ಮಿಂಚಿನ ನೋಂದಣಿಗೆ ದಾಖಲೆಗಳು ಏನೇನು ಬೇಕು?

Recommended Video

      Karnataka Elections 2018 : ಮಿಂಚಿನ ನೋಂದಣಿಗೆ ಬೇಕಾದ ದಾಖಲೆಗಳ ಬಗೆಗಿನ ಮಾಹಿತಿ | Oneindia Kannada

      ಬೆಂಗಳೂರು, ಏಪ್ರಿಲ್ 04: ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಮತದಾರರ ಪಟ್ಟಿಯಲ್ಲಿ ಇನ್ನು ಹೆಸರು ಸೇರಿಸದಿದ್ದವರು, ವರ್ಗಾವಣೆ, ತಿದ್ದುಪಡಿ, ಹೆಸರು ಸೇರ್ಪಡೆಗೆ ಎಲ್ಲಿ ಅರ್ಜಿ ಸಲ್ಲಿಸಬೇಕು ಎಂಬ ಗೊಂದಲ ಬೇಡ.

      ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

      ಹೊಸದಾಗಿ ಹೆಸರು ಸೇರಿಸಲು, ವರ್ಗಾವಣೆ, ತಿದ್ದುಪಡಿಗೆ ಚುನಾವಣಾ ಆಯೋಗ ಮತ್ತು ಬಿಬಿಎಂಪಿಯು ಇದೇ ಏ.8ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ 8278 ಮತಗಟ್ಟೆಗಳಲ್ಲಿ ಮಿಂಚಿನ ನೋಂದಣಿ ಅಭಿಯಾನವನ್ನು ಹಮ್ಮಿಕೊಂಡಿದೆ.

      ಮತದಾರರ ಪಟ್ಟಿಗೆ ಹೆಸರು ಸೇರಿಸಲು ಏ.14ರವರೆಗೆ ಕಾಲಾವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಏ.8 ರಂದು ಮಿಂಚಿನ ನೋಂದಣಿ ಕಾರ್ಯಕ್ರಮದ ಮೂಲಕ ಸಾರ್ವಜನಿಕರಿಗೆ ಹೆಸರು ಸೇರ್ಪಡೆ, ವರ್ಗಾವಣೆ ಮತ್ತು ತಿದ್ದುಪಡಿಗೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ವೋಟರ್ ಐಡಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ ಜನರು ಅಗತ್ಯ ದಾಖಲೆಗಳೊಂದಿಗೆ ತಮ್ಮ ವ್ಯಾಪ್ತಿಯ ಮತಗಟ್ಟೆಗಳಿಗೆ ತೆರಳಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಮತ್ತು ವರ್ಗಾವಣೆ ಅರ್ಜಿ ಸಲ್ಲಿಸಬಹುದಾಗಿದೆ.

      ಜನರು ಅಗತ್ಯ ದಾಖಲೆಗಳೊಂದಿಗೆ ತಮ್ಮ ವ್ಯಾಪ್ತಿಯ ಮತಗಟ್ಟೆಗಳಿಗೆ ತೆರಳಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಮತ್ತು ವರ್ಗಾವಣೆ ಅರ್ಜಿ ಸಲ್ಲಿಸಬಹುದಾಗಿದೆ.

      ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ 8728 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಇದಲ್ಲದೇ 1400ಕ್ಕಿಂತ ಹೆಚ್ಚು ಮತದಾರರಿರುವ ಕಡೆ 806 ಮತಗಟ್ಟೆಗಳನ್ನು ತೆರೆಯಲಾಗುತ್ತಿದೆ. ಈ ಎಲ್ಲ ಮತಗಟ್ಟೆಗಳಲ್ಲಿ ಏ.8ರಂದು ಮಿಂಚಿನ ನೋಂದಣಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

      ಮೊದಲ ಬಾರಿ ಹೆಸರು ಸೇರಿಸಲು ಬೇಕಿರುವ ದಾಖಲೆ

      ಮೊದಲ ಬಾರಿ ಹೆಸರು ಸೇರಿಸಲು ಬೇಕಿರುವ ದಾಖಲೆ

      18 ವರ್ಷ ಪೂರೈಸಿರುವವರು, ಸತತ ಆರು ತಿಂಗಳಿನಿಂದ ಒಂದೇ ಪ್ರದೇಶದಲ್ಲಿ ನೆಲೆಸಿರುವವರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅರ್ಹರು. ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ವಾಸ ಸ್ಥಳ ಬದಲಾಯಿಸುವವರು ನಮೂನೆ-6ರಲ್ಲಿ ಅರ್ಜಿ ಸಲ್ಲಿಸಬೇಕು. ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ವಾಸ ಸ್ಥಳ ದೃಢೀಕರಣ ಪ್ರತಿ, ಚಾಲನಾ ಪರವಾನಗಿ, ಪಡಿತರ ಚೀಟಿ, ಬಾಡಿಗೆ ಕರಾರು ಪತ್ರ, ಗ್ಯಾಸ್ ಸ್ವೀಕೃತಿ ಪತ್ರ, ವಿದ್ಯುತ್ ಬಿಲ್ ಪಾವತಿ ಪ್ರತಿ, ಆಧಾರ್ , ಬ್ಯಾಂಕ್ ಪಾಸ್‌ಬುಕ್ ಸೇರಿದಂತೆ ಇವುಗಳಲ್ಲಿ ಯಾವುದಾದರೊಂದು ದಾಖಲೆಯನ್ನು ಲಗತ್ತಿಸಬೇಕು.

      ಮತಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಏನು ಮಾಡಬೇಕು

      ಮತಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಏನು ಮಾಡಬೇಕು

      ಹೆಸರು ಇಲ್ಲ ಎಂಬುದನ್ನು ಮೊದಲು ಖಾತ್ರಿ ಪಡಿಸಿಕೊಳ್ಳಬೇಕು. ಕೈಬಿಟ್ಟು ಹೋಗಿದ್ದರೆ, ಹೊಸದಾಗಿ ನಮೂನೆ-6ರಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬೇಕು. ಅರ್ಜಿಯೊಂದಿಗೆ ಮತದಾರರ ಗುರುತಿನ ಚೀಟಿ ಲಗತ್ತಿಸಬೇಕು. ಗುರುತಿನ ಚೀಟಿ ಕಳೆದು ಹೋಗಿದ್ದರೆ, ಮೊಬೈಲ್ ಸಂಖ್ಯೆ ತಂದೆ-ತಾಯಿ ಅಥವಾ ಹೆಸರು ನಮೂದಿಸಿದರೆ ಗುರುತಿನ ಚೀಟಿಯ ಸಂಖ್ಯೆ ಲಭ್ಯವಾಗುತ್ತದೆ. ಮತದಾರರ ಪಟ್ಟಿಗೆ ಹೆಸರು ಸೇರಿಸಲು ಏ.14ರವರೆಗೆ ಕಾಲಾವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಏ.8 ರಂದು ಮಿಂಚಿನ ನೋಂದಣಿ ಕಾರ್ಯಕ್ರಮದ ಮೂಲಕ ಸಾರ್ವಜನಿಕರಿಗೆ ಹೆಸರು ಸೇರ್ಪಡೆ, ವರ್ಗಾವಣೆ ಮತ್ತು ತಿದ್ದುಪಡಿಗೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.

       ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮನೆ ಬದಲಿಸಿದ್ದರೆ?

      ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮನೆ ಬದಲಿಸಿದ್ದರೆ?

      ನಮೂನೆ 8ಎ ಸಲ್ಲಿಸಬೇಕು. ಬಾಡಿಗೆ ಕರಾರುಪತ್ರ ಅಥವಾ ಇನ್ನಿತರೆ ವಾಸಸ್ಥಳದ ದಾಖಲೆಗಳನ್ನು ಸಲ್ಲಿಸಿ, ವಿಳಾಸ ಬದಲಾವಣೆ ಮಾಡಿಕೊಳ್ಳಬಹುದು. ಮಹಿಳೆಯರು ಮದುವೆಯಾಗಿ ಪತಿಯ ಮನೆ ಸೇರಿರುತ್ತಾರೆ. ಇಂಥ ಸಂದರ್ಭದಲ್ಲಿ ಮಹಿಳೆಯರು ನಮೂನೆ-6 ನ್ನು ಭರ್ತಿ ಮಾಡಿ, ಪತಿಯ ಮತದಾರರ ಗುರುತಿನ ಚೀಟಿ, ವಿವಾಹ ನೋಂದಣಿ ಪತ್ರ, ಮದುವೆ ಆಹ್ವಾನ ಪತ್ರಿಕೆ ಸಲ್ಲಿಸಿ ಹೆಸರು ಸೇರಿಸಬಹುದು. ವೋಟರ್ ಐಡಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ ಜನರು ಅಗತ್ಯ ದಾಖಲೆಗಳೊಂದಿಗೆ ತಮ್ಮ ವ್ಯಾಪ್ತಿಯ ಮತಗಟ್ಟೆಗಳಿಗೆ ತೆರಳಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಮತ್ತು ವರ್ಗಾವಣೆ ಅರ್ಜಿ ಸಲ್ಲಿಸಬಹುದಾಗಿದೆ.

      18 ವರ್ಷವಾಗಿದ್ದು, ದಾಖಲೆಗಳಿಲ್ಲದಿದ್ದರೆ ಮತದಾನ ಹಕ್ಕು ಪಡೆಯುವುದು ಹೇಗೆ?

      18 ವರ್ಷವಾಗಿದ್ದು, ದಾಖಲೆಗಳಿಲ್ಲದಿದ್ದರೆ ಮತದಾನ ಹಕ್ಕು ಪಡೆಯುವುದು ಹೇಗೆ?

      ಹೊಸದಾಗಿ ಹೆಸರು ಸೇರಿಸಲು ನಮೂನೆ 6-ರಲ್ಲಿ ಅರ್ಜಿ ಸಲ್ಲಿಸಬೇಕು. ಶಾಲಾ ಕಾಲೇಜಿನಲ್ಲಿ ನೀಡಿರುವ ಗುರುತಿನ ಚೀಟಿ, ಜನನ ಪ್ರಮಾಣ ಪತ್ರ, ತಂದೆ-ತಾಯಿ ಅಥವಾ ಪೋಷಕರ ಮತದಾರರ ಗುರುತಿನ ಚೀಟಿಯ ಪ್ರತಿ, ಒಂದು ಭಾವಚಿತ್ರ ಅರ್ಜಿಯೊಂದಿಗೆ ಸಲ್ಲಿಸಬೇಕು. ಅರ್ಜಿದಾರರು ಭರ್ತಿ ಮಾಡಿದ ಅರ್ಜಿಯ ದ್ವಿಪ್ರತಿ ಸಲ್ಲಿಸುವುದನ್ನು ಮರೆಯಬಾರದು.

      ಮತಕ್ಷೇತ್ರದ ಬದಲಾವಣೆ ನಮೂನೆ 6ರಲ್ಲೇ ಅರ್ಜಿ ಸಲ್ಲಿಸಬಹುದು

      ಮತಕ್ಷೇತ್ರದ ಬದಲಾವಣೆ ನಮೂನೆ 6ರಲ್ಲೇ ಅರ್ಜಿ ಸಲ್ಲಿಸಬಹುದು

      ಒಂದು ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ಮನೆ ಬದಲಿಸಿರುವವರು ಈ ಹಿಂದಿನ ಕ್ಷೇತ್ರದ ಮತದಾರರ ಪಟ್ಟಿಯಲ್ಲಿನ ಹೆಸರು ತೆಗೆಸಲು ಅಲ್ಲಿಗೆ ತೆರಳಿ ನಮೂನೆ-7ನ್ನು ಸಲ್ಲಿಸಬೇಕಿಲ್ಲ. ಅರ್ಜಿ ನಮೂನೆ 6ರಲ್ಲಿಯೇ ಹಿಂದಿನ ಕ್ಷೇತ್ರದ ಮತದಾರರ ಪಟ್ಟಿಯಲ್ಲಿನ ಹೆಸರು ತೆಗೆಯಬಹುದೆಂದು ಸ್ವಯಂ ಘೋಷಣೆ ಮಾಡಿಕೊಳ್ಳಲು ಅವಕಾಶವಿದೆ. ನಮೂನೆ 7 ಎಂದರೆ ಹೆಸರು ಎರಡು ಕ್ಷೇತ್ರಗಳಲ್ಲಿದ್ದರೆ, ಒಂದು ಕಡೆ ಹೆಸರು ತೆಗೆಸಲು ಭರ್ತಿ ಮಾಡಿ ಸಲ್ಲಿಸಬೇಕಾದ ಅರ್ಜಿಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+