ಹಲ್ಲೆ ಆರೋಪ: ದಾವೂದ್ ಇಬ್ರಾಹಿಂ ಸೋದರ ಇಕ್ಬಾಲ್ ಬಂಧನ

ಮುಂಬೈ, ಫೆ.3: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅವರ ಸೋದರ ಇಕ್ಬಾಲ್ ಕಾಸ್ಕರ್ ಹಾಗೂ ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಮೇಲೆ ರಿಯಲ್ ಎಸ್ಟೇಟ್ ಉದ್ಯಮಿಗೆ ಬೆದರಿಕೆ ಹಾಕಿ, ಹಲ್ಲೆಮಾಡಿದ ಆರೋಪ ಹೊರೆಸಲಾಗಿದೆ

ಸಲೀಂ ಶೇಕ್ ಎಂಬ ಉದ್ಯಮಿ ನೀಡಿರುವ ದೂರಿನ ಅನ್ವಯ ಇಕ್ಬಾಲ್ ಕಾಸ್ಕರ್ ಹಾಗೂ ಇನ್ನಿಬ್ಬರ ಮೇಲೆ ಬೈಕಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಲಾಗಿದೆ. ಸಲೀಂ ಶೇಕ್ ಗೆ ಕಳೆದ ಶುಕ್ರವಾರ ಚೆನ್ನಾಗಿ ಥಳಿಸಿ, 3 ಲಕ್ಷ ರು ನೀಡುವಂತೆ ಬೆದರಿಕೆ ಒಡ್ಡಿದ್ದ ಕಾಸ್ಕರ್ ಗ್ಯಾಂಗ್ ಈಗ ಪೊಲೀಸರ ಬಂಧನದಲ್ಲಿದ್ದಾರೆ. [ಪಾಕ್‌ನಲ್ಲೇ ಇದ್ದಾನೆ ದಾವೂದ್, ಸಿಕ್ಕಿತು ಪ್ರಬಲ ಸಾಕ್ಷಿ]

Dawood Ibrahim's brother Iqbal Kaskar, two others booked for extortion

ದಕ್ಷಿಣ ಮುಂಬೈನ ಪಕ್ಮೊಡಿಯಾ ರಸ್ತೆಯ ದಮರ್ವಾಲಾ ಕಟ್ಟಡದ ಕೊಠಡಿಯೊಂದರಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಶೇಕ್ ಮೇಲೆ ಹಲ್ಲೆ ನಡೆದಿದೆ. ಹೀಗಾಗಿ ಪ್ರಕರಣವನ್ನು ಜೆಜೆ ನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್ 385, 323 ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಜೆಜೆ ನಗರ ಪೊಲೀಸ್ ಠಾಣೆಯ ಹಿರಿಯ ಇನ್ಸ್ ಪೆಕ್ಟರ್ ಅನಿಲ್ ಮಾಡ್ವಿ ಹೇಳಿದ್ದಾರೆ. [ಪುಢಾರಿಗಳ ಜೊತೆ 'ಡಿ' ಗ್ಯಾಂಗ್ ಲಿಂಕ್ ಲೀಕ್]

2003ರಲ್ಲಿ ಯುನೈಟೆಡ್ ಅರಬ್ ಎಮಿರೈಟ್ಸ್ ನಲ್ಲಿ ನೆಲೆಸಿದ್ದ ಕಾಸ್ಕರ್ ಒಂದು ಕೊಲೆ ಪ್ರಕರಣ, ಸಾರಾ ಸಹರಾ ಕೇಸ್ ನ ಆರೋಪಿಯಾಗಿದ್ದ. ಆದರೆ, ದಾವೂದ್ ಅವರ ಐದನೇ ಸೋದರ ಇಕ್ಬಾಲ್ ಕಾಸ್ಕರ್ ಗೆ 2007ರಲ್ಲಿ ಈ ಎರಡು ಪ್ರಕರಣಗಳಿಂದ ಖುಲಾಸೆಗೊಂಡಿದ್ದಾನೆ.(ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+