ತಾಜ್ ಮಹಲ್: ಕೋಣೆ ತೆರೆಸಬೇಕೆಂದ ಅರ್ಜಿದಾರರಿಗೆ ಕೋರ್ಟ್ ಛೀಮಾರಿ
ನವದೆಹಲಿ, ಮೇ 12: ತಾಜ್ ಮಹಲ್‌ನಲ್ಲಿ ಬಂದ್ ಆಗಿರುವ 20 ಕೋಣೆಗಳನ್ನು ತೆರೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ಇಂದು ಗುರುವಾರ ಕೈಗೆತ್ತಿಕೊಂಡು, ಅರ್ಜಿದಾರನಿಗೆ ಛೀಮಾರಿ ಹಾಕಿತು. ತಾಜ್ ಮಹಲ್ ಹಿಂದೆ ಹಿಂದು ದೇವಾಲಯವಾಗಿತ್ತು. ಬಂದ್ ಆಗಿರುವ 20 ಕೋಣೆಗಳಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳು ರಹಸ್ಯವಾಗಿ ಉಳಿದಿವೆ. ಭಾರತೀಯ ಪುರಾತತ್ವ ಇಲಾಖೆಗೆ ಈ ಕೋಣೆಗಳನ್ನು ತೆರೆಯುವಂತೆ ನಿರ್ದೇಶಿಸಬೇಕು ಎಂದು ಡಾ. ರಜನೀಶ್ ಸಿಂಗ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದರು.
ಇಂದು ಇದರ ವಿಚಾರಣೆ ನಡೆಸಿದ ನ್ಯಾ| ಡಿ ಕೆ ಉಪಾಧ್ಯಾಯ್ ಮತ್ತು ನ್ಯಾ| ಸುಭಾಷ್ ವಿದ್ಯಾರ್ಥಿ ಇದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಪೀಠ, ಪಿಐಎಲ್ ವ್ಯವಸ್ಥೆಯನ್ನೇ ಅಣಕಿಸುವಂತೆ ಮಾಡಬೇಡಿ ಎಂದು ಹೇಳಿ ಅರ್ಜಿದಾರನನ್ನೇ ತರಾಟೆಗೆ ತೆಗೆದುಕೊಂಡಿತು.
"ನಿಮ್ಮ ಮನವಿ ಪುರಸ್ಕರಿಸಬೇಕೆಂದು ನಮಗೆ ಅನಿಸುತ್ತಿಲ್ಲ. ಮೊದಲು ಹೋಗಿ ಸಂಶೋಧನೆ ಮಾಡಿ. ಸ್ನಾತಕೋತ್ತರ ಪದವಿ ಮಾಡಿ. ಪಿಎಚ್‌ಡಿ ಮಾಡಿ" ಎಂದು ನ್ಯಾಯಾಧೀಶರು ತಿಳಿಹೇಳಿದರು.

"ತಾಜ್ ಮಹಲ್‌ನಲ್ಲಿ ಹಲವು ರೂಮುಗಳು ಬೀಗ ಹಾಕಿವೆ. ಭದ್ರತಾ ಕಾರಣದಿಂದ ಬಂದ್ ಆಗಿವೆ ಎಂದು ಅಧಿಕಾರಿಗಳು ಹೇಳುತ್ತಾರೆ. ತಾಜ್ ಮಹಲ್‌ನಲ್ಲಿ ರಹಸ್ಯವಾಗಿ ಉಳಿದಿರುವುದೆಲ್ಲಾ ಸಾರ್ವಜನಿಕಗೊಳಿಸಬೇಕು. ತಾಜ್ ಮಹಲ್ ಬಗ್ಗೆ ಸತ್ಯ ತಿಳಿದುಕೊಳ್ಳು ಹಕ್ಕು ಈ ದೇಶದ ನಾಗರಿಕರಿಗೆ ಇದೆ" ಎಂಬುದು ಅರ್ಜಿದಾರನ ವಾದವಾಗಿತ್ತು. ಈ ವಿಚಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾಯಪೀಠ, ಪಿಐಎಲ್ ವ್ಯವಸ್ಥೆಯನ್ನೇ ಅಣಕಿಸಬೇಡಿ ಎಂದಿತು.
"ನಿಮ್ಮ ಮನವಿ ನಮಗೆ ಸಮಾಧಾನ ಕೊಟ್ಟಿಲ್ಲ. ಸತ್ಯಶೋಧನಾ ಸಮಿತಿ ಮೂಲಕ ಸತ್ಯಾಂಶ ಹೊರಬರಬೇಕೆಂದು ಕೇಳುತ್ತಿದ್ದೀರಾ? ಇದು ನಿಮ್ಮ ಹಕ್ಕಲ್ಲ. ಆರ್‌ಟಿಐ ಕಾಯ್ದೆ ವ್ಯಾಪ್ತಿಗೂ ಬರಲ್ಲ" ಎಂದು ಕೋರ್ಟ್ ಹೇಳಿತು.
"ಈ ವಿಚಾರದ ಬಗ್ಗೆ ನಾವು ಹೇಗೆ ತೀರ್ಪು ಕೊಡಲು ಸಾಧ್ಯ? ನಿಮ್ಮ ಹಕ್ಕೇನಿದೆ. ನಿರ್ದಿಷ್ಟ ಅಧ್ಯಯನ ನಡೆಸಬೇಕೆಂದು ಕೇಳುವುದು ನಿಮ್ಮ ಹಕ್ಕಾ?" ಎಂದು ಅರ್ಜಿದಾರನನ್ನು ನ್ಯಾಯಾಧೀಶರು ಪ್ರಶ್ನಿಸಿದರು.

ಅರ್ಜಿದಾರ ಡಾ. ರಜನೀಶ್ ಸಿಂಗ್ ಅಯೋಧ್ಯೆಯ ಬಿಜೆಪಿ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿದ್ದಾರೆ. "ತಾಜ್ ಮಹಲ್ ಕಟ್ಟಡ ಮೂಲತಃ ತೇಜೋ ಆಲಯ ಎಂಬ ಶಿವನ ದೇವಾಲಯವಾಗಿತ್ತು. ಅದನ್ನು ನಾಶ ಮಾಡಿ ತಾಜ್ ಮಹಲ್ ಕಟ್ಟಲಾಗಿದೆ. ಈ ಬಗ್ಗೆ ಹಲವು ಇತಿಹಾಸಕಾರರು ಪುರಾವೆಗಳನ್ನು ನೀಡಿದ್ದಾರೆ. ಲಾಕ್ ಆಗಿರುವ ರೂಮುಗಳನ್ನು ತೆರೆಸಿದರೆ ಇನ್ನಷ್ಟು ಸಾಕ್ಷ್ಯಗಳು ಸಿಗುತ್ತವೆ. ರೂಮು ತೆರೆಸುವುದು ತಪ್ಪೇನಿಲ್ಲ. ವಾಸ್ತವ ಏನಿದೆ ಅದು ಹೊರಗೆ ಬರಲಿ" ಎಂದು ತಮ್ಮ ಅರ್ಜಿಯಲ್ಲಿ ಕೇಳಿದ್ದರು.
ಈ ಹಿಂದೆ ಪುರಾತತ್ವ ಇಲಾಖೆಯು ತಾಜ್ ಮಹಲ್ ಬಗ್ಗೆ ನಡೆಸಲಾದ ಸರ್ವೇಕ್ಷಣೆ ಮತ್ತು ಅಧ್ಯಯನದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿತ್ತು. ಅದರ ಪ್ರಕಾರ, ತಾಜ್ ಮಹಲ್ ಹಿಂದೆ ಹಿಂದು ದೇವಸ್ಥಾನ ಆಗಿತ್ತೆನ್ನುವುದಕ್ಕೆ ಸಾಕ್ಷ್ಯಾಧಾರ ಇಲ್ಲ. ಅದು ಸಮಾಧಿಯ ಉದ್ದೇಶದಿಂದಲೇ ಕಟ್ಟಿದ ಕಟ್ಟಡವಾಗಿದೆ ಎಂದು ಎಎಸ್‌ಐ ತನ್ನ ಅಫಿಡವಿಟ್‌ನಲ್ಲಿ ಸ್ಪಷ್ಟಪಡಿಸಿತ್ತು.
(ಒನ್ಇಂಡಿಯಾ ಸುದ್ದಿ)
Recommended Video
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications