ಅಂತ್ಯಕಾಣದ ಸಂಪುಟ ವಿಸ್ತರಣೆ ಸಂಕಟ: ಪಟ್ಟಿ ಬಿಡುಗಡೆ ಮುಂದೂಡಿಕೆ
ಬೆಂಗಳೂರು, ಆಗಸ್ಟ್ 19: ಯಡಿಯೂರಪ್ಪ ಸರ್ಕಾರದ ಸಂಪುಟ ವಿಸ್ತರಣೆ ಯಾವಾಗ ಎನ್ನುವ ಪ್ರಶ್ನೆಗೆ ಅಂತೂ ಉತ್ತರ ಸಿಕ್ಕಿ ದಿನ ನಿಗದಿಯಾದರೂ ಸಂಪುಟಕ್ಕೆ ಸೇರಲಿರುವ ಶಾಸಕರ ಪಟ್ಟಿ ಮಾತ್ರ ಬಿಡುಗಡೆಯಾಗಿಲ್ಲ.
ಹಲವು ದಿನಗಳಿಂದ ಸಂಪುಟ ವಿಸ್ತರಣೆಗೆ ಮುಹೂರ್ತ ಕೂಡಿ ಬಂದಿಲ್ಲ ಎನ್ನುವುದು ಎಲ್ಲರ ಆರೋಪವಾಗಿತ್ತು. ಇದೀಗ ದಿನಾಂಕವೂ ನಿಗದಿಯಾಗಿದೆ. ಇನ್ನೇನು 10-12 ತಾಸುಗಳೊಳಗಾಗಿ ಸಂಪುಟ ವಿಸ್ತರಣೆಯಾಗಲಿದೆ. ಆದರೆ ಹಿಂದಿನ ದಿನ ರಾತ್ರಿವರೆಗೂ ಸಚಿವರ ಪಟ್ಟಿ ಬಿಡುಗಡೆಯಾಗಿಲ್ಲ.
16 ಶಾಸಕರಿಗೆ ಸಿಎಂ ಯಡಿಯೂರಪ್ಪ ಕರೆ: ಯಾರ್ಯಾರು ಸಂಪುಟ ಸೇರಲಿದ್ದಾರೆ?
ಅರುಣ್ ಜೇಟ್ಲಿಯವರ ಆರೋಗ್ಯದ ಕುರಿತು ಏಮ್ಸ್ ಆಸ್ಪತ್ರೆಯು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ ಬಳಿಕ ಅವರ ಆರೋಗ್ಯದ ಕುರಿತು ಮಾಹಿತಿ ಪಡೆದು ನಂತರವಷ್ಟೇ ಸಚಿವರ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದರು. ಆದರೆ ಇದುವರೆಗೂ ಸಚಿವರ ಪಟ್ಟಿ ಹೊರಬಿದ್ದಿಲ್ಲ.
ಈಗಾಗಲೇ ರಾಜಭವನದ ಬಳಿ ತೀವ್ರ ಭದ್ರತೆ ಕಲ್ಪಿಸಲಾಗಿದೆ. 8 ಡಿಸಿಪಿ ನೇತೃತ್ವದಲ್ಲಿ 800ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ವಿಧಾನಸೌಧ ಹಾಗೂ ರಾಜಭವನದ ಎದುರು ಭದ್ರತೆ ಕಲ್ಪಿಸಲಾಗಿದೆ.
ಸಂಪುಟ ಸಂಕಟ: ಅಮಿತ್ ಶಾ ಪಟ್ಟಿಯಿಂದ ಶೆಟ್ಟರ್ ಸೇರಿ 6 ಮಂದಿ ಔಟ್
ಸರ್ಕಾರ ರಚನೆ ಮಾಡಿ ತಿಂಗಳಾಗುತ್ತಾ ಬಂದರೂ ಮಂತ್ರಿ ಮಂಡಲ ರಚನೆಯಾಗದ್ದಕ್ಕೆ ವಿಪಕ್ಷಗಳಿಂದ ಬಿಜೆಪಿ ತೀವ್ರ ಟೀಕೆಗಳನ್ನು ಎದುರಿಸುತ್ತಿದೆ. ಬಿಜೆಪಿ ಅವರದ್ದು ಏಕವ್ಯಕ್ತಿ , ಏಕಚಕ್ರಾಧಿಪತ್ಯದ ಸರ್ಕಾರ ಎಂದೆಲ್ಲಾ ಗೇಲಿ ಕೇಳಿಬರುತ್ತಿದೆ.
ಸಚಿವ ಸಂಪುಟ ವಿಸ್ತರಣೆ: ಆಪ್ತರಿಗೆ ಯಡಿಯೂರಪ್ಪ ಕೊಟ್ಟ ಸಂದೇಶ ಏನು?
ಸಂಭಾವ್ಯ ಸಚಿವರ ಪಟ್ಟಿ ಇಂತಿದೆ:
- ಬಿ. ಶ್ರೀರಾಮುಲು, ವಾಲ್ಮೀಕಿ
-ಆರ್. ಅಶೋಕ್, ಒಕ್ಕಲಿಗ
-ಕೆ.ಎಸ್. ಈಶ್ವರಪ್ಪ, ಕುರುಬ
- ಗೋವಿಂದ ಕಾರಜೋಳ, ದಲಿತ
-ಜಗದೀಶ್ ಶೆಟ್ಟರ್, ಲಿಂಗಾಯತ
- ಸುರೇಶ್ ಕುಮಾರ್, ಬ್ರಾಹ್ಮಣ
- ಡಾ. ಅಶ್ವತ್ಥ ನಾರಾಯಣ, ಒಕ್ಕಲಿಗ
- ಮಾಧುಸ್ವಾಮಿ, ಲಿಂಗಾಯತ
- ಕೋಟ ಶ್ರೀನಿವಾಸ ಪೂಜಾರಿ, ಬಿಲ್ಲವ
- ವಿ. ಸೋಮಣ್ಣ, ಲಿಂಗಾಯತ
- ಬಾಲಚಂದ್ರ ಜಾರಕಿಹೊಳಿ, ವಾಲ್ಮೀಕಿ
- ಬಸವರಾಜು ಬೊಮ್ಮಾಯಿ, ಲಿಂಗಾಯತ
- ಎಸ್. ಅಂಗಾರ, ದಲಿತ
- ಶಶಿಕಲಾ ಜೊಲ್ಲೆ(ಮಹಿಳೆ), ಲಿಂಗಾಯತ
- ಅಪ್ಪಚ್ಚು ರಂಜನ್, ಕೊಡವ
- ನಾಗೇಶ್(ಪಕ್ಷೇತರ), ದಲಿತ
- ರಾಜುಗೌಡ, ವಾಲ್ಮೀಕಿ
- ಸಿ.ಟಿ. ರವಿ/ಅರವಿಂದ್ ಲಿಂಬಾವಳಿ, ಒಕ್ಕಲಿಗ/ದಲಿತ
- ಚಂದ್ರಪ್ಪ, ದಲಿತ