ವೈದ್ಯೆ ಪಾಯಲ್ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು
ಮುಂಬೈ, ಜುಲೈ 05: ಡಾ. ಪಾಯಲ್ ತಡ್ವಿ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವು ದೊರೆತಿದೆ.
ಪಾಯಲ್ ಬರೆದಿದ್ದಳು ಎನ್ನಲಾದ ಡೆತ್‌ನೋಟ್‌ನ್ನೇ ಆರೋಪಿ ನಾಶಗೊಳಿಸಿದ್ದಾನೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಸ್ಟೂಡೆಂಟ್ ಆಗಿದ್ದ ಪಾಯಲ್ ಮೃತಪಟ್ಟ ಬಳಿಕ ಮರಣ ಪತ್ರವನ್ನು ಆತ ನಾಶಗೊಳಿಸಿದ್ದ ಎನ್ನಲಾಗಿದೆ. ವರ್ಷದ ಪಾಯಲ್ ತನ್ನ ಹಾಸ್ಟೆಲ್ ರೂಮಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.

ಪಾಯಲ್ ಬರೆದಿದ್ದಳು ಎನ್ನಳಾದ ಮೂರು ಪುಟದ ಡೆತ್ ನೋಟ್ ಕಾಣೆಯಾಗಿದೆ.ಪಾಯಲ್ ಮೊಬೈಲ್‌ನಿಂದ ಪೈಲ್‌ನ್ನು ತೆಗೆಯಲು ಫಾರೆನ್ಸಿಕ್ ತಜ್ಞರು ಸಾಹಸ ಮಾಡುತ್ತಿದ್ದಾರೆ.
ಯುವತಿ ಮೊಬೈಲ್‌ನಲ್ಲಿ ಮರಣ ಪತ್ರವನ್ನು ಬರೆದಿದ್ದಳು ಎನ್ನಲಾಗಿತ್ತು. ಅವಳ ಸಾವಿನ ನಂತರ ಮೂವರು ವೈದ್ಯರು ಸೇರಿ ಅವಳ ಮೊಬೈಲ್‌ನಲ್ಲಿದ್ದ ಡೆತ್‌ನೋಟ್‌ನ್ನು ಡಿಲೀಟ್ ಮಾಡಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಜೂನ್ 24 ರಂದು ಆರೋಪಿಗಳಿಗೆ ಮುಂಬೈ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿತ್ತು. ಆರೋಪಿಗಳನ್ನು ಹೇಮ ಅಹುಜಾ, ಅಂಕಿತಾ, ಭಕ್ತಿ ಎಂದು ಗುರುತಿಸಲಾಗಿದೆ.












Click it and Unblock the Notifications