ಆಗ್ರಾ: ಟ್ರಕ್ ಹಾಗೂ ಕಾರು ನಡುವೆ ಅಪಘಾತ, 8 ಮಂದಿ ಸಾವು
ಆಗ್ರಾ, ಮಾರ್ಚ್ 11: ಟ್ರಕ್ ಹಾಗೂ ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಎಂಟು ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ನಾಲ್ವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಗಾಲ್ಯಾಂಡ್ ನಿಂದ ಬರುತ್ತಿದ್ದ ಟ್ರಕ್ ಮತ್ತು ಜಾರ್ಖಂಡ್ ನ ದಾಖಲಾತಿ ಸಂಖ್ಯೆ ಹೊಂದಿರುವ ಕಾರು ಮಧ್ಯೆ ಢಿಕ್ಕಿ ಸಂಭವಿಸಿದೆ ಎಂದು ಬೊಟ್ರೆ ಸಿಟಿ ಎಸ್ಪಿ ರೋಹನ್ ಪ್ರಮೋದ್ ತಿಳಿಸಿದ್ದಾರೆ.

ಟ್ರಕ್ ಮತ್ತು ಕಾರು ಮಧ್ಯೆ ಢಿಕ್ಕಿ ಸಂಭವಿಸಿ ಎಂಟು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಆಗ್ರಾದ ಎಟ್ಮೌದ್ದೌಲ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ. ಘಟನೆಯಲ್ಲಿ 4 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ, ಟ್ರಕ್ ನಾಗಾಲ್ಯಾಂಡ್ ದ್ದಾಗಿದ್ದು, ಕಾರು ಜಾರ್ಖಂಡ್ ಮೂಲದ್ದಾಗಿದೆ.











Click it and Unblock the Notifications