ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈದ್ಯರೂ ಸರಿಪಡಿಸಲಾಗದ ಸಮಸ್ಯೆಗೆ ಕಾರವಾರದ ಅರಬಜ್ಜನ ನಾಟಿ ಔಷಧದಿಂದ ಸಿಗುತ್ತೆ ಪರಿಹಾರ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಅಕ್ಟೋಬರ್ 12: ಮೂಳೆ ಮುರಿತ, ಉಳುಕು ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ವೈದ್ಯರನ್ನು ಕಾಣುವುದು ಸಾಮಾನ್ಯ. ಆದರೆ ವೈದ್ಯರು ಪರೀಕ್ಷಿಸಿಯೂ ಗುಣಪಡಿಸಲಾಗದ ಕೆಲವು ಸಮಸ್ಯೆಗಳಿಗೆ ನಾಟಿ ಔಷಧಿ ಮೂಲಕ ಪರಿಹಾರ ನೀಡುವ ಕಾರವಾರ ತಾಲೂಕಿನ ತೋಡುರಿನ ನಾಟಿ ವೈದ್ಯ ಅರಬಜ್ಜ ಹಲವರ ಬಾಳಿಗೆ ಬೆಳಕಾಗಿದ್ದಾರೆ.

ಜಿಲ್ಲೆ ಮಾತ್ರವಲ್ಲದೆ ರಾಜ್ಯದ ನಾನಾ ಭಾಗಗಳಿಗೆ ಚಿರಪರಿತವಾಗಿರುವ ತೋಡುರಿನ ಅರಬಜ್ಜನ ನಾಟಿ ಔಷಧಿ ಲೆಕ್ಕವಿಲ್ಲದಷ್ಟು ಜನರ ಬಾಳಿಗೆ ಚಿಕಿತ್ಸೆ ನೀಡಿದೆ. ಅಲ್ಲದೆ ಇಂದು ಎಲ್ಲಿಯೇ ಮೂಳೆ ಮುರಿತ ಅಥವಾ ಉಳುಕಿದ ಘಟನೆಗಳು ನಡೆದಲ್ಲಿ ತಕ್ಷಣಕ್ಕೆ ನೆನಪಾಗುವುದು ತೋಡುರು ಗ್ರಾಮದ ಹೆಸರು. ಇಲ್ಲಿನ ಪ್ರಮುಖ ನಾಟಿ ವೈದ್ಯ ಅರಬಜ್ಜ ಎಂದೇ ಹೆಸರುವಾಸಿಯಾಗಿರುವ ಆರಬಾ ಕೃಷ್ಣ ಗೌಡ.

ಎಂಥ ವಿಷವನ್ನಾದರೂ ದೇಹದಿಂದ ಇಳಿಸುವ ಬೆಳ್ತಂಗಡಿಯ ವಿಷ ಧನ್ವಂತರಿ ಬೇಬಿ ಪಿಲ್ಯಎಂಥ ವಿಷವನ್ನಾದರೂ ದೇಹದಿಂದ ಇಳಿಸುವ ಬೆಳ್ತಂಗಡಿಯ ವಿಷ ಧನ್ವಂತರಿ ಬೇಬಿ ಪಿಲ್ಯ

ಉಳುಕಿದರೆ, ರಕ್ತ ಒಳಗೇ ಹೆಪ್ಪುಗಟ್ಟಿದರೆ, ನರಗಳು ಇರುವ ಜಾಗ ಬದಲಾದರೆ ಇದನ್ನು ಸರಿಪಡಿಸುವಲ್ಲಿ ನಿಸ್ಸೀಮರಾಗಿರುವ ಅರಬಜ್ಜ ಒಂದೆರಡು ವಾರದಲ್ಲೇ ವಾಸಿಮಾಡುತ್ತಾರೆ. ಅಲ್ಲದೆ ಇಂತಹ ಸಮಸ್ಯೆಗಳಿಗೆ ಎಷ್ಟೋ ಆಸ್ಪತ್ರೆಗಳಲ್ಲಿ ಅಲೆದು ಲಕ್ಷಾಂತರ ರೂ. ಖರ್ಚು ಮಾಡಿಯೂ ಗುಣವಾಗದ ಅದೆಷ್ಟೋ ಜನರು ಇಲ್ಲಿ ಚಿಕಿತ್ಸೆ ಪಡೆದು ಗುಣಮುಖವಾಗಿರುವುದು ವಿಶೇಷ. ಈ ಕಾರಣದಿಂದಲೇ ಇಂದು ತೋಡುರು ಗ್ರಾಮ ನಾಟಿ ಔಷಧಿಗೆ ಹೆಸರಾಗಿರುವುದು.

 ಕೃಷಿಯಾಧಾರಿತ ಕುಟುಂಬ

ಕೃಷಿಯಾಧಾರಿತ ಕುಟುಂಬ

ಅರಬಜ್ಜ ವಿದ್ಯೆ ಕಲಿತವರಲ್ಲ. ಇವರದು ಕೃಷಿಯಾಧಾರಿತ ಕುಟುಂಬ. ಆದರೆ ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಈ ನಾಟಿ ಔಷಧಿ ನೀಡುವ ಕಾಯಕವನ್ನು ಸೇವೆಯಂತೆ ಮಾಡುತ್ತಿದ್ದಾರೆ. ತಮ್ಮ ಬಿಡುವಿನ ಸಮಯದಲ್ಲಿ ಮನೆಗೆ ಬರುವ ರೋಗಿಗಳಿಗೆ ಅಗತ್ಯ ಚಿಕಿತ್ಸೆಯನ್ನು ನೀಡುತ್ತಾರೆ. ದೇಹದ ಯಾವುದೇ ಭಾಗ ಉಳುಕಿದರೆ ನರಗಳು ಅದಲಿ ಬದಲಿಯಾಗಿ ನೋವು ಕೊಡುತ್ತವೆ. ಹೀಗಾದಾಗ ಯಾವ ಮೂಳೆ ಯಾವ ನರಗಳು ಎಲ್ಲಿರಬೇಕು ಎಂಬುದನ್ನು ತಿಳಿದುಕೊಂಡಿರುವ ಅವರು ಸೂಕ್ತವಾದ ರೀತಿಯಲ್ಲಿ ತಿಕ್ಕುವುದರ ಮೂಲಕ ಸರಿ ಪಡಿಸಿ ಕೊಡುತ್ತಾರೆ. ಇನ್ನು ಹೆಚ್ಚಿನ ಜನರಿಗೆ ಬಿದ್ದ ಸಂದರ್ಭದಲ್ಲಿ ಕೆಲವೊಂದು ಭಾಗದಲ್ಲಿ ರಕ್ತವು ಹೆಪ್ಪುಗಟ್ಟಿದ್ದು ತೊಂದರೆ ಕೊಡುತ್ತದೆ. ಅದನ್ನು ಸ್ಪರ್ಶದ ಮೂಲಕವೇ ಪತ್ತೆ ಹಚ್ಚುವ ಇವರು ಕೆಲವು ದಿನಗಳವರೆಗೆ ತಿಕ್ಕುವ ಮೂಲಕ ಗುಣ ಪಡಿಸುತ್ತಾರೆ.

 ವಯಸ್ಸಿಗೆ ತಕ್ಕಂತೆ ಮೂಳೆ ಮುರಿತಕ್ಕೂ ಚಿಕಿತ್ಸೆ

ವಯಸ್ಸಿಗೆ ತಕ್ಕಂತೆ ಮೂಳೆ ಮುರಿತಕ್ಕೂ ಚಿಕಿತ್ಸೆ

ಅವಘಡಗಳಲ್ಲಿ ಮೂಳೆಯೇನಾದರೂ ಮುರಿತಕ್ಕೊಳಗಾದರೆ ಅದಕ್ಕೂ ಚಿಕಿತ್ಸೆ ನೀಡಲಾಗುತ್ತದೆ. ಮುರಿತಕ್ಕೊಳಗಾದ ಕೈ ಅಥವಾ ಕಾಲಿನ ಆ ಭಾಗಕ್ಕೆ ಅಗತ್ಯ ಔಷಧಿಯನ್ನು ಲೇಪಿಸಿ ಬಳಿಕ ಬಟ್ಟೆಯನ್ನು ಸುತ್ತಲಾಗುತ್ತದೆ. ಬಳಿಕ ಬಿದಿರಿನ ಪಟ್ಟಿಗಳನ್ನು ಬಳಸಿ ಬಿಗಿಯಾಗಿ ಅಲುಗಾಡದ ರೀತಿ(ಆಸ್ಪತ್ರೆಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಬ್ಯಾಂಡೇಡ್ ಕಟ್ಟುವಂತೆ) ಕಟ್ಟಲಾಗುತ್ತದೆ. ಸಣ್ಣ ವಯಸ್ಸಿನವರಿಗೆ ಸ್ವಲ್ಪ ಬೇಗ ಅಂದರೆ ಸುಮಾರು ಎರಡ್ಮೂರು ತಿಂಗಳಿನಲ್ಲಿ ಆ ಮೂಳೆ ಕೂಡಿಕೊಳ್ಳುತ್ತದೆ. ಆದರೆ ವಯಸ್ಸಾದವರಿಗೆ ಸ್ವಲ್ಪ ಸಮಯ ಹಿಡಿಯುತ್ತದೆ. ನಿರ್ಧಿಷ್ಟ ದಿನಗಳವರೆಗೆ ಕಟ್ಟನ್ನು ಬಿಚ್ಚದೆ ಕೊಟ್ಟಿರುವ ಔಷಧವನ್ನು ಸೇವಿಸಬೇಕು. ಈ ಔಷಧವು ಮೂಳೆ ಜೋಡಣೆಯಾಗಿ ಗಟ್ಟಿಯಾಗಲು ಸಹಕರಿಸುತ್ತದೆ ಎನ್ನುತ್ತಾರೆ ಅರಬಜ್ಜ.

 ಔಷಧಕ್ಕಾಗಿ ಹೊರ ಜಿಲ್ಲೆಗಳಿಂದ ಬರುವ ರೋಗಿಗಳು

ಔಷಧಕ್ಕಾಗಿ ಹೊರ ಜಿಲ್ಲೆಗಳಿಂದ ಬರುವ ರೋಗಿಗಳು

ಅರಬಾ ಗೌಡರ ಬಳಿ ಕೇವಲ ಸುತ್ತಮುತ್ತಲಿನ ಹಳ್ಳಿಯಿಂದ ಮಾತ್ರವಲ್ಲದೆ, ಹೊರ ಜಿಲ್ಲೆ, ರಾಜ್ಯಗಳಿಂದಲೂ ರೋಗಿಗಳು ಔಷಧಿಗೆಂದು ಬರುತ್ತಾರೆ. ಔಷಧಿ ಪಡೆದವರು ಎಷ್ಟಾಯ್ತು ಎಂದು ಕೇಳಿದರೆ ಅದನ್ನು ನಾವು ಹೇಳುವುದಿಲ್ಲ ನಿಮ್ಮಿಷ್ಟ ಎಂದು ಬಿಡುತ್ತಾರೆ. ಅವರಾಗಿ ಎಷ್ಟೇ ಕೊಟ್ಟರೂ ಅದನ್ನು ಗೌರವದಿಂದ ಸ್ವೀಕರಿಸಿ ಮುಂದಿನ ಕಾರ್ಯದಲ್ಲಿ ತೊಡಗುತ್ತಾರೆ. ಸಮಯ ಸಿಕ್ಕಾಗಲೆಲ್ಲ ಕಾಡಿಗೆ ಹೋಗಿ ಅವಶ್ಯಕ ಗಿಡ ಮೂಲಿಕೆಯನ್ನು ತಂದು ಕುಟ್ಟಿ ಪುಡಿ ಮಾಡಿ ಸಂಗ್ರಹ ಮಾಡಿಕೊಳ್ಳುವುದು ಹವ್ಯಾಸ.

 ಗಿಡ ಮೂಲಿಕೆ , ತೈಲ ಮಿಶ್ರಣದಿಂದ ಔಷಧ

ಗಿಡ ಮೂಲಿಕೆ , ತೈಲ ಮಿಶ್ರಣದಿಂದ ಔಷಧ

ಉಳುಕಿದಾಗ ತಿಕ್ಕೋದಕ್ಕೆ ಸಾಕಷ್ಟು ಅನುಭವ ಬೇಕು. ಬೆಟ್ಟದಿಂದ ಗಿಡಮೂಲಿಕೆ ತಂದು ಅದನ್ನು ಅರೆದು ಕೆಲ ತೈಲಗಳನ್ನ ಮಿಶ್ರಣ ಮಾಡಿ ತಿಕ್ಕಬೇಕಾಗುತ್ತದೆ. ತೀವ್ರತೆಯ ಆಧಾರದ ಮೇಲೆ ದೇಹದ ಭಾಗಕ್ಕೆ ಜಾಗೃತೆಯಿಂದ ತಿಕ್ಕಬೇಕು. ತಿಕ್ಕಿಸಿ ಕೊಳ್ಳದೇ ಕೇವಲ ಲೇಪಿಸುವ ಔಷಧ ನೀಡಿದರೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಆದ್ದರಿಂದ ಇಲ್ಲಿಗೆ ಬಂದು ಸಮಸ್ಯೆ ಹೇಳಿ ಔಷಧಿ ಪಡೆಯುವುದು ಉತ್ತಮ ಎನ್ನುತ್ತಾರೆ ನಾಟಿ ವೈದ್ಯ ಅರಬಾ ಗೌಡ.

 ಅರಬಜ್ಜರನ್ನು ಭೇಟಿ ಮಾಡುವುದೇಗೆ?

ಅರಬಜ್ಜರನ್ನು ಭೇಟಿ ಮಾಡುವುದೇಗೆ?

ಇನ್ನು ನಾಟಿ ವೈದ್ಯರ ಬಳಿ ತೆರಳುವವರು ಕಾರವಾರದಿಂದ ಸ್ಥಳೀಯ ಸಾರಿಗೆ ಬಸ್ ಅಥವಾ ಟೆಂಪೋ ಮೂಲಕ ತೆರಳಿ ಮುದಗಾದಲ್ಲಿ ಇಳಿದುಕ್ಕೊಳ್ಳಬೇಕು. ಅಂಕೋಲಾದಿಂದ ಬರುವವರಿಗೆ ಕೆಲ ಬಸ್ ಗಳಿಗೆ ತೋಡುರಿನಲ್ಲಿ ನಿಲುಗಡೆ ಇಲ್ಲದ ಕಾರಣ ಅಮದಳ್ಳಿಯಲ್ಲಿ ಇಳಿದುಕೊಂಡು ಅಲ್ಲಿಂದ ಎರಡು ಕಿ.ಮೀ ದೂರದ ತೋಡೂರಿಗೆ ನಡೆದುಕೊಂಡು ಇಲ್ಲವೇ ಆಟೋ ಮೂಲಕ ತೆರಳಬಹುದಾಗಿದೆ.

ಅಲ್ಲದೆ ಇವರ ಈ ಕಾರ್ಯಕ್ಕೆ ಪತ್ನಿ ಹಾಗೂ ಮಕ್ಕಳು ಸಹಕಾರ ನೀಡುತ್ತಾರೆ. ಇವರು ಹೆಚ್ಚಿನ ಸಂದರ್ಭದಲ್ಲಿ ಇವರು ಇತರ ಕೆಲಸಗಳಿಗಾಗಿ ಬೇರೆಡೆ ಇರುವುದರಿಂದ ಔಷಧಕ್ಕೆ ಬರುವವರು ಮೊದಲೇ ಇವರನ್ನು ಸಂಪರ್ಕಿಸಿ ಸಮಯವನ್ನು ತಿಳಿದು ಬರ ಬೇಕಾಗುತ್ತದೆ. ಮಾಹಿತಿಗಾಗಿ ಇವರ ಮೊಬೈಲ್ ನಂಬರ್ 8884292056 ಸಂಪರ್ಕಿಸಬಹುದು.

 ಮಕ್ಕಳಿಲ್ಲದ ದಂಪತಿಗಳ ಆಶಾಕಿರಣ ಈ ನಾಟಿ ವೈದ್ಯೆ ಚನ್ನಪಟ್ಟಣದ ಲಕ್ಷ್ಮಮ್ಮ ಮಕ್ಕಳಿಲ್ಲದ ದಂಪತಿಗಳ ಆಶಾಕಿರಣ ಈ ನಾಟಿ ವೈದ್ಯೆ ಚನ್ನಪಟ್ಟಣದ ಲಕ್ಷ್ಮಮ್ಮ

English summary
Story of Araba Krishna Gowda, a Nati vaidya from Thoduru village, karwar Taluk. He gives treatment for bone fracture, bones twisting, know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X