯಾಗಿದೆ.
ವಾರ್ಡ್‌ಗಳನ್ನು ಗಮನಿಸುವುದಾದರೆ 272 ವಾರ್ಡ್‌ಗಳಲ್ಲಿ ಸಮೀಕ್ಷೆ ನಡೆಸಿದ್ದಾರೆ. ಒಂದು ವಾರಗಳ ಕಾಲ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಈ ಮೊದಲು ಜಿಲ್ಲಾವಾರು ಸಮೀಕ್ಷೆ ನಡೆಸಲಾಗಿತ್ತು.
ಹೆಚ್ಚೆಚ್ಚು ಪರೀಕ್ಷೆಗಳನ್ನು ನಡೆಸುತ್ತಿರುವ ಕಾರಣ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ, ಸೆಪ್ಟೆಂಬರ್ 7 ರಿಂದ ಮೆಟ್ರೋ ಸಂಚಾರ ಆರಂಭವಾಗಲಿದೆ.
ಭಾರತದಲ್ಲಿ 24 ಗಂಟೆಯಲ್ಲಿ 69,921 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಂದೇ ದಿನ 819 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 36,91,167 ಪ್ರಕರಣಗಳಿವೆ, 7,85,996 ಸಕ್ರಿಯ ಪ್ರಕರಣಗಳಿವೆ. 28,39,883 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 5,288 ಮಂದಿ ಸಾವನ್ನಪ್ಪಿದ್ದಾರೆ.












Click it and Unblock the Notifications