ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ಮೊಬೈಲ್ ಗೇಮ್, ತಂಬಾಕು ಸೇವನೆ: ವಿಡಿಯೋ ಹಂಚಿಕೊಂಡ ಎಸ್‌ಪಿ

ಸಮಾಜವಾದಿ ಪಕ್ಷ ಶನಿವಾರ ವಿಧಾನಸಭೆಯೊಳಗೆ ತೆಗೆದ ಎರಡು ವಿಡಿಯೊಗಳನ್ನು ಪೋಸ್ಟ್ ಮಾಡಿದೆ. ಬಿಜೆಪಿ ಶಾಸಕರು ಅಧಿವೇಶನ ನಡೆಯುತ್ತಿರುವಾಗ ಆಟವಾಡುವ ಮತ್ತು ತಂಬಾಕು ತಿನ್ನುವ ಮೂಲಕ ಸಭೆಯ ಘನತೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದೆ. "ಜನರು ನೀಡಿದ ಪ್ರಶ್ನೆಗಳಿಗೆ ಈ ಜನರ ಬಳಿ ಉತ್ತರವಿಲ್ಲ ಮತ್ತು ವಿಧಾನಸಭೆಯನ್ನು ಮನರಂಜನಾ ಕೇಂದ್ರವಾಗಿ ಪರಿವರ್ತಿಸಿಕೊಂಡಿದ್ದಾರೆ" ಎಂದು ಪಕ್ಷದ ಅಧಿಕೃತ ವೆಬ್‌ಸೈಟ್ ಕ್ರಮವನ್ನು ಖಂಡಿಸಿ ಟ್ವೀಟ್ ಮಾಡಿದೆ. "ಇದು ತುಂಬಾ ಅವಮಾನಕರ ಸಂಗತಿ" ಎಂದು ಟ್ವೀಟ್‌ನಲ್ಲಿ ಹೇಳಿದೆ.

ಸಮಾಜವಾದಿ ಪಕ್ಷ ವಿಡಿಯೋ ಹಂಚಿಕೊಂಡ ಬಳಿಕ ಅವು ವೈರಲ್ ಆಗಿವೆ.

UP: BJP MLAs playing mobile gaming in assembly: SP shared video

ಸಮಾಜವಾದಿ ಪಕ್ಷ ಹೇಳಿಕೊಂಡಂತೆ ಮೊದಲ ವಿಡಿಯೋದಲ್ಲಿ ಮಹೋಬಾ ಶಾಸಕ ರಾಕೇಶ್ ಗೋಸ್ವಾಮಿ ಮೊಬೈಲ್‌ನಲ್ಲಿ ಕಾರ್ಡ್ ಗೇಮ್ ಆಡುತ್ತಿರುವುದನ್ನು ಕಾಣಬಹುದು. ಧ್ವನಿಗಳು ಮತ್ತು ಚಪ್ಪಾಳೆಗಳ ಸದ್ದು ಕೇಳಿಸುವುದರಿಂದ ಆ ಸಮಯದಲ್ಲಿ ಅಧಿವೇಶನ ನಡೆದಿರುವುದು ವಿಡಿಯೊದಿಂದ ಸ್ಪಷ್ಟವಾಗಿದೆ.

ಎರಡನೇ ವಿಡಿಯೋದಲ್ಲಿ ಝಾನ್ಸಿ ಶಾಸಕ ರವಿ ಶರ್ಮಾ ಅವರು ವಿಧಾನಸಭೆಯೊಳಗೆ ತಂಬಾಕು ಸೇವಿಸುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷ ಹೇಳಿಕೊಂಡಿದೆ. ರವಿ ಶರ್ಮಾ ಅವರು ತಮ್ಮ ಮೇಜಿನ ಕೆಳಗಿನ ತಂಬಾಕು ಬಾಕ್ಸ್‌ ಅನ್ನು ತೆಗೆಯುವಾಗ ಕೆಮ್ಮುವುದು ಕಂಡುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+