ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಢಾರಿಗಳ ಜೊತೆ 'ಡಿ' ಗ್ಯಾಂಗ್ ಲಿಂಕ್ ಲೀಕ್

By Mahesh
|
Google Oneindia Kannada News

ಇತ್ತೀಚೆಗೆ ಸಮಾಜವಾದಿ ಪಕ್ಷ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಹುಟ್ಟುಹಬ್ಬದ ಆಚರಣೆ ವೇಳೆ ಪಕ್ಷದ ಮುಖಂಡ ಅಜಂ ಖಾನ್ ನೀಡಿದ ಹೇಳಿಕೆ ಎಲ್ಲರ ಹುಬ್ಬೇರಿಸಿತ್ತು.

ಕಾಲು ಬಾಯಿ ರೋಗಕ್ಕೆ ತುತ್ತಾದವರಂತೆ ಆಡುವ ಅಜಂ ಖಾನ್ ನ.21ರಂದು ಮುಲಾಯಂ ಹುಟ್ಟುಹಬ್ಬಕ್ಕೆ ದಾವೂದ್ ಗ್ಯಾಂಗಿನಿಂದ ದೇಣಿಗೆ ಬಂದಿತ್ತು ಎಂದು ಹೇಳಿದ ಮೇಲೆ ಗುಪ್ತಚರ ಇಲಾಖೆ ಈ ಮಾತಿನ ಒಳಾರ್ಥ, ಗೂಡಾರ್ಥವನ್ನು ಭೇದಿಸಿದ್ದಲ್ಲದೆ ಉತ್ತರಪ್ರದೇಶಕ್ಕೂ ದಾವೂದ್ ಇಬ್ರಾಹಿಂಗೂ ಇರುವ ಅತ್ಯಾಪ್ತ ಕೊಂಡಿಯ ಬಗ್ಗೆ ವಿವರ ಬಹಿರಂಗಪಡಿಸಿದೆ.

ದಾವೂದ್ ಬಂಟ ಯಾರು?: ಭಾರತದಲ್ಲಿ ದಾವೂದ್ ಇಬ್ರಾಹಿಂ ಗ್ಯಾಂಗ್ ನ ಸಂಪೂರ್ಣ ನಿರ್ವಹಣೆಯನ್ನು ನೇರವಾಗಿ ನಿಯಂತ್ರಿಸುವ ಹೊಣೆ ದಾವೂದ್ ಆಪ್ತ ಇಕ್ಬಾಲ್ ಕಸ್ಕರ್ ಮೇಲಿದೆ. ಡಾನ್ ದಾವೂದ್ ಅವರ 'ಭಾಯ್' ಇಕ್ಬಾಲ್ ಉತ್ತರ ಪ್ರದೇಶದಿಂದ ಇಡೀ ಉಪ ಖಂಡದ ಚಟುವಟಿಕೆ ಮೇಲೆ ನಿಗಾ ಇಟ್ಟಿದ್ದಾನೆ ಎಂದು ತಿಳಿದು ಬಂದಿದೆ. [ಮುಲಾಯಂ ಹುಟ್ಟುಹಬ್ಬಕ್ಕೆ ತಾಲಿಬಾನ್ ಫಂಡ್: ಅಜಂ]

1999 ರಿಂದ 2011ರ ವೇಳೆಗೆ ಸುಮಾರು 80ಕ್ಕೂ ಅಧಿಕ ಪ್ರಮುಖ ರಾಜಕಾರಣಿಗಳನ್ನು ಉತ್ತರಪ್ರದೇಶ ಕಂಡಿದೆ. ಇವೆರೆಲ್ಲರೂ ಡಿ ಗ್ಯಾಂಗಿನ ನೆರವು ಪಡೆದು ಚುನಾವಣೆ ಗೆದ್ದಿದ್ದಾರೆ. ಅಸೆಂಬ್ಲಿ, ಸಂಸತ್ತಿನಲ್ಲಿ ಭ್ರಷ್ಟಾಚಾರದ ವಿರುದ್ಧ ಭಾಷಣ ಬಿಗಿದಿದ್ದಾರೆ. ಸುಮಾರು 80ಕ್ಕೂ ಅಧಿಕ ಸಂಸದರು ಹಾಗೂ 100ಕ್ಕೂ ಅಧಿಕ ಶಾಸಕರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ 'ಡಿ' ಗ್ಯಾಂಗಿನ ಹಣ, ಗೂಂಡಾಗಿರಿ ಲಾಭ ಪಡೆದುಕೊಂಡಿದ್ದಾರೆ ಎಂದು ಗುಪ್ತಚರ ಇಲಾಖೆ ವರದಿ ಹೇಳಿದೆ.

Dawood Ibrahim and his connection with Uttar Pradesh

ಡಿ ಗ್ಯಾಂಗ್ ನ ಪ್ರಮುಖ ಕೇಂದ್ರವಾಗಿ ಉತ್ತರಪ್ರದೇಶ ಬಹುಕಾಲದಿಂದ ಬೆಳಯುತ್ತಾ ಬಂದಿದೆ. ಡಿ ಗ್ಯಾಂಗಿಗೆ ಬೇಕಾದ ಪ್ರಮುಖ ಶಾರ್ಪ್ ಶೂಟರ್ಸ್ ಗಳು ಉತ್ತರಪ್ರದೇಶದಿಂದಲೇ ಆಯ್ಕೆ ಮಾಡಲಾಗುತ್ತಿದೆ. ಉದ್ಯಮಿಗಳ ಮೇಲೆ ದಾಳಿ ನಡೆಸುವುದು, ಬೆದರಿಕೆ ಒಡ್ಡುವುದಕ್ಕೆ ಶಾರ್ಪ್ ಶೂಟರ್ಸ್ ಗಳನ್ನೇ ಡಿ ಗ್ಯಾಂಗ್ ನೆಚ್ಚಿಕೊಂಡಿದೆ. ಯಾವುದೇ ಸೀಸನ್ ಇರಲಿ ಡಿ ಗ್ಯಾಂಗ್ ನಲ್ಲಿ ಸುಮಾರು 200ಕ್ಕೂ ಅಧಿಕ ಶಾರ್ಪ್ ಶೂಟರ್ಸ್ ಗಳಿರುತ್ತಾರೆ. ಪೊಲೀಸ್ ಮಾಹಿತಿ ಹಾಗೂ ಐಬಿ ವರದಿ ಪ್ರಕಾರ ಈ ಪೈಕಿ ಸರಿ ಸುಮಾರು 130 ಮಂದಿ ಉತ್ತರಪ್ರದೇಶದವರೇ ಆಗಿದ್ದಾರೆ.[ಮಮತಾ ಕುಲಕರ್ಣಿ ಬಂಧನದ ಹಿಂದೆ 'ಡಿ' ಕರಿನೆರಳು]

ಇಂಥ ಶಾರ್ಪ್ ಶೂಟರ್ಸ್ ಗಳ ಆಯ್ಕೆ ಜವಾಬ್ದಾರಿ ಇಕ್ಬಾಲ್ ಕಸ್ಕರ್ ಮೇಲಿರುತ್ತದೆ. ಉತ್ತರಪ್ರದೇಶದ ತರುಣರ ಗುರಿಕಾರ ಚಾಕಚಕ್ಯತೆ, ಕಾರ್ಯಕ್ಷಮತೆ ಬಗ್ಗೆ ತಿಳಿದಿರುವ ಇಕ್ಬಾಲ್ ನೇಮಕಾತಿ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ನಡೆಸುತ್ತಿದ್ದಾನೆ. ಡಿ ಗ್ಯಾಂಗ್ ಸೇರುವ ಮುನ್ನ ಈ ಗುರಿಕಾರರು ಅನೇಕ ರಾಜಕೀಯ ಮುಖಂಡರ ಹತ್ಯೆ ಮಾಡಿದ ಅನುಭವವುಳ್ಳವರಾಗಿರುತ್ತಾರೆ ಎಂಬುದನ್ನು ಗಮಿನಿಸಬೇಕಿದೆ. ಕೆಲವು ಶಾರ್ಪ್ ಶೂಟರ್ಸ್ ಗಳಂತೂ ಡಿ ಗ್ಯಾಂಗ್ ಹಾಗೂ ರಾಜಕಾರಣಿ ನಡುವೆ ಸಂಪರ್ಕ ಸೇತುವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. [ಮೋದಿ ಭೀತಿ: ದಾವೂದ್ ಇಬ್ರಾಹಿಂ ಪಲಾಯನ]

ಇದಲ್ಲದೆ ಡಿ ಗ್ಯಾಂಗಿನ ಸಕಲ ದಂಧೆಗಳ ಮೂಲ ಸ್ಥಾನವಾಗಿ ಉತ್ತರಪ್ರದೇಶ ರೂಪುಗೊಂಡಿದೆ.ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ, ಸಾಗಾಟ, ಮಾದಕ ದ್ರವ್ಯ ಸಾಗಾಟ(ನೇಪಾಳ ಮಾರ್ಗ)ಕ್ಕೆ ಉತ್ತರಪ್ರದೇಶವೇ ಅಡ್ಡಾ. ಜೊತೆಗೆ ಪ್ರಮುಖ ಕ್ರಿಮಿನಲ್ ಗಳನ್ನು ಭಾರತದ ಪೊಲೀಸರ ಕಣ್ ತಪ್ಪಿಸಿ ಪಾಕಿಸ್ತಾನಕ್ಕೆ ಕಳಿಸುವ ವ್ಯವಸ್ಥೆಗೆ ಕೂಡಾ ಇಲ್ಲಿಂದಲೇ ಸ್ಕೆಚ್ ತಯಾರಾಗುತ್ತಿದೆ. ನೇಪಾಳ ಉತ್ತರಪ್ರದೇಶ ಹಾಗೂ ಪಾಕಿಸ್ತಾನ ಮಾರ್ಗವಾಗಿ ಇಂಥವರನ್ನು ಎಸ್ಕೇಪ್ ಮಾಡಿಸುವ ಕೆಲಸಕ್ಕೆ ನಿಪುಣರನ್ನು ನೇಮಿಸಲಾಗಿದೆ.

ರಾಜಕಾರಣಿಗಳಿಗೆ ಬೇಕದಂತೆ ಹಣ ಒದಗಿಸುವ ಡಿ ಗ್ಯಾಂಗ್ ಗೆ ರಕ್ಷಣೆ ನೀಡುವುದು ಸರ್ಕಾರದ ಕೆಲಸವಾಗಿಬಿಟ್ಟಿದೆ. ರಾಜಕಾರಣಿಗಳು ನಡೆಸುವ ವಿವಿಧ ಪಾರ್ಟಿ ಗಳಲ್ಲಿ ಕುಣಿತದಿಂದ ಡ್ರಗ್ಸ್ ತನಕ ಎಲ್ಲವೂ ಡಿ ಗ್ಯಾಂಗಿನಿಂದ ಪೂರೈಕೆಯಾಗುತ್ತಿದೆ. ಇದೆಲ್ಲ ಗೊತ್ತಿದ್ದೆ ಅಜಂ ಖಾನ್ ಆ ರೀತಿ ಡೈಲಾಗ್ ಹೊಡೆದಿದ್ದು ಎಂಬುದು ಈಗ ದೃಢಪಟ್ಟಿದೆ.

English summary
Azam Khan, the man with the foot in the mouth disease, on Friday, Nov 21 said that Mulayam Singh's birthday bash was funded by Dawood Ibrahim. Khan is the only person who can explain why he made that statement, but here is an interesting report prepared by our intelligence agencies which goes on to show how deep the nexus between the Dawood Ibrahim gang and Uttar Pradesh has been.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X