ಯುಪಿ: ಫೋಟೋಗಾಗಿ ಇಬ್ಬರು ದಲಿತ ವಿದ್ಯಾರ್ಥಿಗಳ ಸಮವಸ್ತ್ರ ಬಿಚ್ಚಿಸಿ ದರ್ಪ
ಲಕ್ನೋ, ಜುಲೈ 19: ಉತ್ತರ ಪ್ರದೇಶ ಹಾಪುರ್‌ನಲ್ಲಿ ಇಬ್ಬರು ದಲಿತ ಶಾಲಾ ವಿದ್ಯಾರ್ಥಿನಿಯರಿಗೆ ಬಟ್ಟೆ ಬಿಚ್ಚಿಸಿ ಮೇಲ್ಜಾತಿಯ ಬಾಲಕಿಯರಿಗೆ ಫೋಟೋಗಾಗಿ ಸಮವಸ್ತ್ರ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಶಿಕ್ಷಣ ಇಲಾಖೆ ಸೋಮವಾರ ತನಿಖೆ ಆರಂಭಿಸಿದೆ.
ಇಬ್ಬರು ದಲಿತ ಶಾಲಾ ವಿದ್ಯಾರ್ಥಿನಿಯರನ್ನು ಬಲವಂತವಾಗಿ ವಿವಸ್ತ್ರಗೊಳಿಸಿದ ಮೇಲ್ಜಾತಿ ಬಾಲಕಿಯರು ಫೋಟೋಗಾಗಿ ಸಮವಸ್ತ್ರ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ (ಎನ್‌ಸಿಎಸ್‌ಸಿ) "ಕ್ರಮ-ತೆಗೆದುಕೊಂಡ" ವರದಿಯನ್ನು ಒತ್ತಾಯಿಸಿದ ನಂತರ ಯುಪಿ ರಾಜ್ಯ ಶಿಕ್ಷಣ ಇಲಾಖೆ ಇಲಾಖಾ ತನಿಖೆಗೆ ಆದೇಶಿಸಿದೆ. ಹಾಪುರ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೇಧಾ ರೂಪಮ್ ಅವರು ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿರುವುದಾಗಿ ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಜುಲೈ 11 ರಂದು, IV ನೇ ತರಗತಿಯ ಇಬ್ಬರು ದಲಿತ ಶಾಲಾ ವಿದ್ಯಾರ್ಥಿನಿಯರಿಗೆ ಮೇಲ್ಜಾತಿ ವಿದ್ಯಾರ್ಥಿಗಳು ಸಮವಸ್ತ್ರವನ್ನು ತೆಗೆಯುವಂತೆ ಒತ್ತಾಯಿಸಿದರು ಮತ್ತು ವರ್ಗದ ಫೋಟೋಗಾಗಿ ಸಮವಸ್ತ್ರವನ್ನು ನೀಡಿದ್ದರು ಎಂದು ತಿಳಿದುಬಂದಿದೆ. ಸಮವಸ್ತ್ರ ನೀಡಲು ಹಿಂಜರಿದಾಗ ಅವರ ಶಿಕ್ಷಕರು ಅವರನ್ನು ಹೊರಹಾಕುವ ಬೆದರಿಕೆ ಹಾಕಿದರು.

ಶಿಕ್ಷಣ ಅಧಿಕಾರಿ ಅರ್ಚನಾ ಗುಪ್ತಾ ಮತ್ತು ಇಬ್ಬರು ಶಿಕ್ಷಕರಿಗೆ ಪ್ರಕರಣ ಗಮನಕ್ಕೆ ಬಂದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ನಂತರ ಎನ್‌ಜಿಒ ಶೋಶಿತ್ ಕ್ರಾಂತಿ ಈ ವಿಷಯವನ್ನು ಕೈಗೆತ್ತಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ವಿಷಯವನ್ನು ಹೈಲೈಟ್ ಮಾಡಿದ್ದಾರೆ.
ಈ ವಿಷಯವನ್ನು ಸಮಾಧಿ ಮಾಡಲು ಒತ್ತಡ ಹೇರಲಾಗುತ್ತಿದೆ ಎಂದು ಬಾಲಕಿಯರೊಬ್ಬರ ತಂದೆ ಸುದ್ದಿಗಾರರಿಗೆ ತಿಳಿಸಿದ್ದಾರೆ. ನನ್ನ ದೂರುಗಳ ಹೊರತಾಗಿಯೂ ಶಿಕ್ಷಕರ ವಿರುದ್ಧ ಎಫ್‌ಐಆರ್ ದಾಖಲಾಗಿಲ್ಲ, ಅವರು ಹಾಗೂ ಇತರ ಗ್ರಾಮಸ್ಥರು ನನಗೆ ಈ ಬಗ್ಗೆ ಧ್ವನಿ ಎತ್ತದೇ ಇರಲು ಮೌನವಾಗಿರುವಂತೆ ಒತ್ತಡ ಹೇರುತ್ತಿದ್ದಾರೆ.
ಶಿಕ್ಷಕರ ವಿರುದ್ಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದೂರು ದಾಖಲಿಸಿದ್ದೆ ಎಂದು ಬಾಲಕಿ ತಂದೆ ಹೇಳಿಕೊಂಡಿದ್ದಾರೆ. ಶೋಷಿತ್ ಕ್ರಾಂತಿ ದಳದ ಅಧ್ಯಕ್ಷ ರವಿಕಾಂತ್ (ಅವರು ತಮ್ಮ ಮೊದಲ ಹೆಸರನ್ನು ಮಾತ್ರ ಬಳಸುತ್ತಾರೆ) ಟ್ವೀಟ್ ಮಾಡಿದ್ದಾರೆ, "ಒಂದು ವಾರ ಕಳೆದರೂ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಆರೋಪಿ ಶಿಕ್ಷಕರು ಹುಡುಗಿಯರ ಕುಟುಂಬಗಳ ಮೇಲೆ ಒತ್ತಡ ಹೇರಲು ಪಂಚಾಯಿತಿಗಳನ್ನು ನಡೆಸುತ್ತಿದ್ದಾರೆ. ಇದನ್ನು ಹೇಗೆ ವ್ಯಾಖ್ಯಾನಿಸಲು ಸಾಧ್ಯ?" ಎಂದು ಹೇಳಿದ್ದಾರೆ.

ಎನ್‌ಸಿಎಸ್‌ಸಿ ಅಧ್ಯಕ್ಷ ವಿಜಯ್ ಸಂಪ್ಲಾ ವರದಿ ಕೇಳಿದ ಒಂದು ದಿನದ ನಂತರ ಮಹಿಳಾ ಕಾನ್‌ಸ್ಟೆಬಲ್‌ಗಳು ಸೇರಿದಂತೆ ತಂಡವು ಬಾಲಕಿಯರ ಹೇಳಿಕೆಯನ್ನು ದಾಖಲಿಸಿಕೊಂಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.












Click it and Unblock the Notifications