ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಧಾನಿ ಮೋದಿ ಬೆಂಗಾವಲಿನಲ್ಲಿ ಮಂಗಳೂರು ಮೂಲದ ಅಧಿಕಾರಿ

ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಯಾಗಿರುವ ಕಾರ್ತಿಕ್ ಕಶ್ಯಪ್ ಅವರು 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರಿಗೆ ಭದ್ರತಾ ಕರ್ತವ್ಯದಲ್ಲಿದ್ದರು.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ 28: ದೇಶದ ಅಗ್ರಗಣ್ಯ ನಾಯಕ ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆಯಲ್ಲಿ ಮಂಗಳೂರಿನ ಮಾಜಿ ಮೇಯರ್ ಒಬ್ಬರ ಮಗ ಬೆಂಗಾವಲು ಅಧಿಕಾರಿಯಾಗಿ ಗಮನಸೆಳೆದಿದ್ದಾರೆ. ಪ್ರಧಾನಿಗಳ ಬೆಂಗಾವಲು ಅಧಿಕಾರಿಯಾಗಿ ಮಂಗಳೂರಿನ ಕಾರ್ತಿಕ್ ಕಶ್ಯಪ್ ಕರ್ತವ್ಯ ನಿರ್ವಹಿಸಿದ್ದಾರೆ.

ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಯಾಗಿರುವ ಕಾರ್ತಿಕ್ ಕಶ್ಯಪ್ ಅವರು 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರಿಗೆ ಭದ್ರತಾ ಕರ್ತವ್ಯದಲ್ಲಿದ್ದರು. ಕಪ್ಪು ಕನ್ನಡಕ, ಟೈ, ಕೋಟ್‌ಗಳನ್ನು ಧರಿಸಿ ಟಿಪ್ ಟಾಪ್ ಆಗಿ ವೇದಿಕೆಯಲ್ಲಿದ್ದ ಇವರು ಮಂಗಳೂರು ಮಾಜಿ ಶಂಕರ್ ಭಟ್ ಪುತ್ರ. ಇವರು ನಗರದ ಚಿನ್ಮಯ್ ಶಾಲೆ, ಸಂತ ಅಲೋಶಿಯಸ್ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿ ನಿಟ್ಟೆ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ಬಳಿಕ ಯುಪಿಎಸ್‌ಸಿ ತರಬೇತಿಗೆ ದಿಲ್ಲಿಗೆ ತೆರಳಿದ್ದರು.

Mangaluru Officer In PM Narendra Modi Security Force

ತಮ್ಮ 23ನೇ ವಯಸ್ಸಿಗೆ ಯುಪಿಎಸ್‌ಸಿ ಪರೀಕ್ಷೆಯನ್ನು ಮೊದಲೇ ಪ್ರಯತ್ನದಲ್ಲೇ ಯಶಸ್ಸು ಕಂಡವರು. ಐಎಎಸ್ ಪದವಿ ಪಡೆಯುವ ಅವಕಾಶವಿದ್ದರೂ ಐಪಿಎಸ್‌ನಲ್ಲಿ ಸೇವೆಗೆ ಸೇರಿದರು. ಐಪಿಎಸ್ ಅವಧಿಯಲ್ಲಿ ಬೆಸ್ಟ್ ಸ್ಟೂಡೆಂಟ್ ಪ್ರಶಸ್ತಿ ಪಡೆದಿದ್ದರು. ಬಳಿಕ ಐಪಿಎಸ್ ನಲ್ಲಿ ಗುಜರಾತ್ ಕೆಡರ್ ತೆಗೆದುಕೊಂಡು ಅಲ್ಲಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಯುಪಿಎಸ್‌ಸಿನಲ್ಲಿ ತಮ್ಮ ಬ್ಯಾಚ್ ಮೇಟ್ ಆಗಿರುವ ಪ್ರಿಯಾಂಕಾ ಕಶ್ಯಪ್ ಅವರನ್ನು ವಿವಾಹವಾಗಿರುವ ಇವರು, ತಮ್ಮ ಸೇವಾ ವ್ಯಾಪ್ತಿಯನ್ನು ಕೇಂದ್ರಾಡಳಿತ ಪ್ರದೇಶಕ್ಕೆ ಬದಲಾಯಿಸಿಕೊಂಡರು. ಅಲ್ಲಿ ಜೊತೆಯಾಗಿ ಈ ದಂಪತಿ ಸೇವೆ ಗೋವಾದಲ್ಲಿ ಆರು ವರ್ಷಗಳ ಕಾಲ ಎಸ್ಪಿಯಾಗಿ ಸೇವೆ ಸಲ್ಲಿದ್ದರು.

ಯುಪಿಎಸಿಯಲ್ಲಿ ಬ್ಯಾಚ್ ಮೇಟ್ ಆಗಿರುವ ಚಂಡಿಗಢದ ಪ್ರಿಯಾಂಕಾ ಕಶ್ಯಪ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಕಾರ್ತಿಕ್, ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಬಳಿಕ ತನ್ನ ಸೇವಾ ವ್ಯಾಪ್ತಿಯನ್ನು ಕೇಂದ್ರಾಡಳಿತ ಪ್ರದೇಶಕ್ಕೆ ಬದಲಾಯಿಸಿಕೊಂಡಿದ್ದರು. ಈ ದಂಪತಿ ಒಟ್ಟಿಗೆ ದಿಲ್ಲಿ,ಅಂಡಮಾನ್,ದಿಯು-ದಾಮನ್,ಮಿಜೋರಾಂ ನಲ್ಲಿ ಒಟ್ಟಿಗೆ ಸೇವೆ ಸಲ್ಲಿಸಿದ್ದಾರೆ‌. ಪ್ರಸ್ತುತ ಪ್ರಿಯಾಂಕಾ ಕಶ್ಯಪ್ ಉತ್ತರ ದಿಲ್ಲಿಯಲ್ಲಿ ಎಸ್ಪಿಯಾಗಿದ್ದಾರೆ. ಈ ದಂಪತಿಗೆ ಒಂದು ಹೆಣ್ಣು,ಒಂದು ಗಂಡು ಮಗು ಇದೆ.

English summary
Mangaluru officer Karthik kashyap in PM Narendra Modi security force.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X