ಕಾಣೆಯಾಗಿದ್ದ ಕೊವಿಡ್ 19 ರೋಗಿ, 8 ದಿನದ ಬಳಿಕ ಆಸ್ಪತ್ರೆ ಶೌಚಾಲಯದಲ್ಲಿ ಶವವಾಗಿ ಪತ್ತೆ
ಜಲ್ಗಾಂವ್, ಜೂನ್ 10: ಮಹಾರಾಷ್ಟ್ರದ ಆಸ್ಪತ್ರೆಯಲ್ಲಿ ಕೊವಿಡ್ 19ಗೆ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ 8 ದಿನಗಳ ಹಿಂದೆ ನಾಪತ್ತೆಯಾಗಿದ್ದು, ಇಂದು ಆಸ್ಪತ್ರೆಯ ಶೌಚಾಲಯದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
Recommended Video
ಜಿಲ್ಲಾಪೆತ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಅಕ್ಬರ್ ಪಟೇಲ್ ಅವರ ಪ್ರಕಾರ, ಜಲ್ಗಾಂವ್ ಸಿವಿಲ್ ಆಸ್ಪತ್ರೆ(ಜೆಸಿಎಚ್) ಅಧಿಕಾರಿಗಳು ಮತ್ತು ಮಹಿಳೆಯ ಕುಟುಂಬವು ಜೂನ್ 2 ರಂದು ಮಹಿಳೆ ಕಾಣೆಯಾಗಿರುವುದಾಗಿ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಭೂಸಾವಲ್ ಮೂಲದ 82 ವರ್ಷದ ಮಹಿಳೆ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ 19 ಚಿಕಿತ್ಸೆ ಪಡೆಯುತ್ತಿತ್ತು. ಆದರೆ ಎಂಟು ದಿನಗಳ ಹಿಂದೆ ಅವರು ನಾಪತ್ತೆಯಾಗಿದ್ದರು. ಅವರ ಮೃತದೇಹ ಆಸ್ಪತ್ರೆಯ ಶೌಚಾಲಯದೊಳಗೆ ಶವವಾಗಿ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಂಪೂರ್ಣ ವಿಚಾರಣೆ ನಡೆಸಿದ್ದೇವೆ, ಸಂಬಂಧಿಕರ ಸಮ್ಮುಖದಲ್ಲಿ ಎಲ್ಲಾ ರೋಗಿಗಳ ರೆಜಿಸ್ಟರ್ಗಳನ್ನು ಪರಿಶೀಲಿಸಿದ್ದೇವೆ, ಸಿಸಿಟಿವಿ ವಿಡಿಯೋಗಳನ್ನು ಪರಿಶೀಲನೆ ನಡೆಸದ್ದೆವು. ನಂತರ ಜೂನ್ 6ರಂದು ದೂರು ದಾಖಲಿಸಿಕೊಳ್ಳಲಾಗಿತ್ತು ಎಂದು ಪಟೇಲ್ ತಿಳಿಸಿದ್ದಾರೆ.
ಇಂದು ಆಸ್ಪತ್ರೆಯ ಶೌಚಾಲಯವೊಂದರಲ್ಲಿ ದುರ್ವಾಸನೆ ಬರುತ್ತಿತ್ತು. ಅಲ್ಲಿ ಪರಿಶೀಲನೆ ನಡೆಸಿದಾಗ ಅದು ನಾಪತ್ತೆಯಾಗಿದ್ದ ವೃದ್ಧೆಯ ಮೃತದೇಹ ಎಂಬುದು ದೃಢಪಟ್ಟಿದ್ದು ಈ ಸಂಬಂಧ ಮಹಿಳೆಯ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ ಎಂದು ಪಟೇಲ್ ತಿಳಿಸಿದ್ದಾರೆ.
ಮೇ 27ರಂದು ವೃದ್ಧೆಗೆ ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು. ಹೀಗಾಗಿ ಅವರನ್ನು ಜೆಸಿಎಚ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ತನಿಖೆಗಾಗಿ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಆದರೆ ಇಷ್ಟು ದಿನ ಆಸ್ಪತ್ರೆ ಶೌಚಾಲಯದಲ್ಲಿಯೇ ಇದ್ದರೇ ಎನ್ನುವ ಅನುಮಾನ ದಟ್ಟವಾಗಿದೆ.












Click it and Unblock the Notifications