ಪಾಕ್‌ನಲ್ಲೇ ಇದ್ದಾನೆ ದಾವೂದ್, ಸಿಕ್ಕಿತು ಪ್ರಬಲ ಸಾಕ್ಷಿ

ನವದೆಹಲಿ, ಡಿ. 27: ಭಾರತದ ವಾಂಟೆಡ್ ಉಗ್ರರ ಪಟ್ಟಿಯಲ್ಲಿ ನಂ. 1 ಸ್ಥಾನದಲ್ಲಿರುವ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿಯೇ ಇದ್ದಾನೆ ಎಂಬುದಕ್ಕೆ ಪ್ರಬಲ ಸಾಕ್ಷ್ಯ ಲಭ್ಯವಾಗಿದೆ.

ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿಯೇ ಇದ್ದಾನೆಂದು ಭಾರತ ವಾದಿಸುತ್ತಿದ್ದರೂ ಪಾಕಿಸ್ತಾನ ಇದುವರೆಗೆ ಒಪ್ಪಿಕೊಂಡಿರಲಿಲ್ಲ. ಆದರೆ, ಈ ಬಾರಿ ದಾವೂದ್ ಇಬ್ರಾಹಿಂ ಮಾತನಾಡಿದ್ದು ಎನ್ನಲಾದ ದೂರವಾಣಿ ಸಂಭಾಷಣೆಯೊಂದು ಭಾರತದ ಗೂಢಚರ ಸಂಸ್ಥೆಗಳಿಗೆ ಲಭ್ಯವಾಗಿದೆ. ಇಂತಹ ಪ್ರಬಲ ಸಾಕ್ಷಿಯೊಂದು ಲಭಿಸಿರುವುದು ಇದೇ ಮೊದಲು. [ಇಂಟರ್ ಪೋಲ್ ಭಯ : ಊರೂರು ಸುತ್ತುತ್ತಿರುವ ದಾವೂದ್]

ಸಂಭಾಷಣೆಯಲ್ಲಿ ಏನಿದೆ? : ಇದು ದುಬೈನಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮಿ ಯಾಸೀರ್ ಎಂಬಾತನ ಜೊತೆ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಿಂದ ನಡೆಸಿದ ಸಂಭಾಷಣೆ ಎನ್ನಲಾಗಿದೆ. ಈ ಮೂಲಕ ದಾವೂದ್ ಕರಾಚಿಯಲ್ಲಿ ಶ್ರೀಮಂತರೇ ಇರುವ ಪ್ರದೇಶ ಎನ್ನಲಾದ ಕ್ಲಿಫ್ಟನ್‌ನಲ್ಲಿರುವುದು ದೃಢಪಟ್ಟಿದೆ. [ಪುಢಾರಿಗಳ ಜೊತೆ ಡಿ ಗ್ಯಾಂಗ್ ಲಿಂಕ್ ಲೀಕ್]

dawood

"ದುಬೈನ ಐಷಾರಾಮಿ ಪ್ರದೇಶವಾದ ಶೇಖ್ ಜೇದ್ ರೋಡ್ ಪ್ರದೇಶದಲ್ಲಿ ನಾನು 1,100 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದೇನೆ. ಕರಾಚಿಯಲ್ಲಿಯೂ ಬೇನಾಮಿ ಹೆಸರಲ್ಲಿ ಹಲವು ನೂರು ಕೋಟಿ ರೂ. ಮೌಲ್ಯದ ಆಸ್ತಿ ಗಳಿಸಿದ್ದೇನೆ" ಎಂದು ದಾವೂದ್ ಹೇಳಿಕೊಂಡಿದ್ದಾನೆ.

"ಪಾಕಿಸ್ತಾನದಲ್ಲಿ ನಾನು ಪ್ರಧಾನ ಮಂತ್ರಿಗೆ ಯಾವುದೇ ರೀತಿಯಲ್ಲಿಯೂ ಕಡಿಮೆ ಇಲ್ಲದ ವ್ಯಕ್ತಿ. ನನ್ನ ನ್ಯಾಯಾಲಯದಲ್ಲಿ ನಾನೇ ನ್ಯಾಯಾಧೀಶ" ಎಂದು ಹೇಳಿಕೊಂಡಿರುವುದು ಸಂಭಾಷಣೆಯಲ್ಲಿ ದಾಖಲಾಗಿದೆ. [ಮೋದಿ ಭೀತಿ : ದಾವೂದ್ ಪಲಾಯನ]

ದಾವೂದ್ ಜೊತೆ ಮಾತನಾಡಿರುವ ರಿಯಲ್ ಎಸ್ಟೇಟ್ ಏಜೆಂಟ್ ಯಾಸೀರ್ ಪಾಕಿಸ್ತಾನದ ಪ್ರಭಾವಿ ಕೈಗಾರಿಕೋದ್ಯಮಿಯ ಮಗ ಎಂದು ಗೂಢಚರ ಸಂಸ್ಥೆ ಹೇಳಿದೆ.

ದಾವೂದ್‌ನನ್ನು ಭಾರತಕ್ಕೆ ಒಪ್ಪಿಸಿ : ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿಯೇ ಇರುವ ಕುರಿತು ಈಗ ಸ್ಪಷ್ಟ ಸಾಕ್ಷಿ ಲಭ್ಯವಾಗಿದೆ. ಆದ್ದರಿಂದ ಪಾಕಿಸ್ತಾನ ಸರ್ಕಾರ ತಕ್ಷಣ ಭೂಗತ ಪಾತಕಿಯನ್ನು ಭಾರತಕ್ಕೆ ಒಪ್ಪಿಸಬೇಕೆಂದು ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+