ಡೆಡ್‌ಲೈನ್ ಮೀರಿದರೂ ಅಂಬರೀಶ್ ಮಾತಿಲ್ಲ-ಕತೆಯಿಲ್ಲ

ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಬಿ-ಫಾರಂ ನೀಡಿದ್ದರೂ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ಹಠ ಹಿಡಿದು ಕೂತಿರುವ ಅಂಬರೀಶ್ ಗೆ ಇಂದು ಸಂಜೆ 5 ಗಂಟೆ ಒಳಗೆ ನಿರ್ಧಾರ ತಿಳಿಸುವಂತೆ ಹೇಳಲಾಗಿತ್ತು. ಆದರೆ ಗಡುವು ಮೀರಿದ್ದರೂ ಅವರು ಇನ್ನೂ ತಮ್ಮ ನಿರ್ಧಾರ ಪ್ರಕಟಿಸಿಲ್ಲ.

ರಾಜ್ಯ ಉಸ್ತುವಾರಿ ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಸಚಿವ ಜಾರ್ಜ್ ಇನ್ನೂ ಹಲವು ಕಾಂಗ್ರೆಸ್ ಮುಖಂಡರು ಅಂಬರೀಶ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲು ಪ್ರಯತ್ನಿಸಿದರು ಅಂಬರೀಶ್ ಇವರನ್ನೆಲ್ಲಾ ಅಲಕ್ಷಿಸಿ ಚುನಾವಣೆಗೆ ಸ್ಪರ್ಧಿಸದಿರುವ ತಮ್ಮ ನಿರ್ಧಾರಕ್ಕೆ ಅಂಟಿಕೊಂಡಿದ್ದರು.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಅಂಬರೀಶ್ ಅಶಿಸ್ತಿಗೆ ಬೇಸತ್ತಿದ್ದ ಕಾಂಗ್ರೆಸ್ ಇಂದು (ಏಪ್ರಿಲ್ 23) ರ ಸಂಜೆ 5 ಗಂಟೆ ಒಳಗೆ ನಿರ್ಧಾರವನ್ನು ರಾಜ್ಯ ಕಾಂಗ್ರೆಸ್‌ಗೆ ತಿಳಿಸುವಂತೆ ಅಂಬರೀಶ್‌ಗೆ ಆದೇಶ ನೀಡಿತ್ತು. ಆದರೆ ಅಂಬರೀಶ್‌ಗೆ ನೀಡಿದ್ದ ಗಡುವು ಮುಗಿದರೂ ಇನ್ನೂ ಅವರು ಕಾಂಗ್ರೆಸ್‌ಗೆ ತಮ್ಮ ನಿರ್ಧಾರ ಪ್ರಕಟಿಸಿಲ್ಲ ಹಾಗಾಗಿ ನಾಳೆ ಕಾಂಗ್ರೆಸ್ ಮಂಡ್ಯ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿಗೆ ಟಿಕೆಟ್ ನೀಡಲೇ ಬೇಕಾಗಿದೆ.

Karnataka elections: Ambareesh yet to clarify his stand to congress

ಅಂಬರೀಶ್ ಅವರ ಆಪ್ತ ಅಮರಾವತಿ ಚಂದ್ರಶೇಖರ್ ಅಥವಾ ಯುವಕ ಗಣಿಗ ರವಿಕುಮಾರ್ ಅವರಿಗೆ ಕಾಂಗ್ರೆಸ್‌ ಟಿಕೆಟ್ ನೀಡಲಾಗುವುದು ಎನ್ನಲಾಗಿದೆ. ಈ ಮಧ್ಯೆ ಅಂಬರೀಶ್ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿಕೊಳ್ಳುತ್ತಾರೆ ಎಂಬ ಸುದ್ದಿಯೂ ಮಂಡ್ಯದಲ್ಲಿ ಹರಿದಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+